T. S. Goravara
ರೊಟ್ಟಿ ಮುಟಗಿ
ರೊಟ್ಟಿ ಮುಟಗಿ
Publisher -
- Free Shipping Above ₹250
- Cash on Delivery (COD) Available
Pages - 71
Type - Paperback
ಡಿ.ಎಚ್. ಲಾರೆನ್ಸ್ ತನ್ನ 'ಮಾರ್ನಿಂಗ್ಸ್ ಇನ್ ಮೆಕ್ಸಿಕೊ' ಎಂಬ ಪುಸ್ತಕದಲ್ಲಿ ಹಳ್ಳಿಯ ಸಂತೆಯಲ್ಲಿ ತುಂಬಿ ತುಳುಕುತ್ತಿರುವ ಹಣ್ಣುಗಳನ್ನು, ಹೂಬಿಟ್ಟ ಗಿಡಗಳುಳ್ಳ ಅಂಗಳವನ್ನು, ಮಣ್ಣಿನ ಗೋಡೆಯ ಮೇಲೆ ಆಡುತ್ತಿರುವ ಬಿಸಿಲನ್ನು ವರ್ಣಿಸುವ ಮೂಲಕ ವಿವಿಧ ಭಾವನೆಗಳನ್ನು ಹೊಮ್ಮಿಸುವ ವಿವರಗಳನ್ನು ಒದಗಿಸುತ್ತಾನೆ. ಮೆಕ್ಸಿಕೋದ ಮೂಲ ನಿವಾಸಿ ಇಂಡಿಯನ್‌ರ ಜೀವನ ವಿಧಾನದಿಂದ ಪ್ರಭಾವಿತನಾಗುವ ಅವನು ಆ ಜನರದು ಬಿಳಿಯರಿಗೆ ಚಿರಪರಿಚಿತವಾದ ಮನಃಸ್ಥಿತಿಗಿಂತ ತೀರ ಭಿನ್ನವಾದ ಮನಃಸ್ಥಿತಿ. ಆದ್ದರಿಂದಲೇ ಅವರು ಪರಸ್ಪರರನ್ನು ಅರಿತುಕೊಳ್ಳಲಾರರು ಎನ್ನುತ್ತಾನೆ. ಗೊರವರ ಅವರು ಕಟ್ಟಿ ಕೊಡುವ ಜೀವನ ವಿಧಾನವೂ ತೀರ ಭಿನ್ನವಾಗಿರುವುದರಿಂದಲೇ ಅವರು ವಿಭಿನ್ನ ವಿವರಗಳ ಮೂಲಕವೇ ನಮ್ಮ ಭಾವಕೋಶವನ್ನು ಪ್ರವೇಶಿಸುತ್ತಾರೆ.
-ಎಸ್. ದಿವಾಕರ್
ಪ್ರತಿಯೊಬ್ಬ ಸಾರ್ಥಕ ಬರಹಗಾರರಂತೆ ಗೊರವರ್ ಕೂಡ ತಮ್ಮ ಈ ಕೃತಿಯಲ್ಲಿ ಪ್ರಯೋಗಾತ್ಮಕ ಕ್ರಿಯಾಶೀಲತೆ ತೋರಿಸುತ್ತಾರೆ. ಗಟ್ಟಿ ಕಥಾಹಂದರವನ್ನು ಅವಲಂಬಿಸದೆಯೂ ತನ್ನ ವರ್ಣನೆಗಳ ಸಾಂದ್ರತೆಯಿಂದ ಓದುಗರ ಆಸಕ್ತಿಯನ್ನು ಅಂತ್ಯದವರೆಗೂ ಉಳಿಸಿಕೊಳ್ಳುವ ಈ ಕಾದಂಬರಿ, ಪಾರಂಪರಿಕವಾಗಿ ನಾವು ಒಳ್ಳೆಯ ಕತೆಯಲ್ಲಿ ಕಾಣಬಯಸುವ ಸಂಘರ್ಷ, ಪಾತ್ರ ಪ್ರಸ್ತುತಿ, ವಸ್ತು, ಕ್ಲೈಮಾಕ್ಷ್, ದಿನೂಮಾ ಇಂತಹ ಅಂಶಗಳ ಸಹಾಯವಿಲ್ಲದೇ, ಒಂದು ಪರಿಣಾಮಕಾರೀ ಕಾದಂಬರಿಯಾಗಿದೆ.
-ಕಮಲಾಕರ ಕಡವೆ
Share
Subscribe to our emails
Subscribe to our mailing list for insider news, product launches, and more.