Dr. C. G. Keshavmurthy
ವೃದ್ಧಾಪ್ಯ ವ್ಯಾಧಿಗಳು
ವೃದ್ಧಾಪ್ಯ ವ್ಯಾಧಿಗಳು
Publisher - ನವಕರ್ನಾಟಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಜೀವನದ ಸಂಧ್ಯಾಕಾಲ ಮುಪ್ಪು. ಈ ವಯಸ್ಸಿನಲ್ಲಿ ಕಾಡುವ ತೀವ್ರ ತರಹದ ರೋಗಗಳು ವೃದ್ಧರನ್ನು ಜರ್ಜರಿತರನ್ನಾಗಿಸುತ್ತವೆ. ಸರಿಯಾದ ಚಿಕಿತ್ಸೆ, ಆಸರೆ ಆರೈಕೆ ಇಲ್ಲದಿದ್ದರೆ ಅವರ ಆತಂಕ ಇನ್ನಷ್ಟು ಹೆಚ್ಚಿ, ಖಿನ್ನತೆಗೊಳಗಾಗುವ ಸಂಭವವೂ ಜಾಸ್ತಿ. ಜೊತೆಗೆ ಆರ್ಥಿಕ ಅಭದ್ರತೆ, ಕೌಟುಂಬಿಕ ಜವಾಬ್ದಾರಿಗಳು ಮತ್ತು ಮನೆಯವರ ನಿರ್ಲಕ್ಷ್ಯದಿಂದ ವೃದ್ಧರ ಆತ್ಮವಿಶ್ವಾಸ ಕುಗ್ಗಿ ಹೀನಸ್ಥಿತಿಗೆ ತಳ್ಳಲ್ಪಡುತ್ತಾರೆ. ವೃದ್ಧರಿಗೆ ಬರಬಹುದಾದ ಕಾಯಿಲೆಗಳಾವುವು? ಅವುಗಳಿಗೆ ಚಿಕಿತ್ಸೆ ಏನು? ಆಹಾರ ಸೇವನೆಯಲ್ಲಿನ ಇತಿ-ಮಿತಿಗಳಾವುವು? ಇತ್ಯಾದಿ ವಿಷಯಗಳನ್ನು ಕುರಿತ ಈ ಪುಸ್ತಕ ವೃದ್ಧರಿಗೊಂದು ಆರೋಗ್ಯ ಕೈಪಿಡಿಯೇ ಸರಿ.
ಖ್ಯಾತ ವೈದ್ಯರಾದ ಡಾ|| ವಿ. ಎಸ್. ನಟರಾಜನ್ ರಚಿಸಿರುವ ಈ ಕೃತಿಯನ್ನು, ಡಾ|| ಸಿ. ಜಿ. ಕೇಶವಮೂರ್ತಿಯವರು ಕನ್ನಡಕ್ಕೆ ರೂಪಾಂತರಿಸಿ ಕೊಟ್ಟಿದ್ದಾರೆ. ಡಾ|| ಸಿ. ಜಿ. ಕೇಶವಮೂರ್ತಿಯವರು ವೃದ್ಧಾಪ್ಯ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.
Share

Subscribe to our emails
Subscribe to our mailing list for insider news, product launches, and more.