1
/
of
1
Kiran Upadhyaya
ವಿದೇಶವಾಸಿ
ವಿದೇಶವಾಸಿ
Publisher -
Regular price
Rs. 325.00
Regular price
Rs. 325.00
Sale price
Rs. 325.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ವಿದೇಶಿ ನೆಲದಲ್ಲಿದ್ದುಕೊಂಡು ಕನ್ನಡದ ಓದುಗರನ್ನು ಕಣ್ಮುಂದೆ ತ೦ದುಕೊ೦ಡು, ಅವರಿಗೆ ವಾರವಾರವೂ ಬರೆಯುವುದು ಸವಾಲಿನ ಕೆಲಸವೇ. ವಿದೇಶಿ ಅನುಭವವನ್ನು ಕನ್ನಡದ ಓದುಗರಿಗೆ ಪ್ರಸ್ತುತವಾಗುವಂತೆ, ವಾಸ್ತವದ ನೆಲೆಯಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ವಿದೇಶಿ ವಿದ್ಯಮಾನಗಳೆಲ್ಲವೂ ಕನ್ನಡಿಗರಿಗೆ ಸ೦ಬ೦ಧಪಡುತ್ತವೆ, ಪ್ರಸ್ತುತವಾಗುತ್ತವೆ, ಸಾಮಯಿಕವಾಗುತ್ತವೆ ಎನ್ನಲಾಗುವುದಿಲ್ಲ. ಯಾವ ವಿಷಯವೇ ಆಗಲಿ, ಅದಕ್ಕೊಂದು ಸ್ಥಳೀಯ ಟಚ್ ಕೊಡುವುದು, ಕನ್ನಡದ ಸಂದರ್ಭಕ್ಕೆ ಆಪ್ತವಾಗುವಂತೆ ಮಾಡುವುದು, ಓದುಗರು ವಾರವಾರವೂ ಎದುರು ನೋಡುವಂತೆ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವುದು ಸಾಮಾನ್ಯವಲ್ಲ. ಈ ಕೆಲಸವನ್ನು 'ವಿಶ್ವವಾಣಿ'ಯಲ್ಲಿ ಅಂಕಣಕಾರ ಕಿರಣ್ ಉಪಾಧ್ಯಾಯ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. ತಾವು ನೋಡಿದ ಸಂಗತಿಗಳನ್ನು ಅಧ್ಯಯನ ಮತ್ತು ಶೋಧನದಿಂದ ವಿಸ್ತರಿಸುವ ವಿದ್ಯಾರ್ಥಿಸಂಪನ್ನ ಗುಣ, ಕತೆಗಾರಿಕೆ ಮತ್ತು ಕಲೆಗಾರಿಕೆ ಅವರಿಗೆ ಕರಗತವಾಗಿದೆ. ಹೀಗಾಗಿ ಅವರು ವಿದೇಶಿ ಅನುಭವವನ್ನು ಕನ್ನಡದ ಸಂದರ್ಭಕ್ಕೆ ಅನ್ವಯವಾಗುವ ಹಾಗೆ ಸಹಜವಾಗಿ ವಿವರಿಸುತ್ತಾರೆ. ಹೀಗಾಗಿ ಇದು ವಿದೇಶಿ ಎಂದೆನಿಸದೇ, ವಿಶಿಷ್ಟ ದೇಸಿಯ ಸೊಬಗನ್ನು ಪಡೆಯುತ್ತವೆ. ವಿಷಯ ಹುಡುಕಾಟದಲ್ಲಿ ನಾವೀನ್ಯ, ಸೃಜನ-ಶಿಪ್ಪ ಶೋಧ, ವಿಷಯ ನಿವೇದನೆಯಲ್ಲಿನ ನಮ್ರತೆ, ಸೂಕ್ಷ್ಮತೆಗಳನ್ನು ಕಿರಣ್ ಬರಹಗಳುದ್ದಕ್ಕೂ ಕಾಣಬಹುದು. ಹೀಗಾಗಿ ಇಲ್ಲಿನ ಬರಹಗಳು ಅಂಕಣದಾಚೆಯ ಸಾಹಿತ್ಯ ಪ್ರಕಾರಕ್ಕೆ ತನ್ನನ್ನು ಹೊಂದಿಸಿಕೊಳ್ಳುವ ಸ್ಥಿತಿಸ್ಥಾಪಕಶೀಲವನ್ನು ಮೆರೆಯುತ್ತವೆ. ಇದೊಂದು ವಿಭಿನ್ನ ದೃಷ್ಟಿಕೋನದಿಂದ ಬರೆದ, ಬದಲಿನ ಹುದಲನ್ನು ಬಿಟ್ಟುಕೊಡುವ ನಿರುದ್ವಿಗ್ನತೆಯನ್ನು ಅಂತರ್ಗತವಾಗಿಸಿಕೊಂಡು ಬರೆದ ಬರಹಗಳಾಗಿವೆ. ವಿದೇಶವಾಸಿ ಕಿರಣ್, ತಮ್ಮ ವಿಚಾರಗಳ ಮೂಲಕ ಪಕ್ಕದಮನೆಯವರಷ್ಟೇ ಆಪ್ತತೆ ಮತ್ತು ಸಲುಗೆಯನ್ನು ಗಳಿಸುತ್ತಾರೆ. ಅದೇ ಅವರ ಬರಹಗಳ ವೈಶಿಷ್ಟ್ಯ.
- ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕ, ವಿಶ್ವವಾಣಿ
- ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕ, ವಿಶ್ವವಾಣಿ
Share
![ವಿದೇಶವಾಸಿ](http://harivubooks.com/cdn/shop/products/1_ce39e876-cfc7-4204-b1b7-a111ca633c1c.jpg?v=1670481201&width=1445)
Subscribe to our emails
Subscribe to our mailing list for insider news, product launches, and more.