Prof. K. M. Seetharamayya
ಟ್ರೋಜನ್ ಯುದ್ಧ
ಟ್ರೋಜನ್ ಯುದ್ಧ
Publisher - ಐಬಿಹೆಚ್ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಹೋಮರನ 'ಇಲಿಯಡ್' ಜಗತ್ತಿನ ಸುಪ್ರಸಿದ್ಧ ಯುದ್ಧ ಮಹಾಕಾವ್ಯ. ಎಲ್ಲ ಕಾಲದಲ್ಲೂ ಜಗತ್ತಿನ ಸಾಹಿತ್ಯಪ್ರೇಮಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಈ ಕಾವ್ಯವನ್ನು ಐರೋಪ್ಯ (ಮಹಾ) ಕಾವ್ಯಗಳ ತಾಯಿ ಎಂದೇ ತಿಳಿಯಲಾಗಿದೆ. ಟ್ರೋಜನ್ ಯುದ್ಧದ ಈ ಕಥನ ಮಾನುಷ-ಅತಿಮಾನುಷ ಘಟನೆಗಳು, ದೈವದ ಶಕ್ತಿ-ಚೈತನ್ಯಗಳ ವಿಭಿನ್ನ ನೆಲೆಗಳೊಂದಿಗೆ ಕೂಡಿ ಕುತೂಹಲ, ಆಶ್ಚರ್ಯಗಳ ಗಣಿಯೆನಿಸಿದೆ.
ಎಖಿಲಿಸ್ ಅನುಭವಿಸಿದ ಅವಮಾನ, ಅವನ ಪ್ರಚಂಡ ಸಿಟ್ಟು, ಅದಕ್ಕಾಗಿ ಅವನು ತೋರುವ ಪ್ರತೀಕಾರ ಈ ಕಾವ್ಯದ ಒಂದು ಮಹತ್ವದ ಕೇಂದ್ರದಂತೆ ತೋರುತ್ತದೆಯಾದರೂ 'ಇಲಿಯಡ್' ಮಹಾಕಾವ್ಯ ವಿನಾಶದ ಸರಣಿ ಯನ್ನೇ ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿದೆ.
ಹೋಮರನ ಈ ಮಹಾಕಾವ್ಯವನ್ನು ಪ್ರೊ|| ಕೆ.ಎಂ. ಸೀತಾರಾಮಯ್ಯನವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಗ್ರೀಕ್ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ, ಶ್ರದ್ಧೆಗಳಿಂದ ತೊಡಗಿಸಿ ಕೊಂಡಿರುವುದನ್ನು ಕನ್ನಡ ಓದುಗರು ಚೆನ್ನಾಗಿ ಬಲ್ಲರು.
ಅನುವಾದಕರು 'ಇಲಿಯಡ್' ಕೃತಿಯ ಎಲ್ಲ ಸತ್ವಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಕನ್ನಡಕ್ಕೆ ತಂದಿದ್ದಾರೆ. ಓದುಗರಿಗೆ ಈ ಕೃತಿ ಪ್ರಿಯವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
-ಕಿ.ರಂ. ನಾಗರಾಜ

Share
Subscribe to our emails
Subscribe to our mailing list for insider news, product launches, and more.