ಹೂಡಿಕೆದಾರರ ಕೈಪಿಡಿ ಭಾಗ -1

ಹೂಡಿಕೆದಾರರ ಕೈಪಿಡಿ ಭಾಗ -1

Rs. 160.00
Skip to product information
ಹೂಡಿಕೆದಾರರ ಕೈಪಿಡಿ ಭಾಗ -1
ಹೂಡಿಕೆದಾರರ ಕೈಪಿಡಿ ಭಾಗ -1
Chandrashekar Madabhavi
Publisher - ಸಾವಣ್ಣ ಪ್ರಕಾಶನ
Type - Paperback
Pages - 108
- Free Shipping Above ₹400

- Cash on Delivery (COD) Available*
Rs. 160.00
Shipping calculated at checkout.

Pickup available at Harivu Books New Shop

Usually ready in 24 hours

View store information

ಹೂಡಿಕೆದಾರರ ಕೈಪಿಡಿ ಭಾಗ -1

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಹಣವನ್ನು ಕೇವಲ ಸಂಪಾದಿಸುವುದಲ್ಲ,

ಅದು ನಿಮಗಾಗಿ ದುಡಿಯುವಂತೆ ಮಾಡುವುದು ಹೇಗೆ?

ಈ ಪುಸ್ತಕವು ಹಣವನ್ನು ಕೇವಲ ಸಂಪಾದಿಸುವ ಹಂತವನ್ನು ದಾಟಿ, ಅದನ್ನು ಜಾಣ್ಮೆಯಿಂದ ಉಳಿಸಿ, ಬೆಳೆಸಿ ಮತ್ತು ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವ ಕಲೆಯನ್ನು ನಿಮಗೆ ಕಲಿಸುತ್ತದೆ. ಇಂದಿನ ಕಾಲದಲ್ಲಿ ಕೇವಲ ದುಡಿಯುವುದರಿಂದ ಅಥವಾ ಒಂದೇ ಆದಾಯದ ಮೂಲದ ಮೇಲೆ ನಂಬಿಕೆ ಇಡುವುದರಿಂದ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಸಾಧ್ಯವಿಲ್ಲ. ದುಡಿದ ಹಣವನ್ನು ಸರಿಯಾದ ದಿಕ್ಕಿನಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.

ಆದರೆ “ಹೂಡಿಕೆ” ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದೇ ಬ್ಯಾಂಕ್ ಎಫ್ಡಿ ಅಥವಾ ಬಂಗಾರ. ನಿಜಕ್ಕೂ ನಮ್ಮ ಮುಂದೆ ಇನ್ನೂ ಅನೇಕ ಲಾಭದಾಯಕ ಮತ್ತು ಪರಿಣಾಮಕಾರಿ ಆಯ್ಕೆಗಳು ಇವೆ ಎಂಬುದು ನಿಮಗೆ ಗೊತ್ತೇ?

ಸ್ಥಿರ ಠೇವಣಿಗಳಿಂದ ಹಿಡಿದು ರಾಷ್ಟ್ರೀಯ ಉಳಿತಾಯ ಪಮಾಣಪತಗಳು, ಕಾರ್ಪೊರೇಟ್ ಎಫ್ಡಿ, ಎನ್ಸಿಡಿ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ, ವಾರ್ಷಿಕ ವೇತನ ಯೋಜನೆ, ಪಿಂಚಿಣಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಮುಂತಾದವುಗಳಲ್ಲಿ ಸುರಕ್ಷಿತವಾಗಿ ಹಣವನ್ನು ಹೂಡುವ ಮಾರ್ಗಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ನಿಮ್ಮ ಜೀವನದ ಗುರಿಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ರೂಪಿಸುವುದಕ್ಕೂ ಈ ಪುಸ್ತಕ ದಾರಿ ತೋರಿಸುತ್ತದೆ.

ನೀವು ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಟ್ಟ ಯುವಕರಾಗಿರಲಿ, ನಿವೃತ್ತಿಯ ಹಾದಿಯಲ್ಲಿರುವ ಹಿರಿಯರಾಗಿರಲಿ ಅಥವಾ ಗೃಹಿಣಿಯರಾಗಿರಲಿ - ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಈ ಪುಸ್ತಕ ಒಂದು ವಿಶ್ವಾಸಾರ್ಹ ಕೈಪಿಡಿಯಂತೆ ಕೆಲಸ ಮಾಡುತ್ತದೆ.

ನೀವೂ ಕೂಡ ಈ ಪುಸ್ತಕವನ್ನು ಓದಿ, ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಇಂದೇ ಆರಂಭಿಸಿ!

 

ಶುಭ ಲಾಭವಾಗಲಿ!


You may also like

Subscribe to our emails

Be the first to know about new collections and special offers.