1
/
of
2
Dr. K. S. Acharya Narayanacharya
ಶ್ರೀ ರಾಮಾಯಣ ಪಾತ್ರ ಪ್ರಪಂಚ
ಶ್ರೀ ರಾಮಾಯಣ ಪಾತ್ರ ಪ್ರಪಂಚ
Publisher - ಸಾಹಿತ್ಯ ಭಂಡಾರ
Regular price
Rs. 800.00
Regular price
Rs. 800.00
Sale price
Rs. 800.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 680
Type - Paperback
Couldn't load pickup availability
...ಒಂದೊಂದು ಪಾತ್ರದ ಸಾದ್ಯಂತ ಸಮೀಕ್ಷೆಯೆಂದರೆ ಎಷ್ಟು ಪಾತ್ರಗಳಿವೆಯೊ ಅಷ್ಟು ಸಲ ರಾಮಾಯಣಾರಣ್ಯವನ್ನು ಸುತ್ತಿ ಬಂದ ಅನುಭವ ನಮಗಾಗುತ್ತದೆ. ಆದರೆ ಆಚಾರ್ಯರು ಎಷ್ಟು ಕುಶಲತೆ ಸೂಕ್ಷ್ಮತೆಯಿಂದ ಒಂದೊಂದು ಪಾತ್ರ ವಿಶ್ಲೇಷಣೆ ಮಾಡುತ್ತಾರೆಂದರೆ ಯಾವ ರಾಮಾಯಣ ಸಂಗತಿ, ಸನ್ನಿವೇಶಗಳೂ ಆಯಾ ಪಾತ್ರ ವಿವೇಚನಾ ಕಾಲಕ್ಕೆ ಪುನರುಕ್ತವಾಗುತ್ತಿರುವಂತೆ ನಮಗೆ ಅನಿಸುವುದೇ ಇಲ್ಲ. ಅಂತಹ ಒಂದು ರೋಚಕತೆಯಿಂದ ರೋಮಾಂಚಕತೆಯಿಂದ ಅಂತಹ ಒಂದು ರಮ್ಯತೆಯಿಂದ, ಅಂತಹ ಒಂದು ರಸವಂತಿಕೆಯಿಂದ ಒಂದೊಂದು ಪಾತ್ರವನ್ನೂ ಚಿತ್ರಿಸುತ್ತಾರೆ. ಹೀಗೆ ಚಿತ್ರಿಸುತ್ತ ರಾಮಾಯಣದ ಕಥಾನಕವೆಲ್ಲ ನಮ್ಮ ಕಣ್ಮುಂದೆ ನಾಟ್ಯ ಪೂರ್ಣ ಸನ್ನಿವೇಶದಿಂದ ಸನ್ನಿವೇಶಕ್ಕೆ ಸಂಚರಿಸುತ್ತಾ ಸಾಗುತ್ತದೆ ರಿಪಬ್ಲಿಕ್‌ಡೇ ದರ್ಬಾರ್ ನಲ್ಲಿ ನಮ್ಮ ಕಣ್ಣೆದುರಿಗೇ ವರ್ಣರಂಜಿತ ಇತಿಹಾಸ ಚಿತ್ರಗಳು (ಟ್ಯಾಬ್ಲೋಗಳು) ಜೀವಂತಿಕೆಯಿಂದ ವೈಭವ ವಿದಾಯಗಳಿಂದ ಪತಸಂಚಲನ ಮಾಡುತ್ತಿರುವಂತೆ ತೋರುತ್ತದೆ. ಒಂದೊಂದು ಪಾತ್ರವೂ ತನ್ನ ಪಾತ್ರತೆಯಿಂದ ಆಗಲಿ, ಆಪಾತ್ರತೆಯಿಂದಲೆ ಆಗಲಿ ತನ್ನ ಸೌಷ್ಠವದಿಂದಲೆ ಆಗಲಿ, ದೌಷ್ಟ್ಯದಿಂದಲೆ ಆಗಲಿ ಇಡಿಯ ರಾಮಾಯಣ ಗಾಥೆಗೆ ಅದರ ಕೊಡುಗೆ ಉಳಿತೇ ಇರಲಿ, ಕೆಡುಕೇ ಇರಲಿ – ಏನು ಎಂಬ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಮಾಡಿಕೊಡುತ್ತಾರೆ.
ಹಾಗೆ ನೋಡಿದರೆ ರಾಮಾಯಣದ ಶಿಷ್ಟ, ದುಷ್ಟ ಪಾತ್ರಗಳೆಲ್ಲಾ ಒಂದು ರೂಪಕೋಪಾದಿಯಲ್ಲಿ (Allegory) ನಮ್ಮ ಜನಜೀವನ ಪ್ರವಾಹ ಪ್ರತಿಬಿಂಬಗಳಾಗಿ ಕಾಣಿಸಿಕೊಳ್ಳುವಂತಹ ವ್ಯಕ್ತಿತ್ವ, ಜೀವಂತಿಕೆಯುಳ್ಳವು. ನಮ್ಮಲ್ಲೇ ರಾಮ ರಾವಣರು ಮನೆ ಮಾಡಿಕೊಂಡಿದ್ದಾರೆ. ಅಂತಹ ರಾವಣರನ್ನೂ ಇಲ್ಲವಾಗಿಸಿ ರಾಮತ್ವವನ್ನು ಪಡೆಯುವುದೆ ಬದುಕಿನ ಉತ್ತಮತೆ, ಉತ್ ಯೋವಾಗಬೇಕು. ಹಾಗಾದಾಗ ನಮ್ಮ ಬದುಕಿಗೊಂದು ಅರ್ಥವಂತಿಕೆ ಬರುತ್ತದೆಂಬುದನ್ನು ನಮ್ಮ ಲವಲವಿಕೆಯ ಲೇಖಕರು ತೋರಿಸಿಕೊಡುತ್ತಾರೆ. ಹೀಗೆ ರಾಮಾಯಣ ಪಾತ್ರಪ್ರಪಂಚದ ದರ್ಪಣದಿಂದ ನಮ್ಮ ಜೀವನಕ್ಕೊಂದು ಆದರ್ಶವನ್ನು ಒದಗಿಸುತ್ತಾರೆ.
-ಎನ್ಕೆ (ಮುನ್ನುಡಿಯಲ್ಲಿ)ದ)

Share

Subscribe to our emails
Subscribe to our mailing list for insider news, product launches, and more.