ಡಾ. ವೆರಿಯರ್ ಎಲ್ವಿನ್ (1902-1964) ಮಣೆಯ ಕ್ರೈಸ್ತ ಸೇವಾ ಸಂಘದಲ್ಲಿ ಸೇವೆ ಸಲ್ಲಿಸಲು ಭಾರತಕ್ಕೆ ಬಂದ ಕ್ರೈಸ್ತ ಧರ್ಮ ಪ್ರಚಾರಕದಲ್ಲಿ ಒಬ್ಬರು, ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಅವರು ಮಧ್ಯಭಾರತದ ಆದಿವಾಸಿ ಹಳ್ಳಿಯೊಂದರಲ್ಲಿ ನೆಲೆಸಿ ತಮ್ಮ ಬದುಕಿನ ಪರಮ ಧೈಯವೆಂಬಂತೆ ಆದಿವಾಸಿಗಳ ಸೇವಾಕಾರ್ಯ ಕೈಗೊಂಡರು. ಅದು ಅವರ ಬದುಕಿನ ಪ್ರಮುಖ ತಿರುವು.
ಒಳ್ಳೆಯ ಬರಹಗಾರರಾಗಿರುವ ಡಾ. ವೆರಿಯರ್ ಎಲ್ವಿನ್ ಅವರ ಮಾನವಶಾಸ್ತ್ರ ಅಧ್ಯಯನ ಗ್ರಂಥಗಳು ಹಾಗೂ ಆದಿವಾಸಿಗಳ ಮೌಖಿಕ ಪರಂಪರೆಯ ಸಂಗ್ರಹಗಳು ಆದಿವಾಸಿ ಸಂಸ್ಕೃತಿಯನ್ನು ಪರಿಚಯಿಸುವ ಅತ್ಯುತ್ತಮ ದಾಖಲೆಗಳಾಗಿವೆ. ತಾವು ಕೇಳಿ ಹಾಗೆಯೇ ಬರೆದುಕೊಂಡ ಆದಿವಾಸಿ ಕಥೆಗಳಲ್ಲಿ ಕೆಲವನ್ನು ಎಲ್ವಿನ್ ಸ್ವತಃ ತಾವೇ ಈ ಸಂಕಲನಕ್ಕೆ ಆಯ್ಕೆ ಮಾಡಿದ್ದಾರೆ. ಕೆಲವು ಕಥೆಗಳು ನೀತಿಬೋಧಕ ವಿಷಯ ಹೊಂದಿದ್ದರೂ ಅವು ಆದಿವಾಸಿಗಳ ಸ್ವತಂತ್ರ ಹಾಗೂ ವಿಶಿಷ್ಟ ಬದುಕನ್ನು ಅವರ ಸುಂದರ ಪರಿಸರದ ಜೊತೆಗೆ ಚಿತ್ರಿಸುವುದರ ಮೂಲಕ ಹೊಚ್ಚಹೊಸದಾದ ಆಕರ್ಷಕ ಕಥೆಗಳಾಗಿ ನಮ್ಮ ಮನ ಸೆಳೆಯುತ್ತವೆ.