Navakarnataka
ವಿಜ್ಞಾನ ಮತ್ತು ಪವಾಡಗಳು
ವಿಜ್ಞಾನ ಮತ್ತು ಪವಾಡಗಳು
Publisher - ನವಕರ್ನಾಟಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ಮಾಂತ್ರಿಕರ ಕೈಚಳಕದಂಥ ಸಾಮಾನ್ಯ ಚಮತ್ಕಾರಗಳನ್ನು ಮಾಡಿ ತೋರಿಸಿ ಪವಾಡ ಪುರುಷರೆಂದು ತಮ್ಮಷ್ಟಕ್ಕೇ ಬೀಗುವ ಮಹಾನುಭಾವರು ಈಗಲೂ ಇದ್ದಾರೆ. ಅವರನ್ನು ದೇವಮಾನವರೆಂದೇ ಭಾವಿಸುವ, ಅಂಥ ಚಮತ್ಕಾರಗಳನ್ನೇ ಪವಾಡಗಳೆಂದು ನಂಬಿ ಮೈಮರೆಯುವ ಜನರಿಗೂ ನಮ್ಮಲ್ಲಿ ಕೊರತೆಯಿಲ್ಲ, ಆದರೆ, ಚಮತ್ಕಾರಗಳ ಹಿಂದಿರುವ ವೈಜ್ಞಾನಿಕ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರೆ, ಸಾಮಾನ್ಯ ಜನರೂ ಅವನ್ನು ಮಾಡಿ ತೋರಿಸ ಬಹುದು, ಆಗ ಚಮತ್ಕಾರಿಕ ದೇವಮಾನವರ ಅಗತ್ಯವೂ ಇರುವುದಿಲ್ಲ, ಈ ಕೃತಿಯಲ್ಲಿ ಪರಿಣತರ ಸಹಾಯದಿಂದ ಅಭ್ಯಾಸ ಮಾಡಿ ಪ್ರಯೋಗಿಸಬಹುದಾದ ಅಂಥ ನೂರನಲವತ್ತೊಂದು ಚಮತ್ಕಾರಿಕ ಪ್ರಯೋಗಗಳನ್ನು ವಿವರಿಸಲಾಗಿದೆ.
ವಿಚಾರವಾದಿ ಡಾ|| ಅಬ್ರಹಾಂ ಕೋವೂರರ ಅನುಯಾಯಿಯಾಗಿದ್ದ ದಿವಂಗತ ಬಿ. ಪ್ರೇಮಾನಂದ್ ಈ ಕೃತಿಯ ಲೇಖಕರು. ಹಲವು ಪವಾಡಗಳ ಗುಟ್ಟು ರಟ್ಟು ಮಾಡಿರುವ ಇವರು, “ಪವಾಡ ಭಂಜಕ' ಎಂದೇ ಪರಿಚಿತರು. ಈ ಕಾರಣಕ್ಕಾಗಿ ಪವಾಡ ಪ್ರಿಯರಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ. ಆದರೂ ನಾಡಿನ ಹಲವು ಭಾಗಗಳಲ್ಲಿ ವಿಚಾರವಾದಿ ವೇದಿಕೆಗಳನ್ನು ಸಂಘಟಿಸಿ, ಚಟುವಟಿಕೆಗಳನ್ನು ನಡೆಸುವ ಮೂಲಕ ಜನರ ಮನಸ್ಸಿನಲ್ಲಿ ನೆಲೆಸಿರುವ ಮೂಢನಂಬಿಕೆಗಳನ್ನು ತೊಲಗಿಸಲು ಪ್ರಯತ್ನಿಸಿದ್ದಾರೆ. ನಮ್ಮ ದೇಶದಲ್ಲೂ, ಪರದೇಶದಲ್ಲೂ ಸಂಚರಿಸಿದ್ದಾರೆ. ಎಲ್ಲ ಕಡೆ ಸಾಕಷ್ಟು ಮಂದಿ ವಿಚಾರವಾದಿ ಮಿತ್ರರನ್ನೂ ಪಡೆದಿದ್ದಾರೆ. ಇವರು ಬರೆದಿರುವ ಪುಸ್ತಕಗಳು 'ಪವಾಡ ಭಂಜನೆ'ಗೆ ಪೂರಕವಾಗಿವೆ.
Share
Subscribe to our emails
Subscribe to our mailing list for insider news, product launches, and more.