Skip to product information
1 of 2

D. V. G.

ಶ್ರೀರಾಮ ಪರೀಕ್ಷಣಂ

ಶ್ರೀರಾಮ ಪರೀಕ್ಷಣಂ

Publisher - ಸಾಹಿತ್ಯ ಭಂಡಾರ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 125

Type - Paperback

ಶ್ರೀರಾಮನು ಪುರಾಣ ಪುರುಷನಾದರೂ ಮನುಷ್ಯಲೋಕದಿಂದ ಹೊರಗಿರುವವನಲ್ಲ. ಆತನು ಕೂಡ ವಿಚಾರ ಮಾಡಿದ್ದಾನೆ, ಸಾಧನೆಮಾಡಿದ್ದಾನೆ, ಮತ್ತು ಕತ್ತಲೆಯಿಂದ ಬೆಳಕಿಗೆ ಬಂದಿದ್ದಾನೆ. ಅಹಲೈ, ವಾಲಿ, ಸೀತೆ ಮೊದಲಾದ ಪಾತ್ರಗಳು ಶ್ರೀರಾಮನು ನಡೆಸಿದ ಸಾಧನೆಯಲ್ಲಿ ಕ್ರಮಶಃ ಬರುವ ಮೆಟ್ಟಲುಗಳು, ಪಾಪವೃತ್ತಾಂತದಿಂದ ಮನಃಪರಿತಾಪ; ಆತ್ಮ ತಾಪದಿಂದ ಧರ್ಮ ವಿಚಾರ ಕುತೂಹಲ; ಈ ವಿಚಾರ ಕುತೂಹಲದಿಂದ ಮಾನವಸ್ವಭಾವ ಪರಾಮರ್ಶೆ, ಅದರಿಂದ ಸೃಷ್ಟಿ ತತ್ತ್ವಚಿಂತನೆ, ವಿಶ್ವಸಹಾನುಭೂತಿ, ವಿಶ್ವವ್ಯಾಪಕ ದೃಷ್ಟಿ ಪರತತ್ವ ದರ್ಶನ, ಪರಮಶಾಂತಿ-ಇವು ಹೇಗೆ ಕ್ರಮಕ್ರಮವಾಗಿ ಶ್ರೀರಾಮನಲ್ಲಿ ನೆಲೆಗೊಂಡವೆಂಬುದನ್ನೂ, ಸಂಶೋಭೆಯಿಂದ ಸ್ವಸ್ಥಭಾವಕ್ಕೆ ಆ ಉತ್ತಮಜೀವ ಹೇಗೆ ಯಾತ್ರೆ ನಡೆಸಿತೆಂಬುದನ್ನೂ ಡಿ.ವಿ.ಜಿ. ಅವರು ನಮ್ಮ ಮುಂದಿಟ್ಟಿದ್ದಾರೆ; ಈ ಆತ್ಮಸಂಸ್ಕಾರದ ಚಿತ್ರವನ್ನು ಸುಲಭವಾಗಿ ನಾವು ಗ್ರಹಿಸುವಂತೆ ಆಯಾ ಪಾತ್ರಗಳನ್ನು ತಂದುಕೊಂಡು, ಅವರವರ ಬಾಯಿಂದಲೇ ಅವರವರ ಮನೋಭಾವಗಳನ್ನೂ ವಾದಗಳನ್ನೂ ಹೇಳಿಸಿ, ನಾಟಕದ ದಿವ್ಯಕಳೆಯನ್ನು ಈ ಕಾವ್ಯಕ್ಕೆ ಕೊಟ್ಟಿದ್ದಾರೆ. ರಸಜ್ಞರಿಗೆ ಕಾವ್ಯಾಮೃತ, ಲೌಕಿಕರಿಗೆ ಧರ್ಮಸೂಕ್ಷ್ಮಗಳ ಮತ್ತು ಜೀವನರಹಸ್ಯಗಳ ಬೋಧೆ, ಮುಮುಕ್ಷುಗಳಿಗೆ ಅಧ್ಯಾತ್ಮ ಜ್ಞಾನ ಈ ಮೂರೂ ಈ ಸಣ್ಣ ಕಾವ್ಯದಲ್ಲಿ ದೊರೆಯುವುದರಿಂದ ನಮ್ಮ ಜೀವನಯಾತ್ರೆಯೂ ಸಹ ಕ್ರಮವಾಗಿ ಈ ಮೆಟ್ಟಲುಗಳನ್ನು ಹತ್ತಿ ಕಡೆಗೆ ಮೌನಗಂಭೀರದ ನಿತ್ಯಶಾಂತಿಯಲ್ಲಿ ಪರಿಣಾಮಕಾರಿಯಾಗಲೆಂದು ಡಿ.ವಿ.ಜಿ. ಅವರು ಹಾರೈಸುತ್ತಾರೆಂದು ತೋರುತ್ತದೆ.

ಡಿ.ವಿ.ಜಿ. ಅವರು ಪೂರ್ವಿಕರೂ ಅಹುದು, ಆಧುನಿಕರೂ ಅಹುದು ಎಂಬುದನ್ನು ಈ ಸಣ್ಣ ಕಾವ್ಯ ಚೆನ್ನಾಗಿ ತೋರಿಸಿಕೊಡುತ್ತದೆ.

-ಎಂ. ಆರ್. ಶ್ರೀ.

'ಶ್ರೀರಾಮ ಪರೀಕ್ಷಣಂ'... ವಿಷಯ ಹಳೆಯದಾದರೂ ಆಧುನಿಕ ದೃಷ್ಟಿಯಿಂದ ನೋಡಿ ಮಾಡಿದ ಜೀವನ ವಿಮರ್ಶೆಯಿದೆ, ಲೌಕಿಕ ಮತ್ತು ಧಾರ್ಮಿಕ ತತ್ತ್ವಗಳ ಸೂಕ್ಷ್ಮ ವಿವೇಚನೆಯಿದೆ.

-ಡಾ. ಎ. ಆರ್. ಕೃಷ್ಣಶಾಸ್ತ್ರೀ

'ಶ್ರೀರಾಮ ಪರೀಕ್ಷಣ'ವೆಂಬ ಪುಟ್ಟ ಕಾವ್ಯವು ಶ್ರೀರಾಮರಶ್ಮಿಗೆ ಒಡ್ಡಿದ ಮುಮ್ಮೂಲೆಯ ಪಟ್ಟಕದಂತಿದ್ದು (Prism) ಶ್ರೀರಾಮನ ಅಂತರಂಗಜ್ಯೋತಿಯನ್ನು ಬಣ್ಣಬಣ್ಣವಾಗಿ ಬಿಡಿಸಿ ತೋರಿಸಿದೆ.

– ಕಾವ್ಯತರಂಗಿಣಿ (ಮೈಸೂರು ವಿಶ್ವವಿದ್ಯಾನಿಲಯ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)