Jogi
Publisher - ಅಂಕಿತ ಪುಸ್ತಕ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಾವ್ಯ ಮತ್ತು ವಂಡರ್‌ನಂಥ ವಿಟ್ ಬರಹಗಳಿಂದ ವೈಎನ್‌ಕೆ ಕನ್ನಡ ಜನರನ್ನೇ ಗೆದ್ದರು. 'ಹೀಗೆ ಬರೆದರೆ ಕೇಳ್ತಾರೆ ಜನ ಇಲ್ಲವೇ ಇಂಥ ಪದ್ಯಕ್ಕೆ endಎ...' ಎಂದು ಒಂದೆಡೆ ಅವರು ಹೇಳುವುದು ಇಂಥ ವಿನೋದ ಕಾವ್ಯಕ್ಕೂ ಒಂದು ಮಿತಿಯಿದೆ ಎಂಬುದನ್ನು ಸೂಚಿಸುವುದೇ ಆಗಿದೆ. ವೈಎನ್‌ಕೆ ಶೈಲಿಯನ್ನು ಅನುಸರಿಸಿ ಹತ್ತಾರು ನಕಲಿ ಶ್ಯಾಮರು ಹೊರಗೆ ಬಂದಿದ್ದಾರೆ. ಆದರೆ ಅವರ ಕಾವ್ಯಕ್ಕೆ ಮನ್ನಣೆ ಸಿಗಲಿಲ್ಲ. ಅದರರ್ಥ ವೈಎನ್‌ಕೆ ಕಾವ್ಯ ವೈಎನ್‌ಕೆ ಛಂದಸ್ಸಿನದ್ದು, ವೈಎನ್‌ಕೆ ಲಹರಿಯದ್ದು, ವೈಎನ್‌ಕೆಯದ್ದು, ಬೆಂಗಳೂರ್ ಬಕಾಸುರ ಎಂಬ ಅವರ ಗೀತೆ- ಅದು ಕಥನ ಕವನ ಎಂದಾದರೂ ಸರಿ ಅವರು ಓದಿದಾಗಲೇ ಅದರ ಗೇಯತೆಯನ್ನು ಸೂಸುತ್ತದೆ. ಈ ಕಾವ್ಯದಲ್ಲಿ ನಗರೀಕರಣದ ದೈತ್ಯ ಬೆಳವಣಿಗೆ, ಯಾಂತ್ರಿಕತೆಯ ವೇಗ, ಸಹಜ ಬದುಕನ್ನು ಹೊಸಕಿ ಹಾಕುವುದನ್ನು ಧ್ವನಿಸುತ್ತದೆ, 'ಬಾಯಾರಿಕೆಗೆ ಗಂಗೇ..ಆಮೇಲೆ ಇರೋದ್ ಹೆಂಗೇ' ಎಂದು ಸ್ವತಃ ವೈಎನ್‌ಕೇನೇ ಓದಬೇಕು. ಅರ್ಥಸ್ಫುರಣ ಆಗ ಅಸದೃಶ.
ಮಾತು ಇರಬೇಕು ಮಿಂಚು ಹೊಳೆದಂಗೆ ಎಂಬ ಉಕ್ತಿಯನ್ನು ನಿಜ ಮಾಡಿದ ರೀತಿ ಅವರ ಬರಹಗಳು. ಹತ್ತು ಹಲವು ಪುಸ್ತಕಗಳು ಬಂದಿವೆ. ಒಂದಕ್ಕಿಂತ ಒಂದು ಸಂತೋಷ ನೀಡೀತು. ವಂಡ ಬರಹಗಳೊಂದು ಸಾಮಯಿಕ ಸ್ಪಂದನ, ಹಾಲಿ ಜಗತ್ತನ್ನು ತಮ್ಮ ವಿಪುಲ ಮೆಮರಿಯಿಂದ ಖಾಲಿ ಮಾಡಿಡುತ್ತಾರೆ.
-ಗೋಪಾಲಕೃಷ್ಣ ಕುಂಟಿನಿ