V. Gopal Kumar
ವಿಜಯೀಭವ-ಗೆಲ್ಲಲು ಸಿದ್ಧರಾಗಿ
ವಿಜಯೀಭವ-ಗೆಲ್ಲಲು ಸಿದ್ಧರಾಗಿ
Publisher -
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
"ವಿಜಯೀಭವ - ಗೆಲ್ಲಲು ಸಿದ್ಧರಾಗಿ' ಕೃತಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿಗಳನ್ನೊಳಗೊಂಡ ಉಪಯುಕ್ತವಾದ ಕೈಪಿಡಿಯಾಗಿದೆ. ಈ ಕೃತಿಯ ಲೇಖಕರಾದ ಶ್ರೀಯುತ ಬಿ. ಗೋಪಕುಮಾರ್‌ರವರು ಬೋಧನೆಯನ್ನು ಪ್ರೀತಿಸುವ, ಆರಾಧಿಸುವ ಅನುಭವೀ ಶಿಕ್ಷಕರಾಗಿದ್ದಾರೆ. ತರಗತಿಯಲ್ಲಿ ಬೋಧಿಸುತ್ತಲೇ ವಿದ್ಯಾರ್ಥಿಗಳ ಜೊತೆ ಬೆರೆತು ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಇದರ ಫಲಶ್ರುತಿಯಾಗಿ ಈ ಪುಸ್ತಕ ಮೂಡಿಬಂದಿದೆ. ಈ ಕೃತಿಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆಗಳ ಮಹಾಪೂರವೇ ಇದೆ. ಹಾಗೂ ಈ ಸಲಹೆಗಳು ನೈಜತೆಯಿಂದ ಕೂಡಿದ್ದು ಅಳವಡಿಸಿಕೊಳ್ಳಲು ಸುಲಭವಾಗಿವೆ.
ಶಿಸ್ತು, ಸಮಯಪಾಲನೆ, ಒತ್ತಡ ನಿರ್ವಹಣೆಯಂತಹ ಸಹಜವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಹತ್ತು ಹಲವು ವಿಷಯಗಳನ್ನು ಈ ಕೃತಿ ಒಳಗೊಂಡಿದೆ. ಮೌಲ್ಯಗಳನ್ನು ಮತ್ತು ಕೌಶಲ್ಯಗಳನ್ನು ಹೊಂದುವಲ್ಲಿ ಸಹಕಾರಿಯಾಗಿದೆ. ಪೋಷಕರು ಮತ್ತು ಶಿಕ್ಷಕರಿಗೂ ಈ ಕೃತಿ ಉಪಯುಕ್ತಕರ. ಲೇಖಕರು ಯುವಮನಸ್ಸುಗಳ ನಾಡಿಮಿಡಿತವನ್ನು ಅಲಯಬಲ್ಲವರಾಗಿದ್ದಾರೆ.
ಹಾಗಾಗಿ ಈ ಕೃತಿಯಲ್ಲಿ ತಮ್ಮ ಆಲೋಚನೆಗಳನ್ನು ಸರಳವಾದ ಭಾಷೆಯಲ್ಲಿ ಸುವ್ಯವಸ್ಥಿತ ಜೋಡಣೆಯೊಂದಿಗೆ ನಿರೂಪಿಸಿದ್ದಾರೆ. ಮತ್ತೊಂದು ಆಸಕ್ತಿಕರವಾದ ವಿಷಯವೇನೆಂದರೆ, ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿರುವ ಟಿಪ್ಪಣಿ. ಇವು ಅದ್ಭುತ ಉದಾಹರಣೆಗಳೊಂದಿಗೆ ಮನಮುಟ್ಟುವಂತಿವೆ. ವಿದ್ಯಾರ್ಥಿಗಳು ತಮಗೆ ತಾವೇ ಸ್ಫೂರ್ತಿ ತಂದುಕೊಳ್ಳುವಂತೆ ಹುಲದುಂಚಿಸುತ್ತವೆ.
ಇದೊಂದು ವಿದ್ಯಾರ್ಥಿಸ್ನೇಹಿ ಪುಸ್ತಕವಾಗಿದ್ದು, ಮಾರ್ಗದರ್ಶನ ನೀಡುವಲ್ಲಿ ಫಲಪ್ರದವಾಗಿದೆ. ಹಾಗಾಗಿ 'ವಿಜಯೀಭವ' ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಕರೆದೊಯ್ಯುವ ದಾರಿದೀಪವಾಗಿದೆ. ಹೆಸರಿಗೆ ತಕ್ಕಂತೆ ವಿಜಯಪತಾಕೆ ಹಾರಿಸಲೆಂದು ಮನಃಪೂರ್ವಕವಾಗಿ ಹಾರೈಸುತ್ತೇನೆ.
-ಕು. ಸರೋಜಿನಿ. ಬಿ. ಟಿ.
ಗೋಮಿನಿ ಪ್ರಕಾಶನ.
Share

Subscribe to our emails
Subscribe to our mailing list for insider news, product launches, and more.