G. Srinivasmurthy
Publisher - ನವಕರ್ನಾಟಕ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಬಾನಿನಲ್ಲಿ ಹಕ್ಕಿಯಂತೆ ಹಾರಾಡುವ ವಿಮಾನಗಳು ಮನುಶ್ಯರಿಗೆ ಹಲವು ರೀತಿಯಲ್ಲಿ ಉಪಯೋಗಿಯಾಗಿವೆ. ವಿಮಾನಗಳ ಹಾರಾಟದ ಮೂಲಭೂತ ಅಂಶಗಳು, ವಿಮಾನದ ನಿರ್ದಿಷ್ಟ ರಚನಾ ವಿನ್ಯಾಸ, ಅದು ಏರಿಳಿಯುವ ಹಾಗೂ ಗಾಳಿಯಲ್ಲಿ ತೇಲುತ್ತಾ ಸಾಗುವ ಮತ್ತು ವಾತಾವರಣದ ಪ್ರಕೃತಿ ಸಹಜವಾದ ವೈವಿಧ್ಯಮಯ ವ್ಯತ್ಯಾಸ - ಇವುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸರಿಯಾದ ಕಾರ್ಯನಿರ್ವಹಣೆ ಮಾಡುವ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳು ಸಹಜವಾಗಿಯೇ ಎಲ್ಲರ ಅಚ್ಚರಿಯ ಹಾಗೂ ಕುತೂಹಲದ ಅಂಶಗಳಾಗಿವೆ.
ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು ಅತ್ಯಂತ ಸೂಕ್ತವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಮನನವಾಗುವಂತೆ ತಿಳಿಸಿಕೊಟ್ಟಿರುವುದೇ ಈ ಪುಸ್ತಕದ ವಿಶೇಷ.
