Gayathri Murthy
ಶಬ್ದಲೋಕ
ಶಬ್ದಲೋಕ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಶಬ್ದ ಕಣ್ಣಿಗೆ ಕಾಣಿಸುವುದಿಲ್ಲ. ಆದರೂ ನಾವು ಅದನ್ನು ಗ್ರಹಿಸುತ್ತೇವೆ. ಹೇಗೆ? ಶಬ್ದ ಪ್ರಸರಣ ಮಾಧ್ಯಮ ಯಾವುದು? ಶಬ್ದದ ಅಲೆಗಳು ಎಂದರೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತ, ಎದೆ ನಡುಗಿಸುವ ಗುಡುಗಿನ ಸದ್ದಿನಿಂದ ಹಿಡಿದು ತಲೆದೂಗಿಸುವ ಮಧುರ ಸಂಗೀತದವರೆಗೆ ಶಬ್ದಲೋಕದ ಹಲವು ಅದ್ಭುತ ವಿಷಯಗಳನ್ನು ವಿವರಿಸುತ್ತದೆ ಈ ಸಚಿತ್ರ ಪುಸ್ತಕ, ಇದು 'ನೋಡುತ್ತ ಆಡುತ್ತ ಕಲಿಯೋಣ ಬಾ' ಮಾಲೆಯ ಐದನೆಯ ಪುಸ್ತಕ.
ಇದನ್ನು ಬರೆದಿರುವ ಶ್ರೀಮತಿ ಗಾಯತ್ರಿ ಮೂರ್ತಿ ಭೌತಶಾಸ್ತ್ರದ ವಿಶ್ರಾಂತ ಅಧ್ಯಾಪಕಿ. ಇವರ ಹಲವು ಕೃತಿಗಳು ಪ್ರಕಟವಾಗಿವೆ. ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ತಿಳಿಸಿಕೊಡುವಾಗ ಅವರಿಗೆ ಅರ್ಥವಾಗುವಂತೆ ಸಾಕಷ್ಟು ಸರಳ ಭಾಷೆಯಲ್ಲಿ ವಿವರಿಸಿ ಹೇಳುವುದು ಇವರ ವೈಶಿಷ್ಟ್ಯ. ಈ ಮಾಲೆಯಲ್ಲಿ ಇವರ 'ನೀರು', 'ಗಾಳಿ', 'ಶಾಖ', ಮತ್ತು 'ಬೆಳಕು' – ಪುಸ್ತಕಗಳು ಕೂಡ ಪ್ರಕಟವಾಗಿವೆ. ನೋಡುತ್ತ ಆಡುತ್ತ ವಿಜ್ಞಾನ ವಿಷಯ ಕಲಿಯಲು ಇವು ಸಹಾಯಕವಾಗುತ್ತವೆ.
Share

Subscribe to our emails
Subscribe to our mailing list for insider news, product launches, and more.