Skip to product information
1 of 2

Vivekananda Kamat

ವ್ಯತಿರಿಕ್ತ

ವ್ಯತಿರಿಕ್ತ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 285.00
Regular price Rs. 285.00 Sale price Rs. 285.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 238

Type - Paperback

ವ್ಯತಿರಿಕ್ತ

ಲೇಖಕರ ಆ ಹೊಸ ಆಯಾಮ ಓದುಗರಿಗೆ ಒಳ್ಳೆಯದನ್ನೇ ಮಾಡುತ್ತದೆ. ಇಲ್ಲಿ ಕೇವಲ ಒಂದೋ ಎರಡೋ ಸಸ್ಪೆನ್ಸ್ ಇಲ್ಲ, ಸಸ್ಪೆನ್ಸ್ ಮೇಲೆ ಸಸ್ಪೆನ್ಸ್ ಅನ್ನು ಹೆಣೆಯುತ್ತಾ ಹೋಗಿದ್ದಾರೆ ಲೇಖಕರು! ಇನ್ನೇನು ನಾಯಕನ ಕಥೆ ಮುಗಿಯಿತು ಅಂದುಕೊಂಡಾಗ, ಮತ್ಯಾವುದೋ ಹೊಸ ಕಥೆ ಉದ್ಭವವಾಗುತ್ತದೆ. ಹಂತಕರು ಕೈಚೆಲ್ಲಿದರು ಎಂದುಕೊಂಡಾಗಲೇ ನಾಯಕನ ಮೇಲೆ ಹತ್ಯಾಯತ್ನವಾಗಿಬಿಡುತ್ತದೆ. ಹಾಗಂತ ಇದು ಸಾವು ಬದುಕಿನ ಕಥೆ ಇರಬಹುದು ಎಂದುಕೊಳ್ಳುವಷ್ಟರಲ್ಲಿ, ಅದನ್ನೂ ಮರೆಮಾಚಿ ಪ್ರೀತಿಯ ಕಥೆಯನ್ನು ತಂದುಬಿಡುತ್ತಾರೆ. ಇಲ್ಲಿಯೇ ವಿವೇಕಾನಂದರು ನಮಗೆ ಬಹುದೊಡ್ಡ ಮಟ್ಟದಲ್ಲಿ ಸಿಕ್ಕಿಬಿಡುತ್ತಾರೆ. ಹೇಳಿಕೇಳಿ ಅವರ ಇಷ್ಟದ ಕಥಾ ಪ್ರಕಾರವೇ ಪ್ರೀತಿ, ಪ್ರೇಮ, ಸಂಸಾರ, ಸಂಬಂಧ, ಆದರ್ಶಗಳು ಹಾಗಿದ್ದ ಮೇಲೆ ಪ್ರೀತಿ ವಿಷಯ ಬಂದಾಗ ಅವರು ಸುಮ್ಮನಿದ್ದಾರೆಯೇ! ಲೀಲಾಜಾಲವಾಗಿ ಒಳನೋಟಗಳನ್ನು, ರೂಪಕಗಳನ್ನು ಮುತ್ತಿನ ಮಾಲೆಯಂತೆ ಕಟ್ಟುತ್ತಾ ಹೋಗಿದ್ದಾರೆ. ಆ ಮಾಲೆಯನ್ನು ಧರಿಸಿ ನಗುವ, ಕುಣಿವ, ಮೈಮರೆವ ಖುಷಿ ಮಾತ್ರ ಓದುಗರದ್ದು. ಕೊನೇ ಮಾತು: ಹೊಸದಾಗಿ ಓದಿನ ಸುಖಕ್ಕೆ ಒಳಗಾಗಬೇಕು ಎಂದುಕೊಳ್ಳುವವರಿಗೆ ಇದು ಹೇಳಿ ಬರೆಸಿದ ಕಾದಂಬರಿ. ಶ್ರೇಷ್ಠತೆ ಎಂಬುದು ಸರಳತೆಯಲ್ಲಿದೆ ಎಂಬ ಹಿರಿಯರ ಮಾತು ಇಲ್ಲಿ ಅಕ್ಷರಶಃ ಪಾಲಿಸಲ್ಪಟ್ಟಿದೆ. ಈ ಕಾದಂಬರಿಯ ಘನತೆ ಇರುವುದೇ ಇದರ ಸರಳತೆಯಲ್ಲಿ. ಸರಳ ಭಾಷೆಯ ಮೂಲಕವೂ ಎಂತಹ ಸುಂದರ ಬರವಣಿಗೆ ಸಾಧ್ಯ ಎಂಬುದಕ್ಕೆ ವಿವೇಕಾನಂದರು ದೊಡ್ಡ ಉದಾಹರಣೆಯಾಗಿ ನಮ್ಮೆದುರಿಗಿದ್ದಾರೆ.

ಓದುವ ಸುಖ ನಿಮ್ಮದಾಗಲಿ...

- ವೀರಕಪುತ್ರ ಶ್ರೀನಿವಾಸ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)