ಪದ್ಯದ ರೂಪದಲ್ಲಿ ಕನ್ನಡ ವರ್ಣಮಾಲೆಯನ್ನು ಕಲಿತರೆ ಹೇಗೆ?

ಪದ್ಯದ ರೂಪದಲ್ಲಿ ಕನ್ನಡ ವರ್ಣಮಾಲೆಯನ್ನು ಕಲಿತರೆ ಹೇಗೆ?

“ಒಂದು ಎರಡು ಬಾಳೆಲೆ ಹರಡು, ಮೂರು ನಾಲ್ಕು ಅನ್ನ ಹಾಕು” ನಮ್ಮಲ್ಲಿ ಹೆಚ್ಚಿನವರು ಒಂದರಿಂದ ಹತ್ತರವರೆಗೆ ಸಂಖ್ಯೆಯನ್ನು ಕಲಿತಿದ್ದೇ ಹೀಗೆ. ಪದ್ಯದ ಮೂಲಕ ಕಲಿತ ಹೆಚ್ಚಿನ ಪಾಠಗಳು ನಮ್ಮ ತಲೆಯಲ್ಲಿ ಹಾಗೆಯೇ ಉಳಿದು ಹೋಗುತ್ತವೆ. ಇದಕ್ಕೆ ಕಾರಣ ಮೋಜು ಮಸ್ತಿ ಮಾಡುತ್ತ ರಾಗದಲ್ಲಿ ಕಲಿತ ರೀತಿ. ಆದರೆ, ಈಗಿನ ಕಾಲದ ಮಕ್ಕಳನ್ನು ಒಂದು ಕಡೆ ಕೂರಿಸಿ ಅವರಿಗೆ ಪಾಠ ಹೇಳಿಕೊಡುವುದು ಎಂದರೆ ಅಪ್ಪ ಅಮ್ಮನಿಗೆ ದೊಡ್ಡ ಸಾಹಸವೇ. ಅದರಲ್ಲೂ 10 ವರ್ಷದೊಳಗಿನ ಮಕ್ಕಳನ್ನು ಹಿಡಿದು ಒಂದು ಕಡೆ ಕೂರಿಸುವುದೆಂದರೆ ‘ಕಪ್ಪೆಗಳನ್ನು ಹಿಡಿದು ಕೊಳಗಕ್ಕೆ ತುಂಬಿದಂತೆ’. ಒಂದೊಮ್ಮೆ ಅವರನ್ನು ಕೂರಿಸಿದರೂ ಓದಿಸುವುದು ಕಷ್ಟ. ಹಾಗಾದರೆ ಈ ಪುಟಾಣಿ ಮಕ್ಕಳಿಗೆ ಕನ್ನಡ ವರ್ಣಮಾಲೆಗಳಷ್ಟನ್ನೂ ಕಲಿಸುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರವೇ ಜಿ.ಆನಂದ್‌ ಅವರು ಬರೆದ “ಚಿಕ್ಕು ಬುಕ್ಕು” ಪುಸ್ತಕ.

ಚಿಣ್ಣರ ಈ ಪುಸ್ತಕದಲ್ಲಿ ಬಣ್ಣ ಬಣ್ಣದ ಚಿತ್ರಗಳಿದ್ದು ಪ್ರತಿಯೊಂದು ಅಕ್ಷರವನ್ನೂ ಪದ್ಯದ ರೂಪದಲ್ಲಿ ಹೇಳಲಾಗಿದೆ. ಆಟವಾಡುತ್ತಾ ವರ್ಣಮಾಲೆಯನ್ನು ಮತ್ತು ಕನ್ನಡ ಪದಗಳನ್ನು ಮಕ್ಕಳಿಗೆ ಪರಿಚಿಸುವ ಉದ್ದೇಶದಿಂದಲೇ ಹರಿವು ಬುಕ್ಸ್‌ ಈ ಪುಸ್ತಕವನ್ನು ಪ್ರಕಾಶನ ಮಾಡಿದೆ. 3 ವರ್ಷದಿಂದ 8 ವರ್ಷದ ಮಕ್ಕಳಿಗೆ ಈ ಪುಸ್ತಕ ಬಹಳ ಉಪಯೋಗಕಾರಿ. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಇದೊಂದು ಒಳ್ಳೆಯ ಪುಸ್ತಕ. ಹಾಗೆಯೇ, ಒಳ್ಳೆಯ ಗುಣಮಟ್ಟದ ಮುದ್ರಣ ಮಾಡಿರುವುದರಿಂದ, ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡುವುದಕ್ಕೂ ಇದು ತಕ್ಕನಾದ ಪುಸ್ತಕವಾಗಿದೆ.  

ಕೆಳಗಿನ ಚಿತ್ರದಲ್ಲಿ ಕಾಣುವಂತೆಯೇ ಇಡೀ ಪುಸ್ತಕದಲ್ಲಿ ಕನ್ನಡ ವರ್ಣಮಾಲೆಯನ್ನು ಚಂದದ ಪದ್ಯದ ರೂಪದಲ್ಲಿ ಹೇಳಲಾಗಿದೆ 👇🏻

“ಚಿಕ್ಕು ಬುಕ್ಕು” ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ

https://harivubooks.com/products/chikku-bukku-kannada-childrens-book

ಹರಿವು ಬುಕ್ಸ್‌ ಪ್ರಕಾಶನದ ಮಕ್ಕಳ ಪುಸ್ತಕಗಳು

ರಿಕ್ಕು ರಿಕ್ಷಣ್ಣ – https://harivubooks.com/products/rikku-rikshanna-kids-book-kannada

ಚಿನ್ನಿಯ ರಜಾಯಿ – https://harivubooks.com/products/chinniya-rajaayi-kids-book-kannada

ಅಳಿಲು ಸೇವೆ – https://harivubooks.com/products/alilu-seeve-kids-book-kannada

ಇತರೆ ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com

Back to blog