ನಮ್ಮ ಬಗ್ಗೆ

‘ಹರಿವು’ ಪರಿಚಯ

ಕನ್ನಡ ಅನುವಾದ ಹಾಗೂ ಡಬ್ಬಿಂಗ್‌ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು, ಉತ್ಸಾಹಿ ಯುವಕರ ತಂಡವೊಂದು 2018 ರಲ್ಲಿ ಹುಟ್ಟುಹಾಕಿದ ಕಂಪನಿಯೇ ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್. ಕಂಪನಿ ಆರಂಭಿಸಿದ ದಿನದಿಂದ ಸಿನೆಮಾ, ಧಾರಾವಾಹಿ ಹಾಗೂ ಡಾಕ್ಯುಮೆಂಟರಿಗಳ ಡಬ್ಬಿಂಗ್‌ನಲ್ಲಿ ನಮಗೆ ದೊಡ್ಡ ಅನುಭವ ದೊರೆಯಿತು. ಜೊತೆಗೆ ಕನ್ನಡ ಅನುವಾದದ ಕೆಲಸದಲ್ಲೂ ಮೈಲಿಗಲ್ಲುಗಳನ್ನು ಹುಟ್ಟುಹಾಕಲು ಸಾಧ್ಯವಾಯಿತು. ಹೀಗೆ, ಕನ್ನಡ ನುಡಿಯ ಸುತ್ತ ಕೆಲಸಗಳನ್ನು ಮಾಡುತ್ತಿರುವ ನಮಗೆ, ಕನ್ನಡ ಪುಸ್ತಕಗಳ ಮಾರಾಟ ಹಾಗೂ ಪ್ರಕಟಣೆಯ ಸುತ್ತ ತೊಡಗಿಸಿಕೊಳ್ಳುವ ತುಡಿತವೂ ಇತ್ತು. ಇದರ ಮೊದಲ ಹೆಜ್ಜೆಯಾಗಿ ‘ಹರಿವು ಬುಕ್ಸ್’ ಆರಂಭಿಸಿದ್ದೇವೆ. ಮೆಚ್ಚಿನ ಪುಸ್ತಕಗಳನ್ನು ಕೊಳ್ಳಲು ಒಂದೊಳ್ಳೆ ಮಿಂದಾಣವನ್ನು ಓದುಗರಿಗೆ ನೀಡುವುದು, ಜೊತೆಗೆ ನಾಡಿನ ಹಿರಿಯ ಹಾಗೂ ಕಿರಿಯ ಬರಹಗಾರರು ಬರೆದ ಜನಮೆಚ್ಚುವಂತಹ ಪುಸ್ತಕಗಳನ್ನು ‘ಹರಿವು ಬುಕ್ಸ್’ ಮೂಲಕ ಪ್ರಕಟಿಸುವುದು, ಇವೇ ನಮ್ಮ ಮುಂದಿನ ಕೆಲಸಗಳಾಗಲಿವೆ.