Supreet. K. N.
ತರ್ಕ
ತರ್ಕ
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 216
Type - Paperback
'ತರ್ಕ'ಕ್ಕೂ ಮೊದಲು ನಾನು ಬರೆದ ಕಾದಂಬರಿಗಳು ಹೊರಗೆ ನಡೆಯುತ್ತಿದ್ದ ಘಟನೆಗಳಿಂದ ಸ್ಫೂರ್ತಿ ಪಡೆದು ರಚಿಸಿದ್ದು, ಆದರೆ ತರ್ಕ ಬರೆಯುವ ಹೊತ್ತಿಗೆ ನನ್ನಲ್ಲೇ ಹಲವಾರು ಬದಲಾವಣೆಗಳಾಗಿ ದೇವರು, ಯಂತ್ರ, ಮಂತ್ರ, ತಂತ್ರ, ಉಪಾಸನೆ, ವೇದಾಂತ ಇವುಗಳ ಬಗ್ಗೆ ಗಂಭಿರವಾಗಿ ಯೋಚಿಸಲು ಶುರು ಮಾಡಿದ್ದೆ. ಈ ಕಾದಂಬರಿಯ ಪಾತ್ರಗಳು, ಸನ್ನಿವೇಶಗಳು ಮೇಲು ನೋಟಕ್ಕೆ ಹೊರಗಿನಿಂದ ಸ್ಫೂರ್ತಿ ಪಡೆದು ಬರೆದಿರುವುದು ಅನಿಸಿದರೂ, ಅವೆಲ್ಲಾ ನನ್ನೊಳಗೇ ಆಗುತ್ತಿದ್ದ ದೇವರು ಇದ್ದಾನಾ? ಇದ್ದರೆ ಎಲ್ಲಿದ್ದಾನೆ? ಎಲ್ಲವೂ ಅವನ ನಿರ್ಣಯವೇ? ಎನ್ನುವ ಗೊಂದಲ, ಘರ್ಷಣೆಗಳಿಂದ ಹುಟ್ಟಿದ್ದಂತವು. 'ತರ್ಕ' ಅನೇಕರಲ್ಲಿ 'ಹೀಗೆಲ್ಲಾ ನಡೆಯುತ್ತಾ?' ಎನ್ನುವ ಅಚ್ಚರಿ ಮೂಡಿಸಿ, ಇದೊಂದು ಅದ್ಭುತ ಕೃತಿ ಎನ್ನುವ ಭಾವ ಮೂಡಿಸಿದರೆ, ಇನ್ನು ಕೆಲವರಲ್ಲಿ 'ಇವೆಲ್ಲಾ ಸಾಧ್ಯವಿಲ್ಲ' ಎನ್ನುವ ತಿರಸ್ಕಾರವೂ ಮೂಡಿಸಿ, ಇದೊಂದು ಅಪ್ರಬುದ್ಧ ಕೃತಿ ಎನ್ನುವ ತೀರ್ಮಾನಕ್ಕೆ ಬರುವಂತೆ ಮಾಡಿದೆ. ವರ್ಷಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತೆ. ಅವುಗಳ ನಡುವೆ, ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದ ಈ ಕೃತಿಯ ಬಗ್ಗೆ ಇವತ್ತಿಗೂ ಓದುಗರು ಮಾತನಾಡಿದಾಗ ಲೇಖಕನಾದ ನನಗೆ ಸಾರ್ಥಕ ಎನಿಸುವುದು ಸಹಜ.
- ಸುಪ್ರೀತ್. ಕೆ. ಎನ್
Share
Subscribe to our emails
Subscribe to our mailing list for insider news, product launches, and more.