Skip to product information
1 of 2

Yashawantha Chittala

ಸಮಗ್ರ ಕಥೆಗಳು 1

ಸಮಗ್ರ ಕಥೆಗಳು 1

Publisher -

Regular price Rs. 799.00
Regular price Rs. 799.00 Sale price Rs. 799.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 688

Type - Hardcover

'ಚಿತ್ತಾಲರ ಸಾಹಿತ್ಯಕ ಜೀವನದಲ್ಲಿ ಒಂದು ಮೈಲಿಗಲ್ಲು!'

...ಈ ಸಣ್ಣ ಕಥೆಗಳು ಅಭ್ಯಾಸಯೋಗ್ಯವಾದ, ಮತ್ತೆ ಮತ್ತೆ ಓದಿ ತಿಳಿಯಬೇಕಾದಷ್ಟು ಘನತೆ ಸಾಂದ್ರತೆಗಳುಳ್ಳ ಕೃತಿಗಳು; ಕೆಲವು ವಿಷಯಗಳಲ್ಲಿ ಕನ್ನಡಕ್ಕೆ ಅಪೂರ್ವ ಎನ್ನಿಸುವಂಥ ಕಾಣಿಕೆಗಳು... ಈ ಕತೆಗಳ ಭಾಷೆಯಲ್ಲಿ ಇನ್ನೂ ಎಲ್ಲೂ ಕಾಣಲು ಸಿಗದ ಒಂದು ಆತ್ಮೀಯತೆ, ಸಹಜತೆ, ಮಣ್ಣಿನ ವಾಸನೆ ಇದೆ...

-ಗೋಪಾಲಕೃಷ್ಣ ಅಡಿಗ

('ಆಟ'ಕ್ಕೆ ಬರೆದ ಮುನ್ನುಡಿಯಲ್ಲಿ)

ಗೋಪಾಲಕೃಷ್ಣ ಅಡಿಗರ ಕಾವ್ಯ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಮುಖ್ಯ ಪ್ರವಾಹಗಳನ್ನು ಪ್ರತಿನಿಧಿಸಿದರೆ ಚಿತ್ತಾಲರ ಕತೆಗಳು ಈ ಕಾರ್ಯವನ್ನು ಕಥಾಸಾಹಿತ್ಯದ ಕ್ಷೇತ್ರದಲ್ಲಿ ನೆರವೇರಿಸುತ್ತವೆ. ಚಿತ್ತಾಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರೆತದ್ದು ಅವರ 'ಕತೆಯಾದಳು ಹುಡುಗಿ'ಗಾದರೂ ಈ ಗೌರವ ಅವರ ಒಟ್ಟೂ ಸಾಧನೆಯ ಮೇಲೆ ಯೋಗ್ಯತೆಯ ಮುದ್ರೆಯೊತ್ತಿದೆ ಎಂದು ಹೇಳಬೇಕು.

- ಜಿ. ಎಸ್. ಆಮೂರ್

('ಚಿತ್ತಾಲರ ಕತೆಗಳು' ಇದರ ವಿಮರ್ಶೆಯಲ್ಲಿ)

ಹನೇಹಳ್ಳಿಯು ಚಿತ್ತಾಲರ ಕಥಾಸಾಹಿತ್ಯದ ಅತ್ಯಂತ ಪ್ರಮುಖ ಪಾತ್ರವಾಗಿದೆ. ಅವರ ಕಥಾಲೋಕದಲ್ಲಿ ಹನೇಹಳ್ಳಿಯಿಲ್ಲದ ಜಾಗವಿಲ್ಲ, ಬಹುತೇಕ ಕಥೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಅನೇಕ ಕಡೆ ಹೆಸರನ್ನೇ ಎತ್ತದಿರುವಾಗಲೂ ಅಪ್ರತ್ಯಕ್ಷವಾಗಿ ಹನೇಹಳ್ಳಿ ಇದೆ. ಪ್ರಜ್ಞೆಯಾಗಿ, ಮೌಲ್ಯವಾಗಿ, ಅಳತೆಗೋಲಾಗಿ ಇದೆ... ಮೊದಮೊದಲ ಕತೆಗಳಲ್ಲಿ ವಾಸ್ತವ ಪ್ರದೇಶದಂತೆ ತೋರಿದ ಹನೇಹಳ್ಳಿಯು ಬರಬರುತ್ತ ಪಡೆದುಕೊಂಡ ರೂಪಕದ ಆಕಾರವು ಅತ್ಯಂತ ವಿಶಾಲವೂ ವಿಶ್ವಾತ್ಮಕವೂ ಆಗಿದೆ. ಈ ಒಂದು ಬಿಂದುವಿನಲ್ಲಿ ನಿಂತು ಜಗತ್ತನ್ನು ಅದರ ನಾನಾ ಆಯಾಮಗಳಲ್ಲಿ ನೋಡಲು ಅವರಿಗೆ ಅನುವು ಮಾಡಿಕೊಟ್ಟಿದೆ.

-ವಿವೇಕ ಶಾನಭಾಗ

('ಪುಟ್ಟನ ಹೆಜ್ಜೆ ಕಾಣೋದಿಲ್ಲಾ' ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)