Vasudhendra
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಮನೆಗೆ ಹೋಗುವ ದಿನ ಮಾಸ್ತರರು ರಾಧಳಿಗೆ ಒಂದಿಷ್ಟು ಹಣ್ಣು-ಹಂಪಲುಗಳನ್ನು ಕೊಟ್ಟರು. ಅವುಗಳ ಮೇಲಿಟ್ಟಿದ್ದ ನೋಟುಗಳನ್ನು ನಯವಾಗಿ ನಿರಾಕರಿಸಿದ ರಾಧ, 'ಏನ್ರಿ ಮಾಸ್ತರ್ರೆ... ನಿಮ್ಮ ಹತ್ತಿರ ಹಣ ಹೆಂಗೆ ತೊಗಳ್ಳಿ ರೀ...' ಅಂತಂದಳು. 'ಹಂಗಲ್ಲಮ್ಮ ಇಷ್ಟು ಹಚ್ಚಿಗೊಂಡು ಮಾಡಿದ್ದೆ... ಅದಕ್ಕೆ ಪ್ರತಿಯಾಗಿ ನಾವು ಏನಾರ ಕೊಡಬೇಕೋ ಬ್ಯಾಡೋ...' ಅಂತಂದರು. 'ಮಾಸ್ತರ್ರೆ, ಬದುಕು ಮಾಡೋದು ಹೆಂಗೆ ಅಂತ ಕಲಿಸಿ ಕೊಟ್ಟೇರಿ. ಅದಕ್ಕಿಂತ ದೊಡ್ಡದು ಬೇರೆ ಏನು ಕೊಡಲಿಕ್ಕೆ ಆಗೈತೆ ಬಿಡ್ರಿ' ಅಂತಂದು ಖಡಾಖಂಡಿತವಾಗಿ ಹಣವನ್ನು ನಿರಾಕರಿಸಿಬಿಟ್ಟಳು. ಕಾರಿನ ತನಕ ಬಂದು, ಮಗುವಿನ ಮೂಗನ್ನು “ಅ...ಲ...ಲಾ...' ಎಂದು ಅಲ್ಲಾಡಿಸಿ ಬೀಳ್ಕೊಟ್ಟಳು. ಕಾರಿನಲ್ಲಿ ವಾಪಾಸು ಮನೆಗೆ ಹೋಗುವಾಗ ಪ್ರಹ್ಲಾದ ಮಾತನಾಡಿದ, “ಅಪ್ಪ ರಾಧಳಂತಹ ವ್ಯಕ್ತಿ ನನ್ನ ಜೀವನದಲ್ಲಿ ಖಂಡಿತಾ ಸಿಗಂಗಿಲ್ಲ ಅನಿಸ್ತದೆ.
ಈ ರೀತಿ, ರೋಚಕವಾಗಿ ವರ್ಣಿಸುತ್ತ, ತಮ್ಮ ಸಣ್ಣಕಥೆಗಳಲ್ಲಿ ಬೇಕಾದ ವೈಶಿಷ್ಟ್ಯಗಳನ್ನು ತುಂಬುತ್ತ, ಕಥಾ ಗುಚ್ಛವನ್ನು ಲೇಖಕ ವಸುಧೇಂದ್ರ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
