Jagannatha Sogala
Publisher -
- Free Shipping
- Cash on Delivery (COD) Available
Couldn't load pickup availability
ನಮ್ಮ ಭಾರತ ದೇಶದಲ್ಲಿ ಕತೆಗಳ ಅಣಿಮುತ್ತುಗಳನ್ನು ತನ್ನ ಗರ್ಭಕೋಶದಲ್ಲಿ ಸುರಕ್ಷಿತವಾಗಿ ಅಡಗಿಸಿಟ್ಟುಕೊಂಡಿರುವ ಮಹಾಸಾಗರಗಳೇ ಇವೆ. ಪುರಾತನ ಕಾಲದಲ್ಲಿ ವೇದ ವೇದಾಂತಗಳ ಕ್ಲಿಷ್ಟವಾದ ಭಾಗಗಳನ್ನು ಶಿಷ್ಯರಿಗೆ ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ, ಗುರುಗಳು ಕತೆಗಳ ಮಾಧ್ಯಮವನ್ನು ಅನುಸರಿಸುತ್ತಿದ್ದರು. ದುಷ್ಟ ಶಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಲು, ನಾಶ ಮಾಡಲು, ಅವುಗಳ ವಿರುದ್ಧ ಹೋರಾಡುವ ಶಕ್ತಿಗಳ ಕತೆಗಳು, ಅಸುರ ದೇವತೆಗಳ ಘರ್ಷಣೆಗಳ ಕತೆಗಳು; ಅಪ್ಸರೆಯರ, ಮಾನವರ, ದೇವತೆಗಳ, ಅಸುರರ ಪ್ರಣಯ ಕತೆಗಳು ಮಾಧ್ಯಮಗಳಲ್ಲಿ ರೂಪುಗೊಂಡವು. ಹಾಗೆಯೇ ಕಥಾವಸ್ತುಗಳಾಗಿ ರಾಜ ರಾಣಿಯರ, ರಾಜಕುಮಾರ ರಾಜಕುಮಾರಿಯರ ಪ್ರೇಮ, ಸಾಹಸಗಳ ಕತೆಗಳು, ಅದ್ಭುತವಾದ ಬೃಹತ್ಕಥಾಕೋಶಗಳು, ಕಥಾಸರಿತ್ಸಾಗರ, ಪಂಚತಂತ್ರ ಹಾಗೂ ರಾಮಾಯಣ ಮಹಾಭಾರತದಲ್ಲಿ ಇರುವ ಕತೆಗಳು, ತೆನಾಲಿರಾಮ, ಮರ್ಯಾದೆ ರಾಮ, ಬೀರಬಲ್ ಇಂತಹ ಚರಿತ್ರಾರ್ಹ ವ್ಯಕ್ತಿಗಳ ಬಗ್ಗೆ ಕತೆಗಳು.
ಈ ಬಗೆಯ ಕತೆಗಳು ಪ್ರಪಂಚದಾದ್ಯಂತ ಇವೆ. ಈ ತರಹದ ಕತೆಗಳ ಮೂಲ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇವು ಜನಪದ ಕತೆಗಳು. ಯಾರೋ ಯಾವುದೋ ಕಾಲದಲ್ಲಿ ಹೇಳಿದ ಬಾಯ್ಮಾತಿನ ಕತೆಗಳು.
