S. Rudramurthy Shastry
ವ್ಯಾಸ ಮಹಾಭಾರತ
ವ್ಯಾಸ ಮಹಾಭಾರತ
Publisher - ಐಬಿಹೆಚ್ ಪ್ರಕಾಶನ
Regular price
Rs. 950.00
Regular price
Rs. 950.00
Sale price
Rs. 950.00
Unit price
/
per
- Free Shipping Above ₹250
- Cash on Delivery (COD) Available
Pages - 974
Type - Hardcover
ಮಹಾಭಾರತ ಭಾರತದ ಧರ್ಮಗ್ರಂಥವೂ ಹೌದು, ಮಹಾ ಕಾವ್ಯವೂ ಹೌದು. ಭಾರತೀಯ ಜನಜೀವನದಲ್ಲಿ ಅದು ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಭಾರತದ ಎಲ್ಲ ಭಾಷೆಗಳಲ್ಲೂ ಮಹಾಭಾರತ ಹಲವು ರೂಪಗಳಲ್ಲಿ ಪುನಃಸೃಷ್ಟಿಯಾಗಿದೆ. ಕನ್ನಡದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗಧಾಯುದ್ಧ, ಕುಮಾರವ್ಯಾಸನ ಭಾರತ ಎಂಬ ಹಳಗನ್ನಡ, ನಡುಗನ್ನಡ ಮಹಾಕಾವ್ಯಗಳ ಜೊತೆಗೆ, ಆಧುನಿಕ ಕಾಲದಲ್ಲಿ ಕಾದಂಬರಿ, ನಾಟಕ ರೂಪಗಳಲ್ಲಿ ಮತ್ತೆ ಮತ್ತೆ ಪುನರ್ಜನ್ಮ ತಾಳುತ್ತಲೇ ಇದೆ.
ಸಾವಿರಾರು ವರ್ಷಗಳ ನಂತರವೂ ಮಹಾಭಾರತ ಕಥೆ, ಅದರ ಸಂದರ್ಭಗಳು, ಪಾತ್ರಗಳು ಇಂದಿಗೂ ಭಾರತೀಯ ಜನಮಾನಸದಲ್ಲಿ ಜೀವಂತವಾಗಿವೆ. ಪಂಡಿತ ಪಾಮರರೆಲ್ಲರಿಗೂ ಮಹಾಭಾರತದ ಕಥೆ ಗೊತ್ತು, ಪಾತ್ರಗಳು ಗೊತ್ತು, ನಿತ್ಯದ ಸಂಭಾಷಣೆಗಳಲ್ಲೂ ಪಾತ್ರಗಳು ಮತ್ತು ಸಂದರ್ಭಗಳು ಹೋಲಿಕೆಯ ರೂಪದಲ್ಲಿ ವ್ಯಕ್ತವಾಗುತ್ತಿರುವುದೇ ಮಹಾಭಾರತದ ಸಾರ್ವತ್ರಿಕತೆಗೆ, ಶಾಶ್ವತತೆಗೆ ಸಾಕ್ಷಿಯಾಗಿದೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರಿಗೆ ಮಾರ್ಗದರ್ಶನ ನೀಡುತ್ತಿದೆ.

Share
Subscribe to our emails
Subscribe to our mailing list for insider news, product launches, and more.