Usha Navarathnaram
ಸಮರ್ಪಣೆ
ಸಮರ್ಪಣೆ
Publisher - ಹೇಮಂತ ಸಾಹಿತ್ಯ
- Free Shipping Above ₹250
- Cash on Delivery (COD) Available
Pages - 280
Type - Paperback
ಮಾರನೆಯ ದಿನ ಪೇಪರಿನಲ್ಲಿ ಒಂದು ಸಣ್ಣ ಪ್ರಕರಣದಂತೆ ಸಮಾಚಾರ ಬಂದಿತ್ತು. 'ಕಾರಿನ ಅಪಘಾತ. ಇಬ್ಬರ ಸಾವು. ಪ್ರೊ. ಮೂರ್ತಿಯವರ ಸೊಸೆಗೆ ಕಾರು ಕಲಿಸುತ್ತಿದ್ದ ಅವರ ಮಗನ ಪಾರ್ಟ್ನರ್ ಆಗಿದ್ದ ಮಗಳ ಮೈದುನ ಇಬ್ಬರೂ ಅಪಘಾತವಾದ ಸ್ಥಳದಲ್ಲೇ ಮೃತಪಟ್ಟರು. ಕಾರು ಗುರುತು ಹಿಡಿಯಲು ಆಗದಷ್ಟು ಜಖಂ ಆಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೇಪರನ್ನು ಕೈಯಲ್ಲಿ ಹಿಡಿದಿದ್ದ ಮುರಳಿಯ ಕಣ್ಣಿನ ಮುಂದೆ ಸರಳಳ ಅರಸಿನ ಕುಂಕುಮ ಹೂವುಗಳಿಂದ ಅಲಂಕರಿಸಿದ್ದ ಮುಖ, ಭದ್ರವಾಗಿ ಮುಚ್ಚಿದ್ದ ಕಣ್ಣು, ಏನೋ ಹೇಳಲು ಅರೆತೆರೆದಿದ್ದ ಬಾಯಿ ತೇಲಿಬಂತು. ಕಣ್ಣಿನಿಂದ ಎರಡು ಹನಿ ಉರುಳಿತು. ಎಲ್ಲಾ ವಿಷಯ ತಿಳಿದು ಯಮುನಾಬಾಯಿ, ನಾಗಮ್ಮ, ಜಾನಕೀಬಾಯಿ, ಸುರೇಶ, ಸುಶೀಲ ಓಡಿ ಬಂದಾಗ ಮನೆಯ ಒಳಗೆ ಬಂದೊಡನೆಯೇ ಕೇಳಿಬಂದುದು ಮುರಳಿಯ ವೇಣುಗಾನ.
“ಅವ್ನು ಹುಚ್ಚನ ಹಾಗೆ ಆಗಿಹೋಗಿದ್ದಾನೆ. ಬಾಗಿಲು ಹಾಕಿಕೊಂಡು ಬೆಳಗಿನಿಂದ, ಆ ಶಹಾನಾರಾಗ ಬಾರಿಸ್ತಾ ಕೂತುಬಿಟ್ಟಿದ್ದಾನೆ." ಸುಲೋಚನ ಸೆರಗಿನಿಂದ ಕಣ್ಣೂರಸಿಕೊಂಡರು. "ಸರಳ ಅಂದ್ರೆ ಪ್ರಾಣ ಬಿಡೋನು. ಮಹಾ ಸ್ವಾಭಿಮಾನಿ ಅವ್ನು...ಏನೋ ಗ್ರಹಚಾರ ಆಗಬಾರದ್ದು ಆಗಿಹೋಯಿತು."
Share
Subscribe to our emails
Subscribe to our mailing list for insider news, product launches, and more.