Krupakara Senani
Publisher -
- Free Shipping
- Cash on Delivery (COD) Available
Couldn't load pickup availability
ವೀರಪ್ಪನ್ ಒಳ್ಳೆಯವನೋ ಕೆಟ್ಟವನೋ ಎನ್ನುವ ತಾತ್ವಿಕ ವಿವೇಚನೆ, ನೈತಿಕ ವಿಶ್ಲೇಷಣೆಗಳನ್ನೂ ಚರಿತ್ರೆಯ ನಿರ್ಧಾರಕ್ಕೆ ಬಿಟ್ಟು, ವರ್ತಮಾನವನ್ನಷ್ಟೆ ಲೇಖಕರು ದಾಖಲಿಸುತ್ತಾ ಹೋಗಿರುವ ರೀತಿ ಇಲ್ಲಿ ನಿರಾಯಾಸವಾಗಿ ಕಲೆಯಾಗಿ ರೂಪುಗೊಂಡಿದೆ. ಕಟ್ಟಕಡೆಗೆ ವೀರಪ್ಪನ್ ಶರಣಾಗತಿಗೆ ಅವರು ಮಾಡಿದ ಪ್ರಮಾಣಿಕ ಪ್ರಯತ್ನ, ರಾಜಕಾರಣಿಗಳ ಮತ್ತು ಅಧಿಕಾರಶಾಹಿಯ ಸ್ವಹಿತಾಸಕ್ತಿಯ ಫಲವಾಗಿ ವಿಫಲವಾಗಿದ್ದು ನಿಜಕ್ಕೂ ಆ ಕಾಲದ ದಾರುಣ ದುರಂತಗಳಲ್ಲೊಂದು. ಇದು ವೀರಪ್ಪನ್‌ನಿಂದ ಅಪಹರಣಗೊಂಡ ಲೇಖಕರಿಬ್ಬರು ಆತನೊಂದಿಗೆ ಕಳೆದ ಹದಿನಾಲ್ಕು ದಿನಗಳ ಅನುಭವ ಮಾತ್ರ.
ಅವರಿಬ್ಬರನ್ನು ಅಪಹರಣ ಮಾಡುವ ವೇಳೆಗೆ ಮಾಧ್ಯಮಗಳಲ್ಲಿ ವೀರಪ್ಪನ್ ಕ್ರೌರ್ಯದ ಮುಖ ವಿಜೃಂಭಿಸಿತ್ತು. ವೀರಪ್ಪನ್ ಕುರಿತು ಅವರೆಂದೂ ದೀರ್ಘವಾಗಿ ಯೋಚಿಸಿರಲಿಲ್ಲ. ಅವನ ಕಾರ್ಯಚಟುವಟಿಕೆಗಳ ಬಗ್ಗೆ ಚಿಂತಿಸಿರಲಿಲ್ಲ ಮತ್ತು ಚರ್ಚಿಸಿರಲಿಲ್ಲ.
ಆದರೆ ಒತ್ತೆಯಾಳುಗಳಾಗಿದ್ದಾಗ ಪರಿಸ್ಥಿತಿ ಬೇರೆ ಇತ್ತು. ಅವರ ಮುಂದೆ ವಿಭಿನ್ನ ಸವಾಲುಗಳಿದ್ದವು. ಅವನಿಗೆ ಪ್ರಿಯವಾದ ವಿಷಯಗಳು, ಕುತೂಹಲ ಮೂಡಿಸುವ ಸಂಗತಿಗಳು ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕಿತ್ತು. ಬಂಡೀಪುರ ಕಳೆದ ಎರಡು ವರ್ಷಗಳಿಂದ ಅವರಿಬ್ಬರು ಸುತ್ತುತ್ತಿದ್ದ ಪ್ರದೇಶ. ಅಲ್ಲಿನ ಹಕ್ಕಿ, ಪ್ರಾಣಿಗಳ ಜೊತೆಗೆ ಉಣ್ಣೆಯ ಪರಿಚಯವೂ ಇತ್ತು. ಕಾಡಿನ ಬಯಲಲ್ಲಿ ಮಲಗುವುದಾಗಲೀ ಝರಿಗಳಲ್ಲಿ ನೀರು ಕುಡಿಯುವುದಾಗಲಿ ಅವರಿಗೆ ಸಹಜವಾಗಿತ್ತು. ಆತ ನೀಡುತ್ತಿದ್ದ ಆಹಾರ ಅವರ ದಿನನಿತ್ಯದ ಆಹಾರವೇ ಆಗಿತ್ತು, ಕಾಡು ಪ್ರಾಣಿಗಳ ಸ್ವಭಾವದ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದುದರಿಂದ ಎಂದೂ ಆ ಭಯ ಅವರನ್ನು ಕಾಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಯಾತ್ರೆಯ ಅಂತ್ಯದವರೆಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಸಿದಿರಲಿಲ್ಲ. ಹಾಗಾಗಿ ಅವರು ವೀರಪ್ಪನ್ ಜೊತೆ ಪಡೆದ ಅನುಭವಗಳನ್ನು, ನಡೆಸಿದ ಮಾತುಕತೆಗಳನ್ನು ಪ್ರಾಮಾಣಿಕವಾಗಿ ಇಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.
