S. Shivalingaiah, G. M. Hegade
ಶಂ.ಬಾ.ಸ್ಮೃತಿ ಗಂಧ
ಶಂ.ಬಾ.ಸ್ಮೃತಿ ಗಂಧ
Publisher - ಶಂಬಾ ವಿಚಾರ ವೇದಿಕೆ
- Free Shipping Above ₹250
- Cash on Delivery (COD) Available
Pages - 170
Type - Paperback
ಕನ್ನಡ ನಾಡು, ನುಡಿಯ ಇತಿಹಾಸ ಸಂಶೋಧನೆಗೆ; ಭಾರತೀಯ ಸಾಂಸ್ಕೃತಿಕ ತೊಳಲಾಟದ ಮೂಲದ ಅರಿವಿಗೆ, ತನ್ಮೂಲಕ ಮಾನವ ಸಂಸ್ಕೃತಿ ರೂಪುಗೊಳ್ಳುವಲ್ಲಿ ಉಂಟಾಗಿರುವ ಸ್ಥಿತ್ಯಂತರಗಳ ಅಧ್ಯಯನಕ್ಕೆ ತಮ್ಮ ಬದುಕನ್ನೇ ಧಾರೆಯೆರೆದ ಹಿರಿಯ ಚೇತನ ಡಾ| ಶಂ.ಬಾ. ಜೋಶಿಯವರು. ವೈಯಕ್ತಿಕ ಹಿರಿಮೆಯ ನಾಗಾಲೋಟದಲ್ಲಿರುವ ಮಾನವ ಕುಲಕ್ಕೆ ಸಮಷ್ಟಿ ಪ್ರಜ್ಞೆಯ ಅರಿವಿನ ಕಿವಿಮಾತು ಹೇಳಿದ ಶ್ರೀಯತರು, ತಾರ್ಕಿಕ ಚಿಂತನೆಯ ತಂದೆ ಎನಿಸಿಕೊಂಡಿರುವ ಸಾಕ್ರೆಟೀಸನಿಗೆ ಸಮನಾದವರು.
ತಮ್ಮ ಮೌಲಿಕ ಕೃತಿಗಳಿಂದ ಮಾದರಿಯಾದ ಬದುಕಿನಿಂದ ತಾವು ಬಾಳಿದ ಸಮಾಜದ ಉತ್ಕರ್ಷಕ್ಕೆ, ಮೌಡ್ಯದ ಉಚ್ಛಾಟನೆಗೆ ಶ್ರಮಿಸಿದ ಶಂ.ಬಾ. ಜೋಶಿಯವರ ಜನ್ಮ ಶತಮಾನೋತ್ಸವದ ಈ ವರ್ಷ, ಅವರ ಜೀವನ, ಸಾಧನೆಯ ಸ್ಮರಣೆಗಾಗಿ ವೇದಿಕೆಯು ತಂದಿರುವ ಸ್ಮೃತಿ ಚಿತ್ರ ಸಂಕಲನವಿದು. ಜೋಶಿಯವರ ಎರಡಿಲ್ಲದ ಬಾಳುವೆಯ ಪ್ರಯತ್ನದಲ್ಲಿ ಗಳಿಸಿದ ಸಾಧನೆಯ ಜೊತೆಗೆ, ಅವರ ಶಿಷ್ಯರು, ಸ್ನೇಹಿತರು, ಬಂಧುಗಳು, ಅಭಿಮಾನಿಗಳ ಚಿತ್ತಭಿತ್ತಿಯಲ್ಲಿ ಉಳಿಸಿ ಹೋಗಿರುವ ರೇಖಾ ಚಿತ್ರವಿದು
Share
Subscribe to our emails
Subscribe to our mailing list for insider news, product launches, and more.