Radhakrishna. S. Bhadti
Publisher - ವಿಶ್ವವಾಣಿ ಪುಸ್ತಕ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡದಲ್ಲಿ ನೀರಿನ ಬಗ್ಗೆ 'ಧಾರಾಕಾರ'ವಾಗಿ ಬರೆದ ಯಾರಾದರೂ ಒಬ್ಬರಿದ್ದರೆ, ಆದು ರಾಧಾಕೃಷ್ಣ ಭಡ್ತಿ. ನೀರಿನ ಬಗ್ಗೆ ನೀರು ಕುಡಿದಷ್ಟು ಸಲೀಸಾಗಿ ಬರೆದು, 'ಜಲಪತ್ರಕರ್ತ' ಎಂಬ ವಿಶೇಷ ಹಣೆಪಟ್ಟಿಯನ್ನು ಸಂಪಾದಿಸಿಕೊಂಡ ಭಡ್ತಿ ಒಂದು ವಿಷಯವನ್ನು ಎಷ್ಟೊಂದು ಆಯಾಮ ಮತ್ತು ದೃಷ್ಟಿಕೋನಗಳಲ್ಲಿ ನೋಡಿ, ವಿಷಯ ವಿಸ್ತಾರದ ವ್ಯಾಪ್ತಿಯನ್ನು ಹರವಿಡಬಹುದು ಎಂಬುದನ್ನು ತೋರಿಸಿಕೊಟ್ಟವರು. ನೀರೆಂಬ ಒಂದು ವಿಷಯವನ್ನು ಇಟ್ಟುಕೊಂಡು ಹಲವು ವರ್ಷಗಳ ಕಾಲ ನಿರಂತರವಾಗಿ ಬರೆಯುವುದು ಸಣ್ಣ ವಿಷಯವಲ್ಲ. ಅವ್ಯಾಹತವಾಗಿ ನೀರನ್ನು ಮೊಗೆದರೆ ತುಂಬಿದ ಬಾವಿಯೂ ಬರಿದಾಗಬಹುದು. ಆದರೆ ನೀರಿನ ಬಗ್ಗೆ ಅಷ್ಟು ವರ್ಷಗಳಿಂದ ಅವೆಷ್ಟೋ ವಿಷಯಗಳನ್ನು ಮೊಗೆದು ಕೊಡುತ್ತಿರುವ ಭಡ್ತಿಯ ಕೊಡ ಮತ್ತು ವಿಷಯ ಕೊಳ್ಳ ಮಾತ್ರ ಬರಿದಾಗಿಲ್ಲ. ಅದು ಧಾರೆಯಾಗಿ ಹರಿಯುತ್ತಲೇ ಇದೆ.
ಹೀಗೆಂದು ನಾನು ಕೆಲ ವರ್ಷಗಳ ಹಿಂದೆ ಹೇಳಿದ್ದೆ. ನನ್ನ ಮಾತನ್ನು ಭಡ್ತಿ ಸುಳ್ಳು ಮಾಡಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಭಡ್ತಿ, 'ನೀರಿನ ಆಚೆ'ಯ ಬದುವುಗಳನ್ನು ಹುಡುಕಿಕೊಂಡು ಪಾತಳಿ ಕಂಡುಕೊಂಡಿರುವುದು ಗಮನಾರ್ಹ. 'ಜಲಪತ್ರಕರ್ತ' ಎಂಬ ಅಭಿದಾನದ ಆಳದಲ್ಲಿ ಮುಳುಗಿಹೋಗದೇ, ಬೇರೆ ದಡವನ್ನು ಕಂಡುಕೊಳ್ಳುವ ಭಡ್ತಿ ಅವರ ಪ್ರಯತ್ನವನ್ನು ಈ ಕೃತಿಯಲ್ಲಿ ಗುರುತಿಸಬಹುದಾಗಿದೆ. ಹರಿವ ನದಿಗಳೆಲ್ಲ ಸಾಗರ ಸೇರಿದರೂ, ಅದರಾಚೆಯ ಮತ್ತೊಂದು ನೀರಿನ ಲೋಕವಾದ 'ಸುಪ್ತಸಾಗರ'ದ ಕಲ್ಪನೆ, ಆಳ, ವ್ಯಾಪ್ತಿಯನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ.
ನೀರನ್ನು ಬಿಟ್ಟು ಭಡ್ತಿ ಏನನ್ನೂ ಬರೆಯಲಾರರು ಎಂದು ಭಾವಿಸಿದವರಿಗೆ ಸವಾಲು ಎಸೆಯುವಂತೆ, ನೀರಿನ ಆಚೆಗೆ ಒಂದಷ್ಟು ವಿಷಯಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ನಿರಂತರ ಹುಡುಕಾಟ, ಸಂಶೋಧನೆ, ಅಧ್ಯಯನದಲ್ಲಿ ತೊಡಗಿದ ಒಬ್ಬ ವೃತ್ತಿಪ್ರಿಯ ಪತ್ರಕರ್ತನ ತುಡಿಯುವ, ಮಿಡಿಯುವ ಬರಹಗಳಾಗಿವೆ, ನೀರಿನ ಹೊರತಾಗಿಯೂ ಬೇರೆ ವಿಷಯಗಳ ಬಗ್ಗೆ ಬರೆದೂ ಭಡ್ತಿ ತೋರಿಸಬಲ್ಲರು. ಇಲ್ಲಿವೆ ಅಂಥ ಹನಿಗಳು, ಬರಹಬಿಂದುಗಳು.
-ವಿಶ್ವೇಶ್ವರ ಭಟ್
ವಿಶ್ವವಾಣಿ, ಪ್ರಧಾನ ಸಂಪಾದಕ