Skip to product information
1 of 2

Kumara Bendre

ವ್ಯಗ್ರ ಮತ್ತು ಇತರ ಕಾದಂಬರಿಗಳು

ವ್ಯಗ್ರ ಮತ್ತು ಇತರ ಕಾದಂಬರಿಗಳು

Publisher - ವೀರಲೋಕ ಬುಕ್ಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 150

Type - Paperback

'ವ್ಯಗ್ರ''ಅಳಿವು''ಅವಸಾನ ಈ ಮೂರೂ ಕಾದಂಬರಿಗಳು ಏನೋ ಒಂದು ಸಮಸ್ಯೆ, ಸವಾಲು, ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು. ಅಸಮಾನತೆ, ಅನ್ಯಾಯದಿಂದ ತುಳಿತಕ್ಕೊಳಗಾಗಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬನ ಅಂತರಂಗದ ಕಿಡಿ ಪ್ರಜ್ವಲಿಸುವ ಕಥನ 'ವ್ಯಗ್ರ' ಕಾದಂಬರಿಯಲ್ಲಿದೆ. ಸಕಾರಾತ್ಮಕ ವ್ಯಕ್ತಿ ಮತ್ತು ಶಕ್ತಿಯೊಂದನ್ನು ಈ ವ್ಯವಸ್ಥೆ ಹೇಗೆ ನಕಾರಾತ್ಮಕವಾಗಿ ಬದಲಿಸಿ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ವಿಚಾರದ ಮೇಲೆ ಇದು ಬೆಳಕು ಚೆಲ್ಲುವಂತಹದು. ಒಟ್ಟಾರೆಯಾಗಿ ಕಥನವೆಂದರೆ ನನಗೆ ಆತ್ಮಾನುಸಂಧಾನಕ್ಕಾಗಿ ಧ್ಯಾನಕ್ಕಿಳಿವಷ್ಟೇ ಸಂತೋಷ ತರುವ ಕ್ರಿಯೆ! ಹಾಗಾಗಿ ಅದನ್ನು ನಾನು ಪ್ರತಿಸಾರಿಯೂ ನನ್ನಿಂದ ಸಾಧ್ಯವಿರುವಷ್ಟು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಲು ಪ್ರಯತ್ನಿಸುತ್ತಿರುತ್ತೇನೆ.

ವಿಶೇಷವೇನೆಂದರೆ ಈ ಮೂರೂ ಕಾದಂಬರಿಗಳನ್ನು ಬರೆಯುವಾಗ ಈ ಕಥನಗಳು ಚಲನಚಿತ್ರದ ವ್ಯಾಕರಣಕ್ಕೆ ಹತ್ತಿರವಾಗಿರಬೇಕು ಎಂಬುದು ನನ್ನ ಪೂರ್ವಾಗ್ರಹವಾಗಿತ್ತು. ಯಾಕೆಂದರೆ ಈ ಕಾಲಘಟ್ಟದಲ್ಲಿ ಪರ್ಯಾಯ ಮಾರ್ಗದ ಪ್ರಯೋಗಳ ಚಲನಚಿತ್ರಗಳು ನನ್ನನ್ನು ಗಾಢವಾಗಿ ಆವರಿಸಿಕೊಂಡಿದ್ದೇ ಇದಕ್ಕೆ ಕಾರಣ. ಆದರೆ ಸೃಜನಶೀಲ ಸಾಹಿತ್ಯ ಕೃತಿಯ ಎಲ್ಲ ಗುಣ-ಲಕ್ಷಣಗಳನ್ನೂ ಒಳಗೊಂಡಿರಬೇಕು ಎಂಬುದು ಕೂಡ ಅರಿಕೆಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಈ ಕೃತಿಗಳನ್ನು ರಚಿಸಿದೆ. ಹೀಗೆ ನಿರ್ದಿಷ್ಟ ಚೌಕಟ್ಟಿಗೆ ಒಳಪಟ್ಟು ಬರೆಯುವಾಗ ಎದುರಾಗುವ ಸವಾಲು, ತಾಂತ್ರಿಕ ಸಮಸ್ಯೆಗಳನ್ನು ನಾನು ಅವಕಾಶಗಳನ್ನಾಗಿ ಬಳಸಿಕೊಂಡು ಸಾಗಿದೆ, ಇದೇ ಕಾರಣಕ್ಕೆ ಈ ಕಥನಗಳಿಗೆ ವಿಭಿನ್ನವಾದ ಶಕ್ತಿ ಮತ್ತು ಕುತೂಹಲಕಾರಿಯಾಗಿ ಓದಿಸಿಕೊಳ್ಳುವ ಗುಣ ದಕ್ಕಿದೆ ಎಂಬ ಪ್ರತಿಕ್ರಿಯೆ ಮೊದಲ ಓದುಗರಿಂದ ಬಂದಿರಬಹುದು! ಹಾಗಾಗಿ ಇದೊಂದು ರೀತಿಯ ವಿಭಿನ್ನ ಅನುಭವ ನನಗೆ.

(ಕಾದಂಬರಿಕಾರರ ಮಾತಿನಿಂದ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)