Sri Sri Rangapriya Sri Srihi
Publisher - ಅಷ್ಟಾಂಗಯೋಗ ವಿಜ್ಞಾನ ಮಂದಿರ
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
"ವಿಚಾರಸುಮನೋಮಾಲಾ" ಎ೦ಬ ಈ ಲೇಖನಪುಷ್ಪಗಳ ಮಾಲೆಯನ್ನು ವನಮಾಲಾಧಾರಿಗೆ ಸಮರ್ಪಣೆ ಮಾಡಿ ಪ್ರಸಾದರೂಪವಾಗಿ ಸಜ್ಜನರ ಸಮಾಜಕ್ಕೆ ವಿತರಣೆ ಮಾಡಲು ಸಂತೋಷವಾಗುತ್ತಿದೆ. ಇದನ್ನು ಅಲಂಕರಿಸಿರುವ ಎಲ್ಲ ಲೇಖನಗಳೂ ಅಷ್ಟಾಂಗಯೋಗ ವಿಜ್ಞಾನಮಂದಿರದಿಂದ ಕಾಲಕಾಲಗಳಲ್ಲಿ “ಆರ್ಯಸಂಸ್ಕೃತಿ' ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿದ್ದ ವಿಷಯಗಳ ಗುಂಘನಗಳೇ ಆಗಿವೆ. ಇವುಗಳಲ್ಲಿ ಕೆಲವು ಲೇಖನಗಳು ಪ್ರಶ್ನೋತ್ತರರೂಪವಾಗಿ ಮಂಡಿಸಲ್ಪಟ್ಟಿವೆ. ಮತ್ತೆ ಕೆಲವು ನೇರವಾಗಿ ವಿಷಯ ನಿರೂಪಣೆ ಮಾಡುತ್ತವೆ. ಬರಹದ ವಿಷಯಗಳಲ್ಲಿ ಕೆಲವು ವ್ಯವಹಾರಕ್ಕೆ ಸಂಬಂಧಪಟ್ಟವು, ಕೆಲವು ಆಚಾರಕ್ಕೆ ಸಂಬಂಧಪಟ್ಟವು, ಕೆಲವು ವಿಷಯಗಳು ಪುರಾಣ, ಇತಿಹಾಸ, ಕಾವ್ಯಗಳಲ್ಲಿ ಚಿತ್ರಿತವಾದ ಘಟನೆಗಳನ್ನು ಕುರಿತವು. ಕೆಲವು ಧರ್ಮಶಾಸ್ತ್ರಗಳಿಗೆ, ಕೆಲವು ಆಗಮ ನಿಗಮಗಳಿಗೆ, ಕೆಲವು ಉಪಾಸನಾಶಾಸ್ತ್ರಕ್ಕೆ ಸಂಬಂಧಪಟ್ಟವು, ಆ ಗ್ರಂಥಗಳನ್ನು ಅನುಸಂಧಾನ ಮಾಡುವಾಗ ಏಳುವ ಪ್ರಶ್ನೆಗಳನ್ನು ಕುರಿತವು. ಈ ವೈವಿಧ್ಯಪೂರ್ಣವಾದ ವಿಷಯಗಳಿಂದ ಕೂಡಿದ ಬಿಡಿಲೇಖನಗಳು ಭಿನ್ನರುಚಿಯುಳ್ಳ ಮತ್ತು ನಾನಾ ಗುಣಮಟ್ಟಗಳುಳ್ಳ ವಿಚಾರವಂತರ ಬುದ್ಧಿ-ಹೃದಯಗಳಿಗೆ ಹೃದ್ಯವಾದ ಆಹಾರವಾಗುತ್ತವೆ ಎಂದು ನಾವು ನಂಬುತ್ತೇವೆ.
