Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಸಂಸ್ಕೃತದ ರೂಪಕಸಾಹಿತ್ಯವು ಜಗತ್ತಿನ ಎಲ್ಲ ಭಾಷೆಗಳ ದೃಶ್ಯಕಾವ್ಯ ಪ್ರಪಂಚದಲ್ಲಿಯೇ ಅನನ್ಯ ಸ್ಥಾನವನ್ನು ಗಳಿಸಿದೆ. ಈ ಪ್ರಕಾರದಲ್ಲಿ ಪ್ರಹಸನವೆಂಬ ಪ್ರಭೇದಕ್ಕೆ ತನ್ನದೇ ಆದ ಮಹತ್ವವಿದೆ. ಸಕಲಜನರಿಗೂ ಇಷ್ಟವಾಗುವ ಹಾಸ್ಯರಸವೇ ಇಲ್ಲಿ ತಾಂಡವಿಸುವ ಕಾರಣ ಇದಕ್ಕಿರುವ ಪ್ರಹಸನವೆಂಬ ಹೆಸರು ಅನ್ವರ್ಥವೇ ಆಗಿದೆ. ಅಲ್ಲದೆ ಇಲ್ಲಿಯ ಸಾಮಾಜಿಕಮೌಲ್ಯವೂ ಮಿಗಿಲು.
ಇಂಥ ವಿಶಿಷ್ಟವಾದ ಸಾಹಿತ್ಯ ಪ್ರಕಾರವು ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದವಾಗಿ ಬಂದಿಲ್ಲ. ಈ ಕೊರತೆಯನ್ನು ಕೆಲಮಟ್ಟಿಗೆ ತೀರಿಸುವಂತೆ ಪ್ರಕೃತ ಕನ್ನಡಿಸಲ್ಪಟ್ಟ ಮೂರು ಸಂಸ್ಕೃತ ಪ್ರಹನನಗಳು ಗಮನಾರ್ಹವೆನಿಸಿವೆ. ಮಾತ್ರವಲ್ಲ, ಇವೆಲ್ಲವೂ ಮೊತ್ತಮೊದಲಬಾರಿಗೆ ಕನ್ನಡಕ್ಕೆ ಬರುತ್ತಿರುವ ಕಾರಣ ಈ ಪ್ರಕಲ್ಪಕ್ಕೆ ಐತಿಹಾಸಿಕ ಮಹತ್ತ್ವವೂ ಇದೆ. ಅಲ್ಲದೆ ಇವುಗಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮಹತ್ತ್ವವೂ ಗಣನೀಯ. ಇದಕ್ಕೆಲ್ಲ ಶಿಖರಪ್ರಾಯವಾಗಿ ಅನುವಾದಕರು ಬರೆದ ವಿಸ್ತ್ರತವೂ ತಲಸ್ಪರ್ಶಿಯೂ ಆದ ಪ್ರಸ್ತಾವನೆಯು ಸ್ವತಂತ್ರ ಸಂಶೋಧನಪ್ರಬಂಧದ ಒಳನೋಟಗಳನ್ನು ಹೊಂದಿದ್ದು ಭಾರತೀಯರಂಗಭೂಮಿಯ, ನಾಟ್ಯ-ನೃತ್ಯಕಲೆಗಳ ಗಂಭೀರಾಸಕ್ತರಿಗೂ ಬೋಧಪ್ರದವೆನಿಸಿದೆ. ಜೊತೆಗೆ ಈ ಅನುವಾದಗಳ ಭಾಷಾಸ್ವಾರಸ್ಯವೂ ಮನನೀಯ.
Be the first to know about new collections and special offers.