Skip to product information
1 of 2

English : Vaibhav Purandare, Translated by B. S. Jayaprakasha Narayana

ಶಿವಾಜಿ

ಶಿವಾಜಿ

Publisher - ವಸಂತ ಪ್ರಕಾಶನ

Regular price Rs. 380.00
Regular price Rs. 380.00 Sale price Rs. 380.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 368

Type - Paperback

17ನೇ ಶತಮಾನವೆಂದರೆ ಅದು ಔರಂಗಜೇಬನ ನೇತೃತ್ವದಲ್ಲಿ ಮೊಘಲ್ ಸಾಮ್ರಾಜ್ಯವು ಭಾರತವನ್ನೆಲ್ಲ ಆವರಿಸಿಕೊಂಡು ಆಳುತ್ತಿದ್ದ ಮತ್ತು ತನ್ನ ವೈಭವದ ಉತ್ತುಂಗದಲ್ಲಿದ್ದ ಕಾಲಘಟ್ಟ. ಆಗ ಅದಕ್ಕೆ ಸಡ್ಡು ಹೊಡೆದವನೆಂದರೆ, ಛತ್ರಪತಿ ಶಿವಾಜಿ! ಅವನು ತನ್ನ ಜೀವಿತಾವಧಿಯಲ್ಲಷ್ಟೇ ಅಲ್ಲ, ಅದರ ನಂತರವೂ ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡುಗಡೆಗೊಳಿಸಲು ಧುಮುಕಿದ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ಸ್ಫೂರ್ತಿ, ಪ್ರೇರಣೆಗಳ ಸೆಲೆಯಾಗಿ ಒದಗಿ ಬಂದ. ಇಂತಹ ಶಿವಾಜಿಯು ಆಧುನಿಕ ಭಾರತದ ಆರಂಭಿಕ ಕಾಲಘಟ್ಟದಲ್ಲಿ ತನ್ನ ಧೈಯೋದ್ದೇಶಗಳ ಸಾಕಾರಕ್ಕಾಗಿ ಉತ್ಕಟವಾಗಿ ಹೋರಾಡಿದ ವೀರಾಗ್ರಣಿ ಎನ್ನುವುದು ನಿಸ್ಸಂಶಯ, ವೈಭವ್ ಪುರಂದರೆ ವಿರಚಿತ ಈ ಕೃತಿಯು ಶಿವಾಜಿಗೆ ಸಂಬಂಧಿಸಿದ ಅತ್ಯಂತ ವಿಶ್ವಾಸಾರ್ಹ ಜೀವನಚರಿತ್ರೆಯಾಗಿದ್ದು, ಮರಾಠಿ ಭಾಷೆಯಲ್ಲಿರುವ ಅಪಾರ ಸಾಹಿತ್ಯ ಮತ್ತು ಇತಿಹಾಸದ ಮೂಲಗಳನ್ನು ಆಧರಿಸಿ ಇದು ಹೊರಹೊಮ್ಮಿದೆ. ನಿಜ ಹೇಳಬೇಕೆಂದರೆ, ಶಿವಾಜಿಗೆ ಸಂಬಂಧಿಸಿದಂತೆ ಇದುವರೆಗೆ ಇಂಗ್ಲೀಷಿನಲ್ಲಿ ಬಂದಿರುವ ಯಾವೊಂದು ಕೃತಿಯಲ್ಲೂ ಈ ವೈಶಿಷ್ಟ್ಯವಿಲ್ಲ. ಇದರ ಜೊತೆಗೆ, ಮರಾತ ಸಾಮ್ರಾಜ್ಯವು ಹಬ್ಬಿದ್ದ ಪ್ರದೇಶದ ಭೌಗೋಳಿಕ ಸೀಮೆ ಮತ್ತು ಸಂಸ್ಕೃತಿಗಳ ಬಗ್ಗೆ ಲೇಖಕರಿಗಿರುವ ಆಳವಾದ ಅರಿವು ಈ ಕೃತಿಗೆ ಕಸುವನ್ನು ತಂದುಕೊಟ್ಟಿದೆ. ತನ್ನ ಹದಿಹರೆಯದಲ್ಲೇ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಟದ ಕಹಳೆ ಊದಿದ ಮತ್ತು ಅಂತಿಮವಾಗಿ ದಖನ್ನಿನ ರಾಜಕೀಯ ನಕಾಶೆಯನ್ನೇ ಬದಲಿಸುವ ಮೂಲಕ ಛತ್ರಪತಿಯಾಗಿ ಪ್ರತಿಷ್ಠಾಪಿತನಾದ ಶಿವಾಜಿಯ ಬಗ್ಗೆ ಈ ಜೀವನಚರಿತ್ರೆಯಲ್ಲಿ ಸೂಕ್ಷ್ಮಾತಿಸೂಕ್ಷ್ಮವಾದ ಮನೋಜ್ಞ ವಿವರಗಳು ದಟ್ಟವಾಗಿವೆ.

ಈ ಜೀವನಚರಿತ್ರೆಯು ಶಿವಾಜಿಯ ಸಮರ ಸಾಹಸಗಳ ಕತೆಯನ್ನಷ್ಟೇ ಹೇಳುವುದಿಲ್ಲ. ಬದಲಿಗೆ ಅವನು ತನ್ನ ತಾಯಿ ಜೀಜಾಬಾಯಿಯೊಂದಿಗೆ ಹೊಂದಿದ್ದ ಗಾಢ ಸಂಬಂಧ, ತನ್ನ ಸೈನಿಕರಿಗೆ ಸ್ಫೂರ್ತಿ ತುಂಬುತ್ತಿದ್ದ ಅವನ ಪರಿ, ಅತಿಮಾನುಷ ಎನ್ನಬಹುದಾದ ಸಾಹಸಗಳನ್ನು ಕೈಗೊಳ್ಳುತ್ತಿದ್ದ ಅವನ ಅಗಾಧ ಸಾಮರ್ಥ್ಯ, ಅವನಿಗಿದ್ದ ಸಮಯಪ್ರಜ್ಞೆ ಮತ್ತು ಸಂಕಲ್ಪಬಲ, ಸೋಲಿನ ಸುಳಿಯಿಂದ ಮತ್ತೆಮತ್ತೆ ಅವನು ಪುಟಿದೇಳುತ್ತಿದ್ದ ರೀತಿನೀತಿಗಳ ಬಗ್ಗೆಯೂ ಇದು ಸಾದ್ಯಂತವಾಗಿ ಹೇಳುತ್ತದೆ.

ಗೆರಿಲ್ಲಾ ಯುದ್ಧತಂತ್ರಕ್ಕೆ ಹೆಸರುವಾಸಿಯಾಗಿದ್ದ ಶಿವಾಜಿಯು ಮೊಘಲ್ ಸಾಮ್ರಾಜ್ಯದ ಪತನಕ್ಕೆ ನಾಂದಿ ಹಾಡಿದವನು. ಇನ್ನೊಂದೆಡೆಯಲ್ಲಿ, ಅತ್ಯಂತ ದೂರದೃಷ್ಟಿಯ ನೀತಿಗಳನ್ನು ಜಾರಿಗೆ ತಂದ ಸಂವೇದನಾಶೀಲ. ಇವನನ್ನು ಹಲವರು 'ಹಿಂದುತ್ವ'ದ ಚೌಕಟ್ಟಿನಲ್ಲಿ ನೋಡುತ್ತಾರೆ; ಇನ್ನೊಂದಿಷ್ಟು ಮಂದಿ 'ಸೆಕ್ಯುಲರ್' ಪ್ರಭಾವಳಿ ತೊಡಿಸಿದ್ದಾರೆ. ಆದರೆ ಅವನು ಈ ಎರಡೂ ಬಗೆಯ ಗ್ರಹಿಕೆಗಳಿಗೆ ಮೀರಿದವನಾಗಿದ್ದಾನೆ ಎನ್ನುವುದನ್ನು ಈ ಜೀವನಚರಿತ್ರೆಯು ಸಾದರಪಡಿಸಿದೆ. ಅಂದರೆ, ಶಿವಾಜಿಗೆ ಸಂಬಂಧಿಸಿದ ಹಲವು ಮಿಥೈಗಳನ್ನೂ ತಪ್ಪು ಗ್ರಹಿಕೆಗಳನ್ನೂ ಇದು ಸರಿಪಡಿಸಿದೆ. ಭಾರತ ಕಂಡ ವೀರಾಗ್ರಣಿಗಳಲ್ಲಿ ಒಬ್ಬನಾದ ಶಿವಾಜಿಯ ಬಗ್ಗೆ ಅರಿಯಲು ಈ ಕೃತಿಯ ಓದೊಂದೇ ಸಾಕು.


View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Ravi Shankar

good one