Sumathi Krishnamurthy
ವೈಶಾಖದ ಮಳೆ
ವೈಶಾಖದ ಮಳೆ
Publisher -
- Free Shipping Above ₹250
- Cash on Delivery (COD) Available
Pages -
Type -
ಸುಮತಿ ಕೃಷ್ಣಮೂರ್ತಿಯವರ 'ವೈಶಾಖದ ಮಳೆ'ಯ ಮೊದಲ ಓದು ಕವಿಯ ಮೊದಲ ಕವಿತೆಗಳಿಗಿಂತ ಖಂಡಿತ ತುಸು ಎತ್ತರದಲ್ಲಿದೆ. ಅವರೊಳಗೆ ಕವಿಯ ಕಣ್ಣಿನ ಇರುವಿಕೆಯನ್ನಂತೂ ಇಲ್ಲಿನ ಕವಿತೆಗಳು -ಸಾಬೀತು ಮಾಡುತ್ತಿವೆ. ಕವಿತೆಗಳು ಧಿಡೀರ್ ಅಡುಗೆಯಾಗಿ ಮೆರೆಯುತ್ತಿರುವ ಈ ಕಾಲ ನಮ್ಮನ್ನು ಆತಂಕಕ್ಕೂ ತಳ್ಳಿರುವ ಸಂದರ್ಭದಲ್ಲಿ ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡವರ ಬಗ್ಗೆ ಸಹಜವಾಗಿಯೇ ಪ್ರೀತಿ ಹುಟ್ಟುತ್ತದೆ. ತನ್ನೊಳಗಿನ ತಳಮಳವನ್ನೇ ಸಾಮಾನ್ಯವಾಗಿ ಮೊದ ಮೊದಲ ಕವಿತೆಗಳಲ್ಲಿ ಕಾಣುವುದು. ತನ್ನ ವ್ಯಕ್ತಿಗತವಾದ ಅನುಭವಗಳು, ಢಾಳಾದ ಸಾಮಾಜಿಕ ವಾಸ್ತವಗಳು ಇವುಗಳ ವ್ಯಾಖ್ಯಾನ ಅಲ್ಲಿರುತ್ತದೆ. ಸುಮತಿಯವರು ಅದಕ್ಕಿಂತ ಆಳವಾಗಿ, ಗಂಭೀರವಾಗಿ ಬದುಕು ಮತ್ತು - ಮನುಷ್ಯನನ್ನು ಧ್ಯಾನಿಸಲು ಹವಣಿಸುತ್ತಿದ್ದಾರೆ. ಸುಮತಿಯವರಿಗೆ ಕಾವ್ಯಲೋಕದಲ್ಲಿ ಭವಿಷ್ಯವಿದೆ ಎನ್ನುವುದರಲ್ಲಿ ಅನುಮಾನ ಇರಬೇಕಾಗಿಲ್ಲ ಎನ್ನುವುದನ್ನು ಇಲ್ಲಿನ ಕವಿತೆಗಳು ತಮ್ಮ ಸ್ವಶಕ್ತಿಯಿಂದಲೇ ತೋರಿಸಿಕೊಡುತ್ತಿವೆ.
ಎಂ.ಎಸ್.ಆಶಾದೇವಿ (ಮುನ್ನುಡಿಯಿಂದ)
Share
Subscribe to our emails
Subscribe to our mailing list for insider news, product launches, and more.