Skip to product information
1 of 2

Dr. B. A. Annadaanesh

ತುಘಲಕ್

ತುಘಲಕ್

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 167

Type - Paperback

ಸಾಕ್ರಟೀಸ್, ಪ್ಲೇಟೋ, ಮೆನ್ಸಿಯಸ್ ಮುಂತಾದ ತತ್ವಜ್ಞಾನಿಗಳು ರಾಜಕೀಯ ಅಧಿಕಾರದಿಂದ ಅಂತರ ಕಾಯ್ದುಕೊಂಡೇ ಸಮಾಜದ ಪಾಪವನ್ನು ತೊಳೆವ, ಆದರ್ಶ ರಾಜ್ಯವನ್ನು ಕಟ್ಟುವ ಕನಸು ಕಂಡವರು. ಸಮಾಜ ಇಂತಹವರಿಗೆ ವಿಷಪ್ರಾಶನ ಮಾಡಿಸಿ, ಇವರ ಬದುಕನ್ನು ಅಸಹನೀಯಗೊಳಿಸಿ ಇವರ ಮೇಲೆ ಪ್ರತೀಕಾರ ತೀರಿಸಿಕೊಂಡಿತು. ಸಮಾಜದ ಪಾಪ ಇವರ ಶರೀರವನ್ನು ಬಲಿ ಪಡೆಯಿತಾದರೂ ಇವರ ಚಾರಿತ್ರ್ಯ ಆ ಪಾಪದ ಲೇಪವಿಲ್ಲದೆ ನಿಷ್ಕಳಂಕವಾಗಿ ಬೆಳಗಿತು. ನಮ್ಮ ತತ್ವಜ್ಞಾನಿಗಳ ಈ ನಿರ್ಲಿಪ್ತತೆಯನ್ನು ನೀರಿಗಿಳಿಯದೆಯೇ ಈಜು ಕಲಿಸುವ ಕೈಪಿಡಿ ರಚನೆಗೆ ಕೈಹಾಕುವ ಓರ್ವ ಲೇಖಕನ ಅಸಂಗತಿಗೆ ಹೋಲಿಸಬಹುದು. ಒಂದು ವೇಳೆ ಇವರ ಕೈಗೆ ಅಧಿಕಾರ ಸೂತ್ರಗಳು ದೊರೆತಿದ್ದರೆ ! ಪ್ರಾಯಶಃ ಇವರ ಶರೀರದೊಂದಿಗೆ ಇವರ ಚಾರಿತ್ರ್ಯಕ್ಕೂ ಸಮಾಜದ ಕಳಂಕಗಳು ಅಂಟಿಕೊಳ್ಳುತ್ತಿದ್ದವು - ತುಘಲಕನಿಗೆ ಅಂಟಿದಂತೆ. ಆದ್ದರಿಂದಲೇ ಇವರ ಈ ಮಡಿವಂತಿಕೆಯ ಚಿಂತನೆಯನ್ನು ಕಾರ್ಲ್‌ಮಾರ್ಕ್ಸ್ 'ಭೂರ್ಶ್ವಾ ಚಿಂತನೆ' ಎಂದು ಲೇವಡಿ ಮಾಡಿದ್ದು.

ಮಧ್ಯಯುಗದ ದೆಹಲಿ ಸುಲ್ತಾನನಾಗಿದ್ದ ಮಹಮ್ಮದ್ ಬಿನ್ ತುಘಲಕ್ ಜಗತ್ತಿನ ಹಲವು ಜ್ಞಾನಧಾರೆಗಳಲ್ಲಿ ಅಗಾಧ ಪರಿಶ್ರಮ ಹೊಂದಿದ್ದ. ಸಂಸ್ಕೃತ, ಪರ್ಷಿಯನ್, ಅರೆಬಿಕ್ ಒಳಗೊಂಡಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ. ಆದರೆ ಅವನ ರಾಜಕೀಯ ಅಧಿಕಾರ ಅವನ ಉಳಿದೆಲ್ಲ ಗುಣಗಳನ್ನೂ ಮರೆಮಾಚಿತು. ಇಂತಹ ನತದೃಷ್ಟನ ಬದುಕನ್ನಾಧರಿಸಿದ ತುಘಲಕ್ ನಾಟಕ ಅಧಿಕಾರ ರಾಜಕಾರಣದಲ್ಲಿ ಕ್ರಿಯಾಶೀಲವಾಗಿ ಇದ್ದುಕೊಂಡೇ ಕನಸಿನ ಆದರ್ಶಗಳನ್ನು ನನಸಾಗಿಸುವ ಸಾಧ್ಯತೆಗಳ ಹುಡುಕಾಟದಲ್ಲಿ ತೊಡಗಿದ ಭಾರತೀಯ ಬೌದ್ಧಿಕತೆಗೆ ಪ್ರಾಪ್ತವಾದ ಅನರ್ಘ್ಯ ಫಲ ಅಥವಾ ಆ ಹುಡುಕಾಟದ ಪಯಣದಲ್ಲಿ ನಮ್ಮ ಬೌದ್ಧಿಕತೆಗೆ ಕಾಣಿಸಿದ ಒಂದು ಮಹತ್ವದ ಮೈಲಿಗಲ್ಲು. ದೂರದ ನಕ್ಷತ್ರದಂತೆ ಹೊಳೆಯುವ ಮೌಲ್ಯ ರಾಜಕಾರಣದ ಉದಾತ್ತ ಕನಸುಗಳು ಭೂಮಿಯ ಮೇಲೆ ಸಾಕಾರಗೊಳ್ಳುವವರೆಗೂ ತುಘಲಕ್ ನಾಟಕ ನಮಗೆ ಪ್ರಸ್ತುತವಾಗಿರುತ್ತದೆ. ಸಾಕಾರಗೊಂಡ ತರುವಾಯವೂ ಕಾರ್ನಾಡರ ನಾಟಕ ರಚನಾ ತಂತ್ರಗಾರಿಕೆಯ ಕಾರಣಕ್ಕೆ ಇದು ಭವಿಷ್ಯದ ತಲೆಮಾರಿನ ನಾಟಕಕಾರರಿಗೆ ಮೇಲ್ಪಂಕ್ತಿಯಾಗಿರುತ್ತದೆ ಮತ್ತು ಒಂದು ಸವಾಲಾಗಿರುತ್ತದೆ.

-ಡಾ. ವಾಸುದೇವಮೂರ್ತಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)