Skip to product information
1 of 2

Sanjota Purohit

ಊರು ಟೂರು

ಊರು ಟೂರು

Publisher -

Regular price Rs. 200.00
Regular price Rs. 250.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 184

Type -

ಊರು ಬಿಟ್ಟು ಹಾರಿ ಬಂದಿರುವ ನಾನು ಅಮೇರಿಕಾದಲ್ಲಿ ಗುಬ್ಬಚ್ಚಿಯಂತೆ ಅಲೆಯುತ್ತಿರುತ್ತೇನೆ. ಇದು ನನಗೆ ಸಂತೃಪ್ತಿ ನೀಡುವ ಕಾಯಕ. ಪ್ರವಾಸದಿಂದ ಮರಳಿ ಬಂದು ದಣಿವೆಂದು ಕಾಲು ಚಾಚಿ ಮಲಗುವಾಗಿನ ಸುಖ ಬೇರೊಂದಿಲ್ಲ ಎಂದು ನನಗನ್ನಿಸುತ್ತದೆ. ಬಾಲ್ಯ, ಓದು, ಸೈನ್ಸ್ ಇಂಜಿನಿಯರಿಂಗ್ ಪದವಿ, ಜವಾಬ್ದಾರಿ ಎಂದು ಕಳೆದು ಹೋಗಿದ್ದ ನನಗೆ ಕೆಲಸದ ಮೂಲಕ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು ಸುಕೃತವೇ. ಇಲ್ಲದೇ ಇದ್ದಿದ್ದರೆ ಈ ತಿರುಗಾಟದ ಅಸಕ್ತಿ ನನ್ನೊಳಗೆ ಬೆಳೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ.
ಮನೆಯವರನ್ನು, ಅಮ್ಮನನ್ನು ಬಿಟ್ಟು ದೂರದೇಶಕ್ಕೆ ಬಂದಾಗ ಹುಟ್ಟುವ ಅನಾಥ ಭಾವವನ್ನು, ಒಂಟಿತನವನ್ನು ಕಳೆಯಲು ಸಹಾಯ ಮಾಡಿದ್ದು ಈ ತಿರುಗಾಟ. ಈ ತಿರುಗಾಟದಲ್ಲಿ ನಾನು ಹಲವು ವಿಸ್ಮಯಗಳನ್ನು ಕಂಡಿದ್ದೇನೆ. ಅಮೇರಿಕಾದಲ್ಲಿರುವ ಒಟ್ಟು 63 ರಾಷ್ಟ್ರೀಯ ಉದ್ಯಾನವನಗಳಲ್ಲಿ ಹನ್ನೊಂದನ್ನು ನೋಡಿದ್ದೇನೆ. ಮಧ್ಯರಾತ್ರಿಯಲ್ಲಿ ನಾದರ್ನ್ ಲೈಟ್ಸ್ ಅಕಾಶದಲ್ಲಿ ಹೊಳೆಯುವುದನ್ನು ಕಂಡಿದ್ದೇನೆ. ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಮರವನ್ನು ನೋಡಿ ಬೆರಗಾಗಿದ್ದೇನೆ. ಬಣ್ಣವಿಲ್ಲದ ನದಿಯ ನೀರು ಹಸಿರಾಗುವುದಕ್ಕೆ ಸಾಕ್ಷಿಯಾಗಿದ್ದೇನೆ. 18000 ಎಕರೆಗಳಷ್ಟು ದೊಡ್ಡದಾದ ಕಾಡು ಬೆಂಕಿಯಲ್ಲಿ ಸುಟ್ಟು ಹೋಗಿರುವುದನ್ನೂ, ಅಳಿದುಳಿದ ಮರಗಳ ತುದಿಯಲ್ಲಿ ಮತ್ತೆ ಚಿಗುರು ಹುಟ್ಟಿರುವುದನ್ನೂ ನೋಡಿ ಸ್ಪೂರ್ತಿಗೊಂಡಿದ್ದೇನೆ. ಅನ್ನ ನೆಲದಲ್ಲಿ ನಮ್ಮ ದೇವರನ್ನು, ದೇವಸ್ಥಾನವನ್ನು ಕಂಡು ಭಾವಪರವಶಳಾಗಿದ್ದೇನೆ. ಭೂಮಿಯ ಆಳದಲ್ಲಿರುವ ಕಣಿವೆಯೊಳಗೆ ಸುತ್ತಾಡಿದ್ದೇನೆ. ಹೆಲಿಪಾಪ್ಟರಿನಲ್ಲಿ ಕೂತು ನಗರದ ಥಳುಕನ್ನು ಕಣ್ಣು ತುಂಬಿಸಿಕೊಂಡಿದ್ದೇನೆ. ಚಳಿಯಲ್ಲಿ ಹಿಮಗಟ್ಟಿದ ಕೆರೆಯ ಮೇಲೆ ಓಡಾಡಿದ್ದೇನೆ. ಕಾಡಿನಲ್ಲಿ ದಿಕ್ಕೆಟ್ಟು ಕಂಗೆಟ್ಟಿದ್ದಾಗ ಕಣ್ಣಿಗೆ ಬಿದ್ದ ಬೆಳಕನ್ನು ನೋಡಿ ಧನ್ಯಳಾಗಿದ್ದೇನೆ.
ಈ ಎಲ್ಲವೂ ನನ್ನ ಪಾಲಿನ ಅದ್ಭುತಗಳು. ಇವೆಲ್ಲವನ್ನು ದಾಖಲಿಸುವ ಸಣ್ಣ ಪ್ರಯತ್ನವೇ ಈ 'ಊರುಟೂರು' ಸಂಗ್ರಹ. ನಾನು ಕಂಡಿದ್ದನ್ನು ಅಕ್ಷರಗಳಲ್ಲಿ ಸೆರೆಹಿಡಿದು ಆ ವಿಸ್ಮಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಸಧ್ಯಕ್ಕೆ ಎರಡು ದೊಡ್ಡ ಸಮುದ್ರಗಳನ್ನು ಹಾರಿರುವ ಈ ಗುಬ್ಬಚ್ಚಿಯ ಹಾರಾಟ ರೆಕ್ಕೆಗಳಲ್ಲಿ ಶಕ್ತಿಯಿರುವವರೆಗೂ ಅನವರತವಾಗಿರುತ್ತದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)