Beluru Raamurthy
ಯೋಗ ವಾಸಿಷ್ಠ
ಯೋಗ ವಾಸಿಷ್ಠ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಉಪನಿಷತ್ತಿನಲ್ಲಿ ಬರುವ 'ಉದ್ಧಾಲಕ' ಎಂಬ ಋಷಿಯ ಕಥೆಯನ್ನೂ ಯೋಗವಾಸಿಷ್ಠದಲ್ಲಿ ಬರುವ 'ಉದ್ಧಾಲಕ'ನ ಕಥೆಯನ್ನೂ ತುಲನಾತ್ಮಕ ದೃಷ್ಟಿಯಿಂದ ಕುತೂಹಲಗರು ಗಮನಿಸಬಹುದು, ಶ್ರೀ ಬೇಲೂರು ರಾಮಮೂರ್ತಿ ಅವರು ಅಷ್ಟು ದೀರ್ಘವಲ್ಲದ, ಅಷ್ಟು ಕಷ್ಟವಲ್ಲದ ಕಥೆಗಳನ್ನೇ ಆಯ್ದುಕೊಂಡಿದ್ದಾರೆ. ಕಥೆಗಳ ಆಯ್ಕೆಯಲ್ಲೂ ವೈವಿಧ್ಯತೆಯನ್ನು ಉಳಿಸಿಕೊಂಡಿದ್ದಾರೆ. ಕಥೆಗಳನ್ನು ನಿರೂಪಿಸುವುದರಲ್ಲಿ ಮೂಲ ಆಶಯಕ್ಕೆ ಭಂಗ ಬರದಂತೆ ನೋಡಿಕೊಂಡಿದ್ದಾರೆ. ಅತಿಯಾದ ವಿವರಗಳನ್ನು ಸಂಕ್ಷೀಪ್ತಿಕರಣಗೊಳಿಸಿದ್ದಾರೆ. ಈ ಕಥೆಗಳಲ್ಲಿ ನಾನಾಭಾವ ವಿಲಾಸ- ವಿಭ್ರಮಗಳುಂಟು! ಮನಸ್ಸನ್ನು ಸಮಾಧಾನಿಸುವ ಕಥೆಗಳ ಶ್ರೇಣಿಗಳೂ ಇಲ್ಲುಂಟು. ಶ್ರೀ ಬೇಲೂರು ರಾಮಮೂರ್ತಿಯವರು ಕಥನದ ರಹಸ್ಯವನ್ನು ತಿಳಿದವರು. ಇವರಿಗೆ ಕಥನಕಲೆಯ ಮರ್ಮ ಗೊತ್ತಿರುವುದರಿಂದ ಯೋಗವಾಸಿಷ್ಠದ ಕಥೆಗಳನ್ನು ಪುನರ್ನಿರೂಪಿಸಲು ಸಾಧ್ಯವಾಗಿದೆ!
ಶ್ರೀ ಬೇಲೂರು ರಾಮಮೂರ್ತಿ ಅವರ ಮೂಲಕ ಮೊದಲಬಾರಿಗೆ 'ಯೋಗವಾಸಿಷ್ಠ'ದ ಕಥೆಗಳನ್ನು ಓದುವ ಭಾಗ್ಯ ಕನ್ನಡಿಗರದಾಗಿದೆ. ಸರಳಶೈಲಿ, ಕಥನಗುಣ, ಸಂಗ್ರಾಹ್ಯತೆಗಳಿಂದ 'ಯೋಗವಾಸಿಷ್ಠ ಕಥೆಗಳು' ಸಹೃದಯರ ಮನಸ್ಸನ್ನು ಸೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ!
- ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ವಿಶ್ರಾಂತ ಕುಲಪತಿ (ಮುನ್ನುಡಿಯಿಂದ)
ಪ್ರಕಾಶಕರು - ಸಾಹಿತ್ಯ ಲೋಕ ಪ್ರಕಾಶನ
Share

Subscribe to our emails
Subscribe to our mailing list for insider news, product launches, and more.