Skip to product information
1 of 1

B. Malini Malya

ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ

ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ

Publisher - ವಸಂತ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 144

Type - Paperback

ಸಮಾಜಸುಧಾರಣಾಧ್ಯೇಯದಿಂದ ಸಾರ್ವಜನಿಕ ಬದುಕಿಗೆ 1920ರ ದಶಕದ ಆರಂಭದಲ್ಲೇ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕನ್ನಡದ ನೆಲದ ಹೆಮ್ಮೆಯ ಲೇಖಕ ಕೋಟ ಶಿವರಾಮ ಕಾರಂತರು ಹೆಚ್ಚು ಕಡಿಮೆ ಒಂದು ಶತಮಾನದ ಉದ್ದಕ್ಕೂ ಚಾಚಿದ್ದ ತಮ್ಮ ಬದುಕಿನಲ್ಲಿ ಧ್ಯೇಯಾತ್ಮಕವಾಗಿಯೇ ಬದುಕನ್ನು ಸಾಗಿಸಿದ ಮಹಾನ್ ಸಾಹಿತಿ ಎಂಬ ಸಂಗತಿ ಸರ್ವ ವಿದಿತ.

ದೇಶ, ಭಾಷೆ, ಸಮಾಜ ಸುಧಾರಣೆಗಳೇ ಬದುಕಿನುದ್ದಕ್ಕೂ ಕಾರಂತರ ಉಸಿರಾಗಿದ್ದಂತೆ, ನಮ್ಮ ಜನರ ಜ್ಞಾನದ ಮಟ್ಟ ನಮ್ಮ ಮಾತೃಭಾಷೆಯ ಅಭಿವೃದ್ಧಿಯ ಜತೆಜತೆಯಲ್ಲೇ ಬೆಳೆಯಬೇಕೆಂಬುದು ಅವರ ಅದಮ್ಯ ಆಕಾಂಕ್ಷೆಯಾಗಿತ್ತು. ಮಕ್ಕಳ ಜ್ಞಾನವಿಕಸನದ ಜತೆಯಲ್ಲೇ ಸಾಮಾಜಿಕ ಪಿಡುಗು, ಅನಿಷ್ಟ ಪದ್ಧತಿಗಳ ನಿರ್ಮೂಲನೆ ಸಾಹಿತಿ ಕಾರಂತರ ಅದಮ್ಯ
ಕಳಕಳಿಯಾಗಿದ್ದುದರಿಂದಾಗಿ, ಅವರ ಸಣ್ಣಕತೆಗಳಲ್ಲಿ ಹೇಗೋ-ಹಾಗೆಯೇ ಬಾಲ್ಯದಿಂದ ತಾರುಣ್ಯಕ್ಕೆ ಕಾಲಿರಿಸುವ ಆರಂಭದ ಹಂತದ ಮಕ್ಕಳಿಗೆ ಕಾರಂತರು ನೀಡಿರುವ ಮಕ್ಕಳ ಸಾಹಿತ್ಯವನ್ನು ಗಮನಿಸಬಹುದು.

ಕಾರಂತರು ಕೊಟ್ಟಿರುವ ಮಕ್ಕಳ ಸಾಹಿತ್ಯ ಬಾಲರ ವ್ಯಕ್ತಿತ್ವದ ವಿಕಸನದ ಧ್ಯೇಯದಿಂದ ಕೂಡಿರುವುದನ್ನು ಅವರು ಆರಿಸಿಕೊಂಡಿದ್ದ ಕತೆಗಳು ತಿಳಿಸುತ್ತವೆ

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
SANGEETHA Kb

ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ