Ramesh Shettygar Manjeshwara
ಶಿರಾಡಿ ಘಾಟ್
ಶಿರಾಡಿ ಘಾಟ್
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 128
Type - Paperback
Couldn't load pickup availability
ಭಯಪಡಿಸಲೆಂದೇ ಬರೆದ ಕಥೆಗಳು...!
2019ರಲ್ಲಿ "ಶಿರಾಡಿ ಘಾಟ್" ಎಂಬ ಸಣ್ಣಕಥೆ ಭಯಂಕರ ವೈರಲ್ ಆದಾಗ ನಾನು ಓದಿ ಬೆಚ್ಚಿ ಬೆರಗಾಗಿದ್ದೆ. ರಾತ್ರಿಯ ಹೊತ್ತು ಬಿಡಿ, ಹಗಲಲ್ಲೇ ಶಿರಾಡಿ ಘಾಟ್‌ನಲ್ಲಿ ಪಯಣಿಸಲು ಭಯವಾಗುತಿತ್ತು. ಅದೇ ಧಾಟಿಯಲ್ಲೇ ಬರೆದ "ಅಂಧಕಾರದಲ್ಲೊಂದು ಪಯಣ" ಕಥೆ ನಾನು ಕಾರಿನಲ್ಲಿ ಒಬ್ಬನೇ ಇದ್ದಾಗ ಓದಿ ಆ ಕಥಾನಾಯಕ ನನ್ನ ಮೈಯಲ್ಲೇ ಬಂದ ಹಾಗೆ ಆಯಿತು. ಹೀಗೆ ಹನ್ನೆರಡು ಕಥೆಗಳು ಒಂದಕ್ಕೊಂದು ವಿಭಿನ್ನವಾಗಿ ಭಯಂಕರವಾಗಿದೆ.
ಸಾಮಾನ್ಯವಾಗಿ ಹಾರರ್ ಕಥೆಗಳಲ್ಲಿ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಆದರೆ ಈ ಕಥಾಸಂಕಲನದಲ್ಲಿ ಲೇಖಕರು ವೈವಿಧ್ಯದ ಜೊತೆಗೆ ಕೆಲವೆಡೆ ತಿಳಿಹಾಸ್ಯ ಸಿಂಪಡಿಸಿ. ಇನ್ನು ಕೆಲವು ಕಥೆಗಳಲ್ಲಿ ಹಾಂಟೆಡ್ ಸ್ಥಳಗಳ ಮಾಹಿತಿಗಳನ್ನು ನೀಡಿದ್ದಾರೆ. ಹಾರರ್ ಡಾರ್ಕ್ ಕಾಮಿಡಿ ಎಂಬ ಹೊಸ ಜಾನರ್ ಅನ್ನು ಕನ್ನಡಕ್ಕೆ ನೀಡುವ ಹಲವು ಕಥೆಗಳು ಇಲ್ಲಿವೆ. ಅಪೂರ್ಣ ಸತ್ಯ, ಮದನಿಕೆ. ಹಾಂಟೆಡ್ ಹೊಸಮನೆ ಹಾಗೂ ಎರಡನೇ ದೇವರು ಕೃತಿಗಳ ಮೂಲಕ ಈಗಾಗಲೇ ಕೌತುಕಮಯ ಕಥನ-ಕೃತಿಗಳನ್ನು ನೀಡಿದ ಶ್ರೀ ರಮೇಶ್ ಶೆಟ್ಟಿಗಾರರು "ಶಿರಾಡಿ ಘಾಟ್" ಕಥಾಸಂಕಲನದ ಮೂಲಕವೂ ಓದುಗರನ್ನು ಕಥೆಯೊಳಗೆ ಹಿಡಿದಿಟ್ಟುಕೊಂಡು ರೋಮಾಂಚನಗೊಳಿಸುವಲ್ಲಿ ಸಂದೇಹವಿಲ್ಲ,
ಭಯಪಡಿಸಲೆಂದೇ ಅವರು ಬರೆದ ಕಥೆಗಳು ಓದುಗರನ್ನು ಬೆರಗುಗೊಳಿಸುವಲ್ಲಿ ಯಶಸ್ವಿಯಾಗಲಿ ಹಾರೈಕೆಯೊಂದಿಗೆ. ఎంబ
-ವಿಠಲ್ ಶೆಣೈ (ಖ್ಯಾತ ಕಾದಂಬರಿಕಾರರು)
Share


Subscribe to our emails
Subscribe to our mailing list for insider news, product launches, and more.