Chandrakantha Pokale
ಸನಾತನ
ಸನಾತನ
Publisher - ನವಕರ್ನಾಟಕ ಪ್ರಕಾಶನ
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
- Free Shipping Above ₹250
- Cash on Delivery (COD) Available
Pages -
Type -
'ಸನಾತನ' ಕಾದಂಬರಿಯಲ್ಲಿನ ಘಟನೆಗಳು ಯಾವುದೋ ಕಾಲದಲ್ಲ, ಇಂದಿಗೂ ಭಾರತದಲ್ಲಿ ಜೀವಂತವಾಗಿರುವಂಥವು, ಇದು ನಿರಾಕರಿಸಿದ ಅ೦ದಿನ ಚರಿತ್ರೆಯ ಉತ್ಖನನವಾಗಿದೆ. ನೂರಾರು ಜನರನ್ನು ನೂರಾರು ಮೈಲುಗಳವರೆಗೆ ಮತ್ತು ನೂರಾರು ವರ್ಷಗಳ ಕಾಲ ವ್ಯಾಪಿಸಿಕೊಂಡಿರುವ ಈ ಕಾದಂಬರಿಯನ್ನು ಓದಲು ಎಂಟೆದೆ ಬೇಕು, ಇದು ಕಲ್ಪನೆ ಹಾಗೂ ಚರಿತ್ರೆಯ ರಸಾಯನದಿಂದ ರೂಪಗೊಂಡ ಸತ್ಯದ ಒಂದು ಹೊಸ ಪ್ರಯೋಗವಾಗಿದೆ. ಶರಣಕುಮಾರ ಲಿಂಬಾಳೆಯವರ ಸನಾತನ ಕಾದಂಬರಿಯು ವ್ಯಾಪಕವಾದ ಸಾಮಾಜಿಕ ಅರಿವನ್ನು ತಂದು ಕೊಡುತ್ತದೆ. ಹೀಗಾಗಿ ಜಾತಿಯ ಸಂಕುಚಿತ ಪರಿಧಿಯೊಳಗೆ ಬದುಕುವ ಪ್ರತಿಯೊಬ್ಬರಿಗೂ ಇದು ಹರಿತವಾದ ಶಸ್ತ್ರದಂತೆ ಅನಿಸಬಹುದು. ಇದು ಶಸ್ತ್ರದ ಪೂಜೆಯಲ್ಲ, ಮನುಷ್ಯನ ಪಾರ್ಥನೆ.
ಡಾ| ಶರಣಕುಮಾರ ಲಿಂಬಾಳೆ ಮರಾಟ ಸಾಹಿತ್ಯದಲ್ಲಿ ಆಗ್ರ ಪಂಕ್ತಿಯ ಹೆಸರು. ಇವರ ಆತ್ಮವೃತ್ತಾಂತ ಆಧರಿತ ಮರಾಠಿ ಕಾದಂಬರಿ 'ಅಕ್ಕರಮಾಶಿ' ಬಹುಚರ್ಚಿತ, ಇದು 'ಅಕ್ರಮ ಸಂತಾನ' ಶೀರ್ಷಿಕೆಯಲ್ಲಿ ಕನ್ನಡದಲ್ಲಿ ನವಕರ್ನಾಟಕದಿಂದ ಪ್ರಕಟವಾಗಿದ್ದು ಭಾರತದ ಹಲವಾರು ಭಾಷೆಗಳಲ್ಲದೆ ಇಂಗ್ಲಿಷ್ಗೂ ಅನುವಾದಗೊಂಡಿದೆ. ಇವರು 45ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಸಿದ್ಧರು. ಇವರ 'ಹಿಂದೂ', 'ಬಹುಜನ', 'ನರವಾನರ' ಮತ್ತು 'ರೊಚ್ಚು' ಮುಂತಾದ ಕೃತಿಗಳನ್ನೂ ನವಕರ್ನಾಟಕ ಪ್ರಕಟಿಸಿದೆ.
ಕೃತಿಯ ಅನುವಾದಕರು ಚಂದ್ರಕಾಂತ ಪೋಕಳೆ, ಧಾರವಾಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸೇವೆ. ಅನುವಾದಕರಾಗಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿದೆ.

Share
Subscribe to our emails
Subscribe to our mailing list for insider news, product launches, and more.