Dr. Shruti. B. R.
ಜ಼ೀರೋ ಬ್ಯಾಲೆನ್ಸ್
ಜ಼ೀರೋ ಬ್ಯಾಲೆನ್ಸ್
Publisher -
- Free Shipping Above ₹250
- Cash on Delivery (COD) Available
Pages - 70
Type - Paperback
ಒಂದು ಜೊತೆ ಪಾದದ ಸುತ್ತಾ
ಶ್ರುತಿ ಬಿ. ಆರ್. ವೃತ್ತಿಯಿಂದ ವಾಣಿಜ್ಯ ತೆರಿಗೆ ಅಧಿಕಾರಿ, ಪ್ರವೃತ್ತಿಯಿಂದ ಅಪ್ಪಟ 'ಕವಿ. ವೃತ್ತಿ ಪ್ರವೃತ್ತಿ ಎರಡೂ ಕೂಡ ಯಶಸ್ವಿ ಬದುಕಿನಲ್ಲಿ ಗೆಲ್ಲಲೇಬೇಕಾದ ಸಾಧ್ಯತೆಗಳು, ಕವಿತೆಗಳ ಕ್ಷೇತ್ರವನ್ನು ಕವಯಿತ್ರಿ ಗಂಭೀರವಾಗಿ ಆರಿಸಿಕೊಂಡಿದ್ದಾರೆ ಎನ್ನುವುದಕ್ಕೆ ಇಲ್ಲಿನ ಕವಿತೆಗಳೆ ಸಾಕ್ಷಿ.
ಹೂವಿನ ಚೆಂದವನ್ನು ಧನ್ಯತೆಯಲ್ಲಿ ಬೀಗಿ ವರ್ಣಿಸುವ ಕವಿ ಬೆರಳಿಗೆ ಮುಳ್ಳು ಚುಚ್ಚಿ ಅದು ಚೆಲ್ಲುವ ಒಂದು ಹನಿ ಮುತ್ತಿನಂತಹ ರಕ್ತಬಿಂದುವನ್ನೂ ಸಹ ಗಮನಿಸಬೇಕು. ಆ ರಕ್ತದ ಬಿಂದು ವಿವಿಧ ವರ್ಗ, ವರ್ಣ, ಲಿಂಗಗಳಲ್ಲಿನ ಶರೀರದಲ್ಲಿ ಅಡಗಿರುವ ಕ್ರಮ, ದುಮದುಮನೆ ಒಳಗೇ ಕುದಿಯುವ ಕ್ರಮವನ್ನೂ ಸಹ ಅರಿತಿರಬೇಕು. ಹುಟ್ಟಿನ ಕಾರಣಕ್ಕೆ ಜಾತಿ, ಸಾಮಾಜಿಕ ಸ್ಥಾನ ಲಭ್ಯವಾಗಿರುವ ಚರಿತ್ರೆಯನ್ನೂ ಅರಿತಿರಬೇಕು. ಈ ಎಲ್ಲಾ ಚಲನವಲನಗಳನ್ನು ಶ್ರುತಿಯವರ ಕಾವ್ಯ ದಾಖಲಿಸುತ್ತಿದೆ. ಗದ್ಯದ ಕ್ರಮದಲ್ಲಲ್ಲ ಪದ್ಯದ ಕ್ರಮದಲ್ಲಿ,
ಶ್ರುತಿ ಅವರ ಕಾವ್ಯದಲ್ಲಿ ವೇಗವಾಗಿ ಪ್ರವಹಿಸಿ ಎಲ್ಲರನ್ನೂ ತಲುಪಿ ಮೆಚ್ಚಿಸಬೇಕೆಂಬ ಹಠವಿಲ್ಲ. ತಾನು ನಿಂತ ವರ್ತಮಾನ ಹಾಗೂ ಭವಿಷ್ಯವನ್ನು ಕಾಣಬಲ್ಲ ಮುನ್ಸೂಚಿ ನೋಟಗಳಿವೆ. ಉದಾಹರಣೆಗೆ 'ಅಕ್ಕನ ಮೊಹೆಂಜೊದಾರೋ' ಕವಿತೆಯಲ್ಲಿ ತಂಗಿಯ ಓದುವ ಪಠ್ಯಕ್ರಮ, ತಾನು ಕಾಣಲೆತ್ನಿಸುವ ಹೆಣ್ಣಿನ ಚರಿತ್ರೆಯ ಕ್ರಮವನ್ನು ಗುರುತಿಸಬಹುದು. ಇದುವರೆಗಿನ ಗತದ ನಾಗರೀಕತೆಗಳ ಮೂಲೆ, ಮುಡುಕುಗಳ ಹುಡುಕುವ ಕ್ರಮದಲ್ಲಿ ಅವಳ ಚರಿತ್ರೆಯನ್ನೂ ಹುಡುಕಿದ್ದಾರೆಯೇ ಎಂಬ ಪ್ರಶ್ನೆ ಹೆಣ್ಣಿನ ಚರಿತ್ರೆ ಎಲ್ಲಿಂದ ಆರಂಭವಾಗಬೇಕಿತ್ತು ಎಂಬುದರ ಕಡೆ ಗಮನ ಸೆಳೆಯುತ್ತದೆ. 'ಒಂದು ಜೊತೆ ಪಾದ' ಎಂಬ ಕವಿತೆಯಲ್ಲಿಯೂ ಕೂಡ ಪಾದಗಳ ಜೊತೆಯಲ್ಲಿಯೆ ಸಮಾಜದ ವಿವಿಧ ವರ್ಗದ ಶೋಧವೊಂದು ಆರಂಭವಾಗುತ್ತದೆ.
ಮೊದಲ ಸಂಕಲನವಾದರೂ ವಸ್ತುಗಳ ಆಯ್ಕೆ, ಆಯ್ಕೆಯಿಂದ ತೊಡಗಿಸಿಕೊಳ್ಳುವ ಶೋಧದ ಕ್ರಮಗಳಿಂದಲೇ ಇಲ್ಲಿನ ಕವಿತೆಗಳು ಗಮನ ಸೆಳೆಯುತ್ತವೆ. ನಾಳಿನ ಒಳ್ಳೆಯ ಕವಿಯಾಗುವ ಎಲ್ಲಾ ಸಾಧ್ಯತೆಗಳನ್ನು ಇಲ್ಲಿನ ಕವಿತೆಗಳು ಒಳಗೊಂಡಿವೆ ಎಂದು ಹೇಳಲು ಖುಷಿಯಾಗುತ್ತದೆ.
ಶ್ರುತಿ ಅವರಿಗೆ ಶುಭಕೋರುತ್ತಾ
ಡಾ. ಎಚ್. ಎಲ್. ಪುಷ್ಪಾ ಬೆಂಗಳೂರು
Share
Subscribe to our emails
Subscribe to our mailing list for insider news, product launches, and more.