1
/
of
2
Siri Murthy Kasaravalli
ಶಾಂತಿಧಾಮ
ಶಾಂತಿಧಾಮ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 160.00
Regular price
Rs. 160.00
Sale price
Rs. 160.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 128
Type - Paperback
Couldn't load pickup availability
ಸಮೃದ್ಧ ಮತ್ತು ಸಂತೃಪ್ತಿಯ ಬದುಕಿಗೆ ಆಶ್ರಯವಾಗಿದ್ದ ಮಲೆನಾಡು, ಕಳೆದ ಕೆಲವು ದಶಕಗಳಿಂದ ಎದುರಿಸುತ್ತ ಬಂದ ಸ್ಥಿತ್ಯಂತರಗಳನ್ನು ಸರಳ, ಸುಂದರ ಕಥನದ ರೂಪದಲ್ಲಿ ನಿರೂಪಿಸುವ ಕೃತಿ 'ಶಾಂತಿಧಾಮ', ಒಂದು ಕಾಲದಲ್ಲಿ ನೆಮ್ಮದಿಯ ಬದುಕಿಗೆ ನೆಲೆಯಾಗಿದ್ದ ಗ್ರಾಮೀಣ ಕೂಡು ಕುಟುಂಬಗಳು ಛಿದ್ರಗೊಂಡು, ಹಳ್ಳಿಗಾಡಿನ ಸಾಮುದಾಯಿಕ ಬದುಕು ಹಲಬಗೆಯ ತವಕ ತಲ್ಲಣಗಳಿಗೆ ತುತ್ತಾಗಿ, ಹತಾಶ ಸ್ಥಿತಿಗೆ ತಲುಪುತ್ತಿರುವ ವಿಷಾದ ಈ ಕೃತಿಯ ಉದ್ದಕ್ಕೂ ಅಂತಃಸ್ರೋತವಾಗಿ ಪ್ರವಹಿಸಿದೆ.
'ಶಾಂತಿಧಾಮ'ದಲ್ಲಿ ನೆಲೆಸಿದ ಮಲೆನಾಡು ಪ್ರಾಂತ್ಯದ ಸಭ್ಯ, ಸುಸಂಸ್ಕೃತ ಶ್ರೀಮಂತ ಕುಟುಂಬವೊಂದು, ಕೇವಲ ಎರಡು ತಲೆಮಾರುಗಳ ಅವಧಿಯಲ್ಲಿ ತನ್ನ ಸುತ್ತ ಸಂಭವಿಸಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗಳ ಸುಳಿಗೆ ಸಿಲುಕಿ, ಅನಿವಾರ್ಯವಾಗಿ ತನ್ನನ್ನು ತಾನು 'ಆಧುನಿಕತೆ'ಯ ತೆಕ್ಕೆಗೆ ಒಡ್ಡಿಕೊಂಡ ಕಥಾನಕ ಈ ಕಾದಂಬರಿ.
ಡಾ. ಗಜಾನನ ಶರ್ಮಾ
"ಶಾಂತಿಧಾಮ" ನನ್ನ ಹಿರಿಯಕ್ಕ ಸಿರಿಯ ಎರಡನೇ ಕಾದಂಬರಿ. ಏಳೆಂಟು ದಶಕಗಳ ಹಿಂದೆ ಮಲೆನಾಡಿನಲ್ಲಿ ಕೂಡು ಕುಟುಂಬ ಸಹಜವಾಗಿತ್ತು. ನಾವೆಲ್ಲಾ ಹುಟ್ಟಿ ಬೆಳೆದ ಮರಸೂರಿನ ಹತ್ತಿರವೇ ಶೀರ್ನಾಳಿಯವರ ಅರಮನೆ ಇತ್ತು. ಯಡೂರಿನಲ್ಲಿ ಜೋಯ್ಸರ ಅರಮನೆ ಬೇಗದಾಳಿಯಲ್ಲಿ ಸುಬ್ರಹ್ಮಣ್ಯಯ್ಯರವರ ಅರಮನೆ. ಹುಲಿಕಲ್ ನಲ್ಲಿ ನಮ್ಮ ಅಜ್ಜ ನರಸಿಂಹಯ್ಯರ ಬೃಹತ್ ಮನೆ. ಸ್ವಲ್ಪ ದೂರದೂರಲ್ಲಿ ಪಡುವಳ್ಳಿ ಬಂಗಲೆ ಇವೆಲ್ಲಾ ಜಮೀನುದಾರರ ಮನೆಗಳು. ಒಕ್ಕಲು ಮಕ್ಕಳ ಮೇಲೆ ಪ್ರೀತಿ ತೋರಿದ ಕುಟುಂಬಗಳು. ಊರಿಗೆ ಯಜಮಾನರಾಗಿ, ಉಪಕಾರಿಯಾಗಿ ಬಾಳಿದ ಕುಟುಂಬಗಳು. ಇನ್ನೂ ಕಿಶೋರಾವಸ್ಥೆಯಲ್ಲೇ ಅಕ್ಕನ ಮದುವೆ ಆಯಿತು. ಆಕೆ ಸೇರಿದ ಮನೆ ಸಹ ಹಾಗಲಗೋಡು. ಅದೂ ದೊಡ್ಡ ಜಮೀನುದಾರರ ಬೃಹತ್ ಬಂಗಲೆ ಮನೆ. ಅಲ್ಲೇ ಅವರ ಬಂಧುಗಳಾದ ಕಾಸರವಳ್ಳಿ ಮನೆ. ಹೀಗೆ ಒಂದು ಕಾಲದ ಕೂಡುಕುಟುಂಬದ ಕಥೆ ಹೇಳಿದರೆ ಈಗಿನ ಕಾಲದವರು ನಂಬುವುದೇ ಇಲ್ಲ. ಶೀರ್ನಾಳಿ, ಬೇಗದಾಳಿ, ಪಡುವಳ್ಳಿ ಇಲ್ಲೆಲ್ಲಾ ತಲೆತಲಾಂತರದಿಂದ ಎಲ್ಲರೂ ಒಟ್ಟಿಗೇ ಬಾಳಿದ್ದರು.
ಚಿಕ್ಕವಳಿದ್ದಾಗಿನಿಂದ ಕಂಡು ಕೇಳಿದ ಈ ಸಂಗತಿ ಅಕ್ಕನನ್ನು ಆರೇಳು ದಶಕಗಳ ನಂತರ ಕಾಡಿದ ಪರಿಣಾಮವೇ "ಶಾಂತಿಧಾಮ".
- ಎಂ.ಎಂ. ಪ್ರಭಾಕರ್ ಕಾರಂತ್

Share

Subscribe to our emails
Subscribe to our mailing list for insider news, product launches, and more.