B. S. Jayaprakash Narayana
ಸಮಸ್ಯೆ ಪರಿಹರಿಸಿಕೊಳ್ಳಿ - ಬೀರ್ಬಲ್ ಮಾದರಿಯಲ್ಲಿ

Publisher - ವಸಂತ ಪ್ರಕಾಶನ
Regular price
Rs. 130.00
Regular price
Sale price
Rs. 130.00
Unit price
/
per
- Free Shipping Above ₹250
- Cash on Delivery (COD) Available
Pages - 206
Type - Paperback
ಆಕ್ಬರನ ಕಾಲದಲ್ಲಿ ಮೂಡಿಬಂದ ಈ ಪ್ರಸಿದ್ಧ ಕಥೆಗಳು ಬೀರಬಲ್ಲನ ಚುರುಕು ಬುದ್ಧಿಯನ್ನೂ ಸಮಸ್ಯೆಯ ಪರಿಹಾರಕ್ಕಾಗಿ ತೋರಿದ ಅದ್ವಿತೀಯ ವಿವೇಚನಾಶಕ್ತಿಯನ್ನೂ ಬಿಂಬಿಸುತ್ತವೆ. ಅತ್ತಿಲ್ಲಾ, ವಿನ್ನಿ, ಮುಲ್ಲ ನಾಸಿರುದ್ದೀನ್, ಕನ್ಪ್ಯೂಶಿಯಸ್, ಯೇಸುಕ್ರಿಸ್ತರಂತಹ ಪೌರಾಣಿಕ, ಚಾರಿತ್ರಿಕ ವ್ಯಕ್ತಿಗಳಲ್ಲಿ ಹಾಗೂ ಜೆನ್, ತಾವೋ, ಕಬಾಲಾ, ಬೈಬಲ್, ಭಗವದ್ಗೀತೆ, ಸೂಫಿತತ್ವ, 'ಇತ್ಯಾದಿ, ಗ್ರಂಥಗಳಲ್ಲಿ ಕಾಣಬರುವ ಆಡಳಿತಾತ್ಮಕ ಹಾಗೂ ನಾಯಕತ್ವದ ವಿಚಾರಗಳನ್ನು ಪ್ರತಿಪಾದಿಸುವುದು ಇತ್ತೀಚಿನ ರೂಢಿ. ಈ ಕೃತಿಯ ಲೇಖಕರು ತಾವು ಸಂಗ್ರಹಿಸಿದ ಬೀರಬಲ್ಲನ ಕೆಲವು ಕಥೆಗಳನ್ನು ಪುನರ್ ಸೃಷ್ಟಿಸಿ ಅವುಗಳಲ್ಲಿ ಹುದುಗಿರುವ ಆಡಳಿತಾತ್ಮಕ ನೀತಿಗಳನ್ನು ಗುರುತಿಸಿದ್ದಾರೆ. ಇಲ್ಲಿ ಪ್ರತಿಯೊಂದು ಕಥೆಯನ್ನೂ ಎರಡು ಭಾಗಗಳಾಗಿ ವಿಂಗಡಿಸಿ, ಮೊದಲ ಭಾಗದಲ್ಲಿ ಸಮಸ್ಯೆಯನ್ನೂ ಎರಡನೆಯ ಭಾಗದಲ್ಲಿ ಆ ಸಮಸ್ಯೆಗೆ ಬೀರ್‌ಬಲ್ ಒದಗಿಸಿರುವ ಪರಿಹಾರವನ್ನೂ ಸೂಚಿಸಲಾಗಿದೆ.
ಓದುಗರು ಈ ಕೃತಿಯನ್ನು ಓದುವ ಮೊದಲು ಒಂದು ಕ್ಷಣ ತಮ್ಮದೇ ಪರಿಹಾರವನ್ನು ಚಿಂತಿಸಬೇಕೆಂಬುದೇ ಈ ಲೇಖಕರ ಆಶಯ, ಅವರು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪರಿಹಾರಗಳನ್ನು ಚಿಂತಿಸಿದ ನಂತರವೇ ಬೀರ್‌ಬಲ್ ಒದಗಿಸಿರುವ ಪರಿಹಾರವನ್ನು ಓದುವುದು ಉತ್ತಮ. ಓದುಗರು ತಮ್ಮದೇ ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕಾದರೆ ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಲೂಯಿಸ್, ಎಸ್.ಆರ್.ವಾಸ್ ದಶಕಗಳ ಕಾಲ ವಿಶೇಷ ಲೇಖನಗಳನ್ನು ಬರೆದು ಪ್ರಕಟಿಸಿದವರು, ಕಾರ್ಪೊರೇಟ್ ಕ್ಷೇತ್ರದಲ್ಲಿ ಅನೇಕ ವರ್ಷ ಸೇವೆಸಲ್ಲಿಸಿರುವ ಅವರು ಹನ್ನೆರಡು ಗ್ರಂಥಗಳನ್ನೂ 500ಕ್ಕೂ ಹೆಚ್ಚು ಲೇಖನಗಳನ್ನೂ ರಚಿಸಿದ್ದಾರೆ.
ಅನಿತಾ ಎಸ್.ಆರ್.ವಾಸ್ 'ದಿ ಜಾಯ್, ಆಫ್ ನ್ಯಾಚ್ಯುರಲ್ ಲೀವಿಂಗ್' ಎಂಬ ಕೃತಿಯ ಸಹ-ಲೇಖಕಿ, ವೈಯಕ್ತಿಕ ಮಾರ್ಗದರ್ಶನ ಮತ್ತು ಪ್ರಸಾಧನ ಕಲೆಗಳ ಬಗೆಗೆ ಅವರಿಗೆ ವಿಶೇಷ ಪರಿಶ್ರಮವುಂಟು. ಜೊತೆಗೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಪೋರ್ಚುಗೀಸ್ ಭಾಷೆಗಳನ್ನು ಕಲಿಸುವವರು,
ಇಂಗ್ಲಿಷ್ ಮೂಲದ ಈ ಕೃತಿಯನ್ನು ಸೊಗಸಾಗಿ ಅನುವಾದಿಸಿರುವವರು ಬಿ.ಎಸ್, ಜಯಪ್ರಕಾಶ ನಾರಾಯಣ, ಅವರು ಪ್ರಸಿದ್ಧ ಲೇಖಕರು ಮತ್ತು ಪತ್ರಕರ್ತರು,
ವಸಂತ ಪ್ರಕಾಶನ

Share
Subscribe to our emails
Subscribe to our mailing list for insider news, product launches, and more.