K. S. Ramasundari
ಸತ್ಯದ ಅನಾವರಣ
ಸತ್ಯದ ಅನಾವರಣ
Publisher - ವೀರಲೋಕ ಬುಕ್ಸ್
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
- Free Shipping Above ₹250
- Cash on Delivery (COD) Available
Pages - 86
Type - Paperback
ಇಡೀ ಬ್ರಹ್ಮಾಂಡದ ಅಸ್ತಿತ್ವವಿರುವುದೇ ಸಕಲ ಜೀವರಾಶಿಗಳ ಸೃಷ್ಟಿಯ ಮೇಲೆ, ಸೃಷ್ಟಿಕಾರ್ಯ ನಿ೦ತುಬಿಟ್ಟರೆ ಈ ಬ್ರಹ್ಮಾಂಡವೇ ಇರುವುದಿಲ್ಲ. ಬ್ರಹ್ಮಾಂಡದ ನಿಯಮಾನುಸಾರ ಜೀವ ಸೃಷ್ಟಿ ನಡೆಯುವುದು ಪ್ರಕೃತಿ ಪುರುಷನ ಸಮಾಗಮದಿಂದ, ಆ ನಿಯಮದ೦ತೆ ಜನಿಸಿದ ಮಾನವ ಇಂದು ಅ ನಿಯಮಕ್ಕೆ ವಿರುದ್ಧವಾಗಿ ಪ್ರಕೃತಿ ಪುರುಷರ ಸಮಾಗಮ ಇಲ್ಲದೇನೇ ಜೀವಿಯನ್ನು ಹುಟ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾನೆ. ಶತಕದ ಹಿಂದೆ ಕಲ್ಪನೆಯಲ್ಲೂ ಸಾಧ್ಯವಿಲ್ಲದಿದ್ದ ಈ ಕಾರ್ಯವು ಇಂದು ಪ್ರಪಂಚದಾದ್ಯಂತ ಲೀಲಾಜಾಲವಾಗಿ ನಡೆಯುತ್ತಿದೆ. 19768ರಲ್ಲಿ ಜನಿಸಿದ ಪ್ರಪಂಚದ ಮೊದಲ ಪ್ರಣಾಳ ಶಿಶುವಿನಿಂದ ಹಿಡಿದು 1996ರಲ್ಲಿ ಕ್ಲೋನಿಂಗ್ ಮೂಲಕ ಜನಿಸಿದ ಕುರಿಯ ತನಕ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದೆ. ಅವುಗಳಲ್ಲಿ ಬಾಡಿಗೆ ತಾಯಿಯ ಪ್ರಯೋಗವು ಒಂದು.
ಒಂದು ಹೆಣ್ಣು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು. ಈ ಕೃತಿಯಲ್ಲಿ ವೈಜ್ಞಾನಿಕ ಅಂಶಗಳಿಗಿಂತ ಹೆಚ್ಚಾಗಿ ಮಾನವನ ಮನಸ್ಥಿತಿಯ ಮೇಲೆ, ಮನುಷ್ಯ- ಮನುಷ್ಯ ಸಂಬಂಧಗಳ ಮೇಲೆ ಹಾಗೂ ಸಮಾಜದ ಮೇಲೆ ಆ ಅಂಶಗಳು ಬೀರುವ ಪರಿಣಾಮಗಳಿಗೆ ಹೆಚ್ಚು ಒತ್ತುನೀಡಲಾಗಿದೆ.
ಪ್ರಪಂಚ ವೈಜ್ಞಾನಿಕವಾಗಿ ಮುಂದುವರೆಯುವುದು ಎಷ್ಟು ಮುಖ್ಯವೋ ಅದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ. ಕೃತಿಯ ಅಂತ್ಯದಲ್ಲಿ ಅದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
ಕಥಾವಸ್ತುಸುಮಾರು ಮೂರು ದಶಕಗಳ ಹಿಂದೆ ತೀರಾ ಹೊಸದೆನಿಸುವಹಾಗೆ ಇತ್ತು.ಹೀಗಾಗಿ ಅಂದು ಲಭ್ಯವಿಲ್ಲದ ಆಧುನಿಕ ಸಲಕರಣೆಗಳಾದ ಮೊಬೈಲ್, ಇಂಟರ್ನೆಟ್ ಮೊದಲಾದುವುಗಳ ಉಪಯೋಗ ಹಾಗೂ ಪ್ರಸ್ತಾಪ ಕೃತಿಯಲ್ಲಿ ಇಲ್ಲ. ಅಂದಿನ ಬದುಕಿನ ಶೈಲಿಗನುಗುಣವಾಗಿ ಆ ಕಥೆಯನ್ನು ಹಣೆಯಲಾಗಿದೆ.

Share
Subscribe to our emails
Subscribe to our mailing list for insider news, product launches, and more.