ಕನಕದಾಸರ ಬಗೆಗೆ ಹಿಂದೆ ಒಂದು ಪದ್ಯ ಬರೆದಿದ್ದೆ- 'ಕನಕದಾಸರ ಮನೆಗೆ ಕನ್ನ ಹಾಕಿದ ಕಳ್ಳ ಕನಕ ಸಿಗಲಿಲ್ಲ' ಹೌದು, ದಾಸರ ಮನೆಗೆ ಕನ್ನ ಹಾಕಿದರೆ ಕನಕ ಸಿಗುತ್ತದೆಯೊ ಅವರೆ ಅಪ್ಪಟ ಕನಕ. ಕನಕದಾಸರು ಏರಿದ ಎತ್ತರ ಬಹಳ ದೊಡ್ಡದು. ಅವರು ಕನ್ನಡ ವಾಜ್ಜಯಕ್ಕೆ ವಿಶೇಷರ್ತ, ದಾಸಸಾಹಿತ್ಯಕ್ಕೆ ಜಾನಪದ ಸೊಬಗು ನೀಡಿದವರು: ಹರಿದಾಸಪಂಥದ ಆಧಾರಸ್ತಂಭವಾದ ಮಹಾನ್ ಪ್ರವಾದಿಗಳಲ್ಲೊಬ್ಬರು.