ತಾಂತ್ರಿಕ ಪ್ರಪಂಚಕ್ಕೆ ಒಂದು ಅನನ್ಯವಾದ ಕೊಡುಗೆ : ತಂತ್ರಸಾರ ಸಂಗ್ರಹ. ಭಗವಂತನೆ ನುಡಿದ ತಂತ್ರಸಾರದ ಸಂಗ್ರಹ. ಇಲ್ಲಿದೆ ವೈಷ್ಣವ ತಂತ್ರದ ವಿಶ್ವರೂಪ ದರ್ಶನ. ವಾಮನ ತ್ರಿವಿಕ್ರಮನಾದ ಬಗೆ ! ತಾಂತ್ರಿಕ ಪರಂಪರೆಯ ಒಂದು ವಿಸ್ಮಯ. 'ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್'| ಸಾತ್ವಿಕ ತಂತ್ರಕ್ಕೆ ಸಂಬಂಧ ಪಟ್ಟ ಎಲ್ಲವೂ ಇಲ್ಲಿದೆ-ದುರ್ಗಮವಾದ ಪ್ರತಿಮಾಶಿಲ್ಪ. ವಾಸ್ತುಶಿಲ್ಪ ಕೂಡ. ಇಲ್ಲಿ ಇಲ್ಲದ್ದು ಇನ್ನೆಲ್ಲಿಯೂ ಇರದು. ಇದು ತಾಂತ್ರಿಕರ ಚಿಂತಾಮಣಿ. ಶಿಲ್ಪಿಗಳ ಕಲ್ಪತರು.