Skip to product information
1 of 1

K. Rangaraja Iyengar

ಯೋಗ ಮುದ್ರಾ ಪ್ರಪಂಚ

ಯೋಗ ಮುದ್ರಾ ಪ್ರಪಂಚ

Publisher - ಸಪ್ನ ಬುಕ್ ಹೌಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 253

Type - Paperback

ಚಿಕ್ಕ ವಯಸ್ಸಿನಿಂದ ದೇವಾಲಯಗಳಲ್ಲಿ, ಹಲವಾರು ಪೂಜಾ ಸಂದರ್ಭಗಳಲ್ಲಿ, ಆಚಾರ್ಯರು, ಅರ್ಚಕರುಗಳು ಹಲವಾರು ಹಸ್ತ ಮುದ್ರೆಗಳನ್ನು ಆಚರಿಸುತ್ತಿದ್ದುದನ್ನು ಕಂಡು ಕೇವಲ ಕುತೂಹಲ ಮಾತ್ರವಾಗಿತ್ತು. ನಂತರ 'ಯೋಗ' ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಕೇವಲ ಚಿನ್ಮುದ್ರಾ, ಚಿನ್ಮಯ ಮುದ್ರಾ, ಆದಿ ಮುದ್ರಾ, ಬ್ರಹ್ಮ ಮುದ್ರಾಗಳ ಪರಿಚಯವಷ್ಟೇ ಆಗಿ ಈ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಸಂಗ್ರಹಿಸಲು ಪ್ರೇರಣೆಯಾಯ್ತು. ಹಲವಾರು ಹಿರಿಯರ ಸಂಪರ್ಕದಿಂದ ಗ್ರಂಥಗಳ ಅವಲೋಕನಗಳಿಂದ, “ಮುದ್ರಾಲೋಕ'ಕ್ಕೆ ಪ್ರವೇಶವಾಯ್ತು, ಅಮೆರಿಕದ ಪ್ರವಾಸಗಳಲ್ಲಿ ಹಲವು ಭಾರತೀಯ ವಿಜ್ಞಾನಿಗಳೊಡನೆ ವಿಚಾರ ವಿಮರ್ಶಿಸಿ ದೇಹದಲ್ಲಿರುವ ವಿದ್ಯುದಯಸ್ಕಾಂತ ಶಕ್ತಿಗಳ ಬಗ್ಗೆ ಚರ್ಚಿಸಲಾಯಿತು. ಪಂಚ ಭೌತಿಕ ವಸ್ತುಗಳಾದ ಅಗ್ನಿ, ವಾಯು, ಆಕಾಶ, ಭೂಮಿ ಮತ್ತು ಜಲ ತತ್ವಗಳು ನಮ್ಮ ಹಸ್ತದ ಐದು ಬೆರಳುಗಳಲ್ಲಿಯೇ, ಸಂಲಗ್ನವಾಗಿ ಪ್ರವಹಿಸುವ ಬಗ್ಗೆ ತಿಳಿದು ಆಶ್ಚರ್ಯಚಕಿತನಾದೆ, ಈ ಐದು ತತ್ವಗಳೂ ಸಮತೋಲನವಾಗಿ ನಿಯಮಿತ ಪ್ರಮಾಣದಲ್ಲಿದ್ದಾಗ ಮಾತ್ರ ನಮ್ಮ ಮಾನಸಿಕ, ದೈಹಿಕ, ಆಧ್ಯಾತ್ಮಿಕ ಆರೋಗ್ಯ ಸುವ್ಯವಸ್ಥಿತ. ಇವುಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅನಾಹುತ ಸಂಭವ. ಇವುಗಳನ್ನರಿತು ಹಲವಾರು ಮೂಲಗಳಿಂದ ಈ ವೈಜ್ಞಾನಿಕ ತತ್ವಗಳನ್ನು ಸಂಗ್ರಹಿಸಿ ಈ ಪಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ. ಮುದ್ರೆಗಳನ್ನು ಅರಿತೋ ಅರಿಯದೆಯೋ ಆಚರಿಸಿದರೂ ಫಲ ಲಭ್ಯ,

"ಮುದ್ರೆಗಳು, ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಔನ್ನತ್ವಕ್ಕೆ ಯಶಸ್ವಿ ಸಾಧನವಾಗಬಲ್ಲವೆಂಬುದೇ ಲೇಖಕನ ವಿನಮ್ರ ಅರಿಕೆ,

ಮುಖಪುಟದಲ್ಲಿ ಮುದ್ರಾ ವಿಜ್ಞಾನದ ಮೂಲ ತತ್ವಗಳಾದ ದೇಹದಲ್ಲಿರುವ ಪಂಚಭೂತ ತತ್ವಗಳ ಹಾಗೂ ಸಪ್ತ ಚಕ್ರಗಳ ಪ್ರತೀಕವಾಗಿ ಪಂಚ, ಸಪ್ತ ಕಮಲದಳಗಳನ್ನು ಸಾಂಕೇತಿಕವಾಗಿ ತೋರಿಸಲಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)