Skip to product information
1 of 1

Translated by D. N. Srinath

ಉಪಸಂಹಾರ

ಉಪಸಂಹಾರ

Publisher - ರವೀಂದ್ರ ಪುಸ್ತಕಾಲಯ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

'ಉಪಸಂಹಾರ' ದಲ್ಲಿ ಕೃಷ್ಣನ ಅಂತಿಮ ದಿನಗಳ ಕಥೆಯನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದ್ದು, ಇದು ಕೃಷ್ಣನ ಕಥೆಯಷ್ಟೇ ದ್ವಾರಕೆಯ ನಿರ್ಮಾಣ ಮತ್ತು ನಾಶದ ಕಥೆಯೂ ಹೌದು. ಕೃಷ್ಣ ಮಹಾಭಾರತದ ಪ್ರಮುಖ ಪಾತ್ರ - ಯೋಗೇಶ್ವರ, ಯುಗಂಧರ ಲೀಲಾ ಪುರುಷ, ಪೂರ್ಣಾವತಾರ ಮತ್ತು ದೇವರು. ದ್ವಾರಕ ಕೃಷ್ಣನ ಕೊಡುಗೆ, ಅವನ ಸೃಷ್ಟಿ ಆದರೆ ಮಹಾಭಾರತಂಥ ಮಹಾಯುದ್ಧದ ನಂತರ ಈ ದ್ವಾರಕೆಯಲ್ಲಿಯೇ ಕೃಷ್ಣನ ಮತ್ತೊಂದು ರೂಪವನ್ನು ಗಮನಿಸಬಹುದು. ಈ ರೂಪ ದೇವರ ಅಲೌಕಿಕತೆಯಿಂದ ದೂರವಾಗಿ ಮನುಷ್ಯನ ರೂಪವಾಗಿದ್ದು, ಇದರ ಅಸಾಧಾರಣ ಉಪಲಬ್ಧತೆಗಳ ಹಿಂದೆ ನಿಂತ ವಿಫಲತೆಗಳು ಈಗ ಒಂದೊಂದಾಗಿ ಎದುರಿಗೆ ಬರುತ್ತಿವೆ. ಯಾವ ದ್ವಾರಕೆಯನ್ನು ಕೃಷ್ಣ ತಮ್ಮ ಮನಸ್ಸು-ಜೀವದಿಂದ ಸಾಕಾರಗೊಳಿಸಿದ್ದರೋ ಅದರ ಒಂದೊಂದು ಹುಲ್ಲುಕಡ್ಡಿಯೂ ಚೆಲ್ಲಾಪಿಲ್ಲಿಯಾಗುತ್ತಿದೆ. ಯಾವ ಕೃಷ್ಣನ ವಿರಾಟ ರೂಪದೆದುರು ಕುರುಕ್ಷೇತ್ರದಲ್ಲಿ 18 ಅಕ್ಷೋಹಿಣಿ ಸೈನ್ಯ ದೃಷ್ಟಿಯನ್ನು ಕಳೆದುಕೊಂಡಿತ್ತೋ, ಅದೇ ಕೃಷ್ಣ ಈಗ ಅಸಹಾಯಕರಂತೆ ತೋರುತ್ತಾರೆ.

ಅಂತಿಮವಾಗಿ, ಗೆಲುವಿಗೆ ಇರುವ ಅರ್ಥವೇನು? ಸಫಲತೆಗಳು ಕೊನೆಯಲ್ಲಿ ವೈಫಲ್ಯತೆಯಲ್ಲಿ ಮರಯಾಗುವವೇ? ಮಾನವೀಯ ಬದುಕಿನ ಇಂಥ ಅನೇಕ ಮೂಲಭೂತ ಪ್ರಶ್ನೆಗಳ ಬಗ್ಗೆ 'ಉಪಸಂಹಾರ' ದಲ್ಲಿ ಹೊಸ ದೃಷ್ಟಿಕೋನದಿಂದ ಬೆಳಕನ್ನು ಚೆಲ್ಲಲಾಗಿದೆ. ತನ್ನ ಸಂಕ್ಷಿಪ್ತ ನಿಲುವನ್ನು ಹೊರತುಪಡಿಸಿಯೂ 'ಉಪಸಂಹಾರ' ದ ಸ್ವರ ಮಹಾಕಾವ್ಯಾತ್ಮಕವಾಗಿದೆ

ಮಹಾಭಾರತದ ಬಗ್ಗೆ, 'ಜಗತ್ತಿನಲ್ಲಿ ಇದ್ದದ್ದು ಮಹಾಭಾರತದಲ್ಲಿದೆ, ಇದರಲ್ಲಿ ಇಲ್ಲದಿದ್ದದ್ದು ಬೇರೆಲ್ಲೂ ಇಲ್ಲ' ಎಂದು ಹೇಳಲಾಗುತ್ತದೆ. 'ಉಪಸಂಹಾರ' ಓದಿದ ನಂತರ ಈ ಸತ್ಯವನ್ನು ಅರಿಯಬಹುದು.

ಹಿಂದಿಯ ಹಿರಿಯ ಸಾಹಿತಿಗಳು ಮತ್ತು ಪ್ರಸಿದ್ಧ ಸಾಹಿತಿಗಳಾದ ಶ್ರೀ ಕಾಶೀನಾಥ್ ಸಿಂಗ್ ಅವರ ಈ `ಉಪಸಂಹಾರ' ಕಾದಂಬರಿ ಭಾರತೀಯ ಜ್ಞಾನಪೀಠ ಪ್ರಕಾಶನ, ಹೊಸ ದಿಲ್ಲಿ - ಇವರು ಪ್ರಕಟಿಸುತ್ತಿರುವ ಹಿಂದಿಯ ಪ್ರತಿಷ್ಠಿತ ಸಾಹಿತ್ಯಕ ಮಾಸಿಕ 'ನಯಾ ಜ್ಞಾನೋದಯ್" ನಡೆಸಿದ 'ಲೇಖಕರು-ಓದುಗರು: 2013-14 ರ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಶಿಷ್ಟ ಕಾದಂಬರಿಯಾಗಿದ್ದು, ಇದನ್ನು ಡಿ.ಎನ್. ಶ್ರೀನಾಥ್‌ ಕನ್ನಡದ ಕಾದಂಬರಿ ಎನ್ನುವಂತೆ ಅನುವಾದಿಸಿದ್ದಾರೆ.

-ಪ್ರಕಾಶಕರು.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)