Apaara
ಸರಿಗನ್ನಡಂ ಗೆಲ್ಗೆ
ಸರಿಗನ್ನಡಂ ಗೆಲ್ಗೆ
Publisher - ಛಂದ ಪ್ರಕಾಶನ
Regular price
Rs. 390.00
Regular price
Rs. 390.00
Sale price
Rs. 390.00
Unit price
/
per
- Free Shipping Above ₹250
- Cash on Delivery (COD) Available
Pages - 332
Type - Paperback
ಶುದ್ಧ ಶುಂಠಿಯಲ್ಲಿ ಶುಂಠಿಯದೇನು ತಪ್ಪು? ಸೋಲುವುದು ಸರಿ, ಸೋತು ಸುಣ್ಣವಾಗುವುದು ಯಾಕೆ? ಎಂಟೇ ದಿಕ್ಕುಗಳಿರುವಾಗ ದಶದಿಕ್ಕು ಅನ್ನುವುದು ಯಾಕೆ? ಗಿರಿಜೆಗೆ ಮೀಸೆ ಯಾಕೆ ಅಂಟಿಕೊಂಡಿತು? ಮರೀಚಿಕೆಗೂ ಮಾರೀಚನಿಗೂ ಸಂಬಂಧ ಇದೆಯೆ? ಈ ಸಂಬಂಧ ಅನ್ನುವುದರಲ್ಲಿ ಬಾಲ ಸೀಳಬೇಕಾದ ಅಕ್ಷರ ಯಾವುದು? ಅಡಗೂಲಜ್ಜಿ ಕತೆ ಅಂದರೇನು? ಕುಚಿಕು ಅನ್ನುವುದು ಸಿನಿಮಾ ಹಾಡಿಗಿಂತ ಮೊದಲೇ ಇದ್ದ ಪದವೆ? ಈ ಚಳ್ಳೆಹಣ್ಣನ್ನು ಪೊಲೀಸರಿಗೇ ಯಾಕೆ ತಿನ್ನಿಸುವುದು? ಬಡ್ಡಿಮಗ ಅಂದರೆ ಅಷ್ಟೆಲ್ಲಾ ಕೆಟ್ಟರ್ಥ ಇದೆಯಾ? ನೀಟು ಅನ್ನುವುದು ಕನ್ನಡ ಪದ ಹೇಗಾಗುತ್ತೆ? ಹತ್ಯೆ ಬೇರೆ, ವಧೆ ಬೇರೇನಾ? ಬಿರುದು ಸರಿ, ಬಾವುಲಿ ಯಾಕೆ ಕೊಡುವುದು? ಧರ್ಮದೇಟಿಗೆ ಧರ್ಮದೇಟು ಅನ್ನುವುದು ಯಾವ ಧರ್ಮ? ತುಕಾಲಿ ಅನ್ನುವ ಪದವನ್ನು ಡಿಕ್ಷನರಿಗೇಕೆ ಸೇರಿಸಿಕೊಂಡಿಲ್ಲ? ಜಹಾಂಗೀರಿಗೆ ಆ ಸ್ವೀಟ್ ನೇಮ್ ಬಂದದ್ದು ಹೇಗೆ? ದಮ್ಮಯ್ಯ, ದಕ್ಕಯ್ಯ, ಸುತರಾಂ, ಚಾಚೂ -ಇವರೆಲ್ಲಾ ಯಾರು? ಕೊಡೆ ಇರುವುದು ಬಿಸಿಲಿಗೋ ಮಳೆಗೋ? ನಾಗಾಲೋಟದಲ್ಲಿ ಹಾವೂ ಇಲ್ಲ, ಲೋಟವೂ ಇಲ್ಲವೆ? ಮಾಣಿ ಅನ್ನುವ ಪದ ಉಡುಪಿ ಹೊಟೆಲುಗಳ ಅಡುಗೆಮನೆಯಲ್ಲಿ ತಯಾರಾದ ಬಿಸಿ ಪದಾರ್ಥವೆ? ಕುಟುಂಬದಲ್ಲಿ ಭಾವ ಒಬ್ಬನೇ ಬಾಲ ಇರುವ ಮಹಾಪ್ರಾಣಿಯೆ? ಪ್ರಮೀಳಾ ರಾಜ್ಯ ಅಂತ ನಿಜಕ್ಕೂ ಒಂದಿತ್ತೆ? ಎಷ್ಟು ಹರದಾರಿ ಸೇರಿದರೆ ಒಂದು ಗಾವುದ? ಡಕೋಟ ಸ್ಕೂಟರ್ ವಿಮಾನದಲ್ಲಿ ಹಾರಿ ಬಂತೆ? ತಲೆ ರುಂಡ ಅನ್ನುವುದಾದರೆ ರುಮಾಲಿಗೆ ಮುಂಡಾಸು ಅನ್ನುವುದೇಕೆ? ಮುಂದಿನ ಶತಮಾನದವರ ಪಾಲಿಗೆ ಈಗ ನಾವಾಡುವ ಕನ್ನಡ ಹಳಗನ್ನಡವಾಗುತ್ತಾ?
ಪದೇಪದೇ ಮಾಡುವ ಕಾಗುಣಿತದ ತಪ್ಪುಗಳು, ಪದಗಳನ್ನು ಒಡೆದು ನೋಡಿದಾಗ ರಟ್ಟಾದ ಗುಟ್ಟುಗಳು, ಯಾವ ಪದದ ಸಿಟಿಜನ್‌ಶಿಪ್ ಯಾವ ದೇಶದ್ದು? -ಇಂಥ ಆರು ನೂರು ಬೆರಗಿನ ಸಂಗತಿಗಳನ್ನು ಸ್ವಾರಸ್ಯಕರವಾಗಿ ತೆರೆದಿಡುವ ಪುಸ್ತಕವಿದು. ಬನ್ನಿ, ಕನ್ನಡದ ಸೊಗಸಿನ ಲೋಕಕ್ಕೆ ನಿಮಗೆ ಸ್ವಾಗತ.
ಪದೇಪದೇ ಮಾಡುವ ಕಾಗುಣಿತದ ತಪ್ಪುಗಳು, ಪದಗಳನ್ನು ಒಡೆದು ನೋಡಿದಾಗ ರಟ್ಟಾದ ಗುಟ್ಟುಗಳು, ಯಾವ ಪದದ ಸಿಟಿಜನ್‌ಶಿಪ್ ಯಾವ ದೇಶದ್ದು? -ಇಂಥ ಆರು ನೂರು ಬೆರಗಿನ ಸಂಗತಿಗಳನ್ನು ಸ್ವಾರಸ್ಯಕರವಾಗಿ ತೆರೆದಿಡುವ ಪುಸ್ತಕವಿದು. ಬನ್ನಿ, ಕನ್ನಡದ ಸೊಗಸಿನ ಲೋಕಕ್ಕೆ ನಿಮಗೆ ಸ್ವಾಗತ.
Share
m
mediniadiga11@gmail.com Easy to read small small story different from other books
Subscribe to our emails
Subscribe to our mailing list for insider news, product launches, and more.