Nataraj Huliyar
ಶಾಂತವೇರಿ ಗೋಪಾಲಗೌಡ
ಶಾಂತವೇರಿ ಗೋಪಾಲಗೌಡ
Publisher - ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 180.00
Regular price
Rs. 180.00
Sale price
Rs. 180.00
Unit price
/
per
- Free Shipping Above ₹250
- Cash on Delivery (COD) Available
Pages - 146
Type - Paperback
ಶಾಂತವೇರಿ ಗೋಪಾಲಗೌಡರು(೧೯೨೩-೧೯೭೨) ಕರ್ನಾಟಕದ ಧೀಮಂತ ರಾಜಕಾರಣಿಗಳಲ್ಲೊಬ್ಬರು, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಆದರ್ಶವನ್ನೂ ಸಮಾಜವಾದಿ ನೋಟ ಕ್ರಮವನ್ನೂ ತಮ್ಮ ಬದುಕು ಹಾಗೂ ರಾಜಕಾರಣದಲ್ಲಿ ರೂಢಿಸಿಕೊಂಡಿದ್ದ ಗೋಪಾಲಗೌಡರು ರಾಮಮನೋಹರ ಲೋಹಿಯಾ ಅವರ ನೆಚ್ಚಿನ ಅನುಯಾಯಿ ಯಾಗಿದ್ದರು. ಕಾಗೋಡು ರೈತ ಹೋರಾಟದ ಮುಂಚೂಣಿ ನಾಯಕರಲ್ಲೊಬ್ಬರಾದ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಮೂರು ಅವಧಿಗೆ ಮೈಸೂರು ವಿಧಾನ ಸಭೆಯ ಶಾಸಕರಾಗಿ ಆಯ್ಕೆಯಾಗಿದ್ದರು; ಖಚಿತ ನಿಲುವು, ಶೀಕ್ಷಣ ವಿಶ್ಲೇಷಣೆ ಹಾಗೂ ಸಮುದಾಯ ಕುರಿತ ಪ್ರಾಮಾಣಿಕ ಕಾಳಜಿಗಳು ಬೆರೆತ ವಿಚಾರಗಳನ್ನು ಸದನದಲ್ಲಿ ಪರಿಣಾಮಕಾರಿಯಾಗಿ ಮಂಡಿಸಿದರು, ನಿಷ್ಟುರ ಪ್ರತಿಕ್ರಿಯೆ ಹಾಗೂ ನೇರ ನಡೆ, ನುಡಿಗಳ ಜನನಾಯಕರಾಗಿದ್ದ ಅವರು ಕನ್ನಡನಾಡಿನಲ್ಲಿ ಸಮಾಜವಾದಿ ಚಿಂತನೆ, ಚಳುವಳಿ ಹಾಗೂ ಸಮಾಜವಾದಿ ರಾಜಕಾರಣಕ್ಕೆ ತಳಹದಿ ಹಾಕಿಕೊಟ್ಟರು. ಸಾಹಿತ್ಯ, ಕಲೆ, ಸಂಗೀತ ವಲಯಗಳ ಜೊತೆಗೆ ಆತ್ಮೀಯ ಸಂಬಂಧವಿಟ್ಟುಕೊಂಡಿದ್ದ ಅವರು ಕನ್ನಡದಲ್ಲಿ ಗಂಭೀರ ರಾಜಕೀಯ ವಿಮರ್ಶೆಯನ್ನು ರೂಪಿಸಿಕೊಟ್ಟರು. ಕರ್ನಾಟಕದಲ್ಲಿ “ಉಳುವವನೇ ಹೊಲದೊಡೆಯ' ಎಂಬ ಕ್ರಾಂತಿಕಾರಕ ಮಸೂದೆ ಜಾರಿಗೆ ಬರುವಲ್ಲಿ ಗೋಪಾಲಗೌಡರ ಹೋರಾಟ ಮಹತ್ವದ ಪಾತ್ರ ವಹಿಸಿತ್ತು.
ಡಾ. ನಟರಾಜ್ ಹುಳಿಯಾರ್' ಕನ್ನಡದ ಪ್ರಸಿದ್ಧ ಲೇಖಕರು. ಕತೆ, ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಮುಂತಾದ ಎಲ್ಲ ಪ್ರಕಾರಗಳಲ್ಲೂ ಕೃತಿರಚನೆ ಮಾಡಿರುವ ಇವರ ಮುಖ್ಯ ಕೃತಿಗಳು: 'ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ''ಇಂತಿ ನಮಸ್ಕಾರಗಳು', 'ಶೇಕ್ಸ್ಪಿಯರ್ ಮನೆಗೆ ಬಂದ', 'ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ', 'ಗಾಳಿ ಬೆಳಕು', 'ರೂಪಕಗಳ ಸಾವು ಲೋಹಿಯಾ ಚಿಂತನೆಗಳ ಕನ್ನಡಾನುವಾದದ ಸಂಪುಟಗಳನ್ನು ಸಂಪಾದಿಸಿರುವ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು, ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಡೆಮಿಯ ಅಂಬೇಡ್ಕರ್ ಪ್ರಶಸ್ತಿ, ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

Share
Subscribe to our emails
Subscribe to our mailing list for insider news, product launches, and more.