Translated by Samyukta Puligal
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಈ ಪುಸ್ತಕದ ವಿಷಯ ಮಹತ್ವದ್ದು. ಬಹುತ್ವದ ಪರಿಕಲ್ಪನೆಯು ತೆಳುವಾಗುತ್ತಿರುವ ಈ ಕಾಲಘಟ್ಟದಲ್ಲಿ ರೆಬೆಲ್ ಸುಲ್ತಾನರು ಒಂದು ಪ್ರಮುಖ ಪುಸ್ತಕವಾಗಿ ನಿಲ್ಲುತ್ತದೆ. ಭಾರತದ ಇತಿಹಾಸವು ಎಂದಿಗೂ ಕಪ್ಪು-ಬಿಳುಪಿನ ಚೌಕಟ್ಟಾಗಿರಲಿಲ್ಲ. ಬದಲಾಗಿ ವಿವಿಧ ಧರ್ಮಗಳ, ಪದ್ಧತಿಗಳ, ರಾಜಕೀಯ, ಸಾಮಾಜಿಕ ರಚನೆಗಳ ಮಿಶ್ರಣದ ವರ್ಣಮಯ ಸ್ಥಳವಾಗಿತ್ತು ಎಂಬುದನ್ನು ಈ ಪುಸ್ತಕವು ವೃತ್ತಾಂತಗಳ ಸಮೇತವಾಗಿ ನಿರೂಪಿಸುತ್ತದೆ. ಒಬ್ಬ ಹಿಂದೂ ದೊರೆಯು ರಾಜಕೀಯ ಕಾರಣಗಳಿಗಾಗಿ, ಮುಸಲ್ಮಾನರ ಕುಟುಂಬದೊಂದಿಗೆ ವಿವಾಹ ಸಂಬಂಧ ಬೆಸೆದ ಕಥೆಗಳಿವೆ, ಬ್ರಾಹ್ಮಣ್ಯ ಮೂಲದ ವ್ಯಕ್ತಿಯು ಮುಸಲ್ಮಾನ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಉಲ್ಲೇಖಗಳಿವೆ. ಗುಲಾಮರು ದೊರೆಗಳಾದ, ದೊರೆಗಳು ರಸ್ತೆಗಿಳಿದು ಪಲಾಯನಗೈದಂತಹ ಹಲವಾರು ವಿವರಗಳು ಇವೆ. ಮುಸಲ್ಮಾನ ದೊರೆಗಳು ಹಿಂದೂ ದೇವರ ಆರಾಧಕರಾಗಿದ್ದ ಚಿತ್ರಣಗಳಿವೆ. ಮುಸಲ್ಮಾನ ಸುಲ್ತಾನರ ಕ್ರೌರ್ಯದೊಂದಿಗೆ ಹಿಂದೂ ದೊರೆಗಳ ವಂಚನೆ, ಕ್ರೂರತ್ವದ ಪರಾಕಾಷ್ಠತೆಯ ಉದಾಹರಣೆಗಳೂ ಇವೆ. ಹಿಂದೂ, ಮುಸಲ್ಮಾನ ಎಂಬ ಪರಿಕಲ್ಪನೆಗಳು ರಾಜಕೀಯ ದಾಳಗಳಾಗಿತ್ತೇ ಹೊರತು, ಧಾರ್ಮಿಕ ಸಂಘರ್ಷಗಳಾಗಿರಲಿಲ್ಲ ಎಂಬ ವಿವರಗಳಿವೆ. ಈ ಎಲ್ಲಾ ಕುತೂಹಲಕಾರಿ ಮಾಹಿತಿಗಳಿಗೂ ಮೂಲವಾದ ಹಲವಾರು ಆಕರ ಗ್ರಂಥಗಳನ್ನು ಲೇಖಕರು ನಮೂದಿಸಿದ್ದಾರೆ. ಹೀಗೆ ಅನೇಕ ವಿಷಯಗಳ ಆಗರವಾದ ಈ ಪುಸ್ತಕವು ಒಳ್ಳೆಯ ಸಂಪನ್ಮೂಲ ವಸ್ತುವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಒಂದೇ ಕಾಲಮಾನದಲ್ಲಿ ನಡೆದಿರಬಹುದಾದ ಭಿನ್ನ ಸಾಮ್ರಾಜ್ಯಶಾಹಿಗಳ ಕಥೆಗಳು ಬೇರೆಬೇರೆ ಅಧ್ಯಾಯಗಳಾಗಿ ಕಾಣಿಸಿಕೊಂಡಿವೆ.
