Skip to product information
1 of 1

Dr. N. S. Lakshminarayana Bhatta

ಸಂತಕವಿ ಶಿಶುನಾಳ ಶರೀಫ್ ಸಾಹೇಬರು

ಸಂತಕವಿ ಶಿಶುನಾಳ ಶರೀಫ್ ಸಾಹೇಬರು

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 93

Type - Paperback

'ಕರ್ನಾಟಕದ ಕಬೀರ' ಎಂದೇ ಕರೆಯಲಾಗುವ ಶಿಶುನಾಳ ಶರೀಫ್ ಸಾಹೇಬರು ಕನ್ನಡದ ಮೊಟ್ಟಮೊದಲ ಮುಸ್ಲಿಂ ಅನುಭಾವಿ ಕವಿ, ಹತ್ತೊಂಭತ್ತನೇ ಶತಮಾನದ ಈ ಸಂತಕವಿ ಭಾವೈಕ್ಯದ ಒಂದು ಪ್ರತೀಕ, ಈ ದೇಶದ ಯಾವುದೇ ಮತದವನು ಎಲ್ಲ ಧರ್ಮಗಳನ್ನೂ ಗೌರವಿಸಿ ಹೇಗೆ ಬಾಳಬೇಕು ಎನ್ನುವುದನ್ನು ಶರೀಫರು ಬಾಳಿ, ಬರೆದು ತೋರಿಸಿದ್ದಾರೆ. ಹಾಗಾಗಿಯೇ ಹಿಂದೂ ಮುಸ್ಲಿಮ್ ಭೇದವಿಲ್ಲದೆ ಎಲ್ಲರೂ ಈ ಕವಿಯನ್ನು ಆರಾಧಿಸುತ್ತಾರೆ. ಈ ಜೀವನಚರಿತ್ರೆ ಶರೀಫರ ಬದುಕಿನ ಬಗ್ಗೆ ಹೇಳುತ್ತಲೇ ಅವರ ಕವಿತೆಗಳ ಸತ್ವವನ್ನು ನಮಗೆ ಪರಿಚಯ ಮಾಡಿಕೊಡುತ್ತದೆ.

ಡಾ. ಎನ್.ಎಸ್‌. ಲಕ್ಷ್ಮೀನಾರಾಯಣ ಭಟ್ಟ ಪ್ರಸಿದ್ಧ ಕನ್ನಡ ಲೇಖಕರು. ಅವರು ಶರೀಫರ ಬಗ್ಗೆ ವಿಶೇಷ ಅಧ್ಯಯನ ನಡೆಸಿದವರು; ಅವರ ಪದ್ಯಗಳನ್ನು ಸಂಗ್ರಹಿಸಿ, ಸಂಪಾದಿಸಿದವರು. ಡಾ. ಭಟ್ಟರು ಸಂಪಾದಿಸಿರುವ ಶರೀಫರ ಪದ್ಯಗಳ ಸಂಕಲನವು ಹಲವಾರು ಮುದ್ರಣಗಳನ್ನು ಕಂಡಿದೆ. ಅವರು ನವ್ಯಕಾವ್ಯ, ಭಾವಗೀತೆ, ವಿಮರ್ಶೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಸಹ ಮಾಡಿದ್ದಾರೆ. 'ಆರುಣ ಗೀತ', 'ದೀಪಿಕಾ', 'ಚಿನ್ನದ ಹಕ್ಕಿ', 'ಕಾವ್ಯ ಪ್ರತಿಮೆ', 'ಕಿನ್ನರಲೋಕ' ಅವರ ಕೃತಿಗಳಲ್ಲಿ ಕೆಲವು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಇವರಿಗೆ ವಿಮರ್ಶೆ ಮತ್ತು ಬಾಲ ಸಾಹಿತ್ಯಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂರು ಬಾರಿ ಪುಸ್ತಕ ಪ್ರಶಸ್ತಿ ನೀಡಿದೆ. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯಿತ್ತು ಗೌರವಿಸಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)