Dr. Sham. Ba. Jois
ಯಕ್ಷಪ್ರಶ್ನೆ
ಯಕ್ಷಪ್ರಶ್ನೆ
Publisher - ಶಂಬಾ ವಿಚಾರ ವೇದಿಕೆ
- Free Shipping Above ₹250
- Cash on Delivery (COD) Available
Pages - 152
Type - Paperback
ಕನ್ನಡದಲ್ಲಿ ವಿಚಾರ ಸಾಹಿತ್ಯ ಬೆಳೆಸಲು ಶಂಕರರಾಯರು ಮಾಡಿರುವ ಸಾಹಸ, ದುಡಿಮೆ ಅಪಾರವಾದುದು. ಕನ್ನಡ ಜನಾಂಗದ ನೆಲೆಯನ್ನು ಗೊತ್ತುಮಾಡಿ, ಸಮಾಜಶಾಸ್ತ್ರ ಬೆಳೆಯಲು ಕಾರಣರಾಗಿದ್ದಾರೆ. ಶಂಕರರಾಯರ ಬರವಣಿಗೆಯಲ್ಲಿ ಕಂಡುಬರುವ ಪ್ರೌಢ ವಿಚಾರ ಸರಣಿ, ಸರಸ ನಿರೂಪಣೆಗಳೇ ಅವರ ಭಾಷಣಗಳಲ್ಲಿಯೂ ಕಂಡುಬರುತ್ತದೆ. ಹದವರಿತು ಸತ್ಯವನ್ನು ಎಷ್ಟು ಸ್ಪಷ್ಟವಾಗಿ ನುಡಿದರೂ, ಸರಸ ಸಜ್ಜನಿಕೆಯನ್ನು ಬಿಡದ ಸಂಸ್ಕೃತಿ ಶಂಕರರಾಯರ ಮಾತುಗಾರಿಕೆಯ ವೈಶಿಷ್ಟ್ಯ.”
-ಡಾ. ಅ. ನ. ಕೃಷ್ಣರಾಯರು
ಕನ್ನಡದ ಬಹುಶ್ರುತ ವಿದ್ವಾಂಸರಲ್ಲೊಬ್ಬರಾದ ಡಾ. ಶಂ.ಬಾ. ಜೋಶಿಯವರ ವೈಚಾರಿಕ ಮಥನದಿಂದ ಆಕಾರ ಪಡೆದ ಅನೇಕ ಮೌಲಿಕ ಕೃತಿಗಳಲ್ಲಿ “ ಯಕ್ಷ ಪ್ರಶ್ನೆ”ಯೂ ಒಂದು. ಇಂದಿನ ಪರಿಸ್ಥಿತಿಯಲ್ಲಿ ಸುಸ್ಥಿರ ಸಮಾಜ ಸುಭದ್ರ ರಾಷ್ಟ್ರ ನಿರ್ಮಾಣದ ಆಶಯ ಹೊಂದಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನೇಕ ಪ್ರಶ್ನೆಗಳನ್ನು ಇಲ್ಲಿ ಎತ್ತಿದ್ದಾರೆ. ಈ ವೈಚಾರಿಕ ಬರಹದಲ್ಲಿನ ಹಲವಾರು ವಿಷಯಗಳು, ಸಂಗತಿಗಳು ಅವರು ಪ್ರಸ್ತಾಪಿಸಿದ ಮುಕ್ಕಾಲು ಶತಮಾನದ ನಂತರವೂ ಕೆಲವು ಇನ್ನೂ ಪ್ರಸ್ತುತ, ಹಲವು ಬದಲಾವಣೆ ಕಂಡು ಅಪ್ರಸ್ತುತ ಎಂದು ಅನಿಸುತ್ತದೆ. ಅದು ಸಹಜ. ಆದರೆ ಶಂ.ಬಾ. ಅವರ ವಿಶ್ಲೇಷಣಾ ಕ್ರಮ, ಸಮಾಜ ಪ್ರಗತಿಯ ಬಗೆಗಿನ ಕಳಕಳಿ, ಪ್ರಾಮಾಣಿಕ ಚಿಂತನೆಗಳು ನಮಗೆ ದಾರಿ ತೋರುತ್ತವೆ ಎಂಬುದು ನನ್ನ ಗ್ರಹಿಕೆ.
-ಡಾ. ಆರ್. ಶೇಷಶಾಸ್ತ್ರಿ (ಮುನ್ನುಡಿಯಲ್ಲಿ)
Share
Subscribe to our emails
Subscribe to our mailing list for insider news, product launches, and more.