Skip to product information
1 of 2

Prakasha Hemavati

ಶಿವಮಾರ ಸೈಗೊಟ್ಟ

ಶಿವಮಾರ ಸೈಗೊಟ್ಟ

Publisher - ಸಾಹಿತ್ಯ ಭಂಡಾರ

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 144

Type - Paperback

ಇನ್ನೇನು ಅಮೋಘವರ್ಷನನ್ನು ಸಮೀಪಿಸುತ್ತಿದ್ದಾನೆನ್ನುವಷ್ಟರಲ್ಲಿ ಸುತ್ತಲಿದ್ದ ರಾಷ್ಟ್ರಕೂಟರ ಸೈನಿಕರಿಗೆ ಶಿವಮಾರನ ಗುರುತು ಸಿಕ್ಕಿತು. ಕೂಡಲೇ ಅವರಲ್ಲಿ ಕೆಲವರು ಇತರರ ಗಮನ ಸೆಳೆಯಲು ಉಚ್ಚಸ್ವರದಲ್ಲಿ:

 ಇದೋ ಗಂಗರ ಅರಸ! ಶಿವಮಾರ ರಾಜ! ಶಿವಮಾರ ರಾಜ! ಎಂದೆಲ್ಲಾ ಬೊಬ್ಬೆ ಹಾಕತೊಡಗಿದರು. ಈ ಗಲಭೆಯ ಮಧ್ಯೆಯೆ ಶಿವಮಾರ ತನ್ನ ಬಿಲ್ಲನ್ನು ತೆಗೆದು ಅಮೋಘವರ್ಷನ ಕಡೆಗೆ ಗುರಿಯಿಡಲು ಪ್ರಯತ್ನಿಸುತ್ತಿದ್ದ. ಆಗ ಒಮ್ಮೆಲೇ ಆರೇಳು ಬಾಣಗಳು ಶಿವಮಾರನ ಮೈಯನ್ನು ನಾಟಿದವು. ಅಲ್ಲಾಗುತ್ತಿದ್ದ ಗಲಭೆಯಿಂದಾಗಿ ಅತ್ತಕಡೆ ಗಮನ ಹರಿಸಿದ ಗಜಪಡೆಯ ಬಿಲ್ಲುಗಾರರು ಶಿವಮಾರ ತಮ್ಮ ಅರಸನ ಕಡೆಗೆ ಬಾಣದ ಗುರಿಯಿಡುತ್ತಿದ್ದುದನ್ನು ನೋಡಿ ಅವರೆಲ್ಲರೂ ಒಟ್ಟಾಗಿಯೇ ಬಾಣ ಪ್ರಯೋಗ ಮಾಡಿದ್ದರು. ಒಟ್ಟಾಗಿಯೇ ನಾಟಿದ ಬಾಣಗಳಿಂದಾದ ನೋವಿಗೆ ಚೀತ್ಕರಿಸುತ್ತಾ ಮುಂದಕ್ಕೆ ಉರುಳಿ ಬೀಳುವಂತಾದ ಶಿವಮಾರ ಹಾಗೆಯೇ ಸಂಭಾಳಿಸಿಕೊಳ್ಳುತ್ತಾ ತನ್ನ ಕುದುರೆಯ ಕೊರಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮೂರ್ಛಹೋದ. ಕೂಡಲೇ ಆತನೊಂದಿಗಿದ್ದ ಗಂಗರ ಅಶ್ವಪಡೆಯವರು ಆತನನ್ನು ಸುತ್ತುವರಿದು ಕಾಳಗ ನಿಲ್ಲಿಸುವಂತೆ ಕೇಳಿಕೊಳ್ಳತೊಡಗಿದರು. ರಾಷ್ಟ್ರಕೂಟರ ಅರಸ ಅಮೋಘವರ್ಷನೂ ಸಹ ಕಾಳಗ ನಿಲ್ಲಿಸುವಂತೆ ಆಜ್ಞಾಪಿಸಿದನು. ಹಾಗೆಯೇ ಶಿವಮಾರನನ್ನು ಅವರೊಂದಿಗೆ ಕರೆದುಕೊಂಡು ಹೋಗುವುದಕ್ಕೆ ಯಾರೂ ಅಡ್ಡಿಪಡಿಸಬಾರದೆಂದು ಆಣತಿಯಿತ್ತನು.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)